ಊಟದ ಬಿಲ್ ಕೇಳಿದ್ದಕ್ಕೆ ಚಾಕು ಇರಿತ

| Published : Aug 23 2024, 01:09 AM IST

ಸಾರಾಂಶ

ಊಟದ ಬಿಲ್ ಕೇಳಿದ್ದಕ್ಕೆ ಚಾಕು ಇರಿತ

ಕುಣಿಗಲ್: ಮದ್ಯವ್ಯಸನಿಗಳು ಬಲವಂತವಾಗಿ ಊಟ ಪಡೆದು ನಂತರ ಬಿಲ್ ಕೇಳಿದಾಗ ಕ್ಯಾಶಿಯರ್ ಹಾಗೂ ಅಡುಗೆ ಭಟ್ಟನಿಗೆ ಚಾಕುವಿನಿಂದ ಇರಿದ ಘಟನೆ ತಾಲೂಕಿನ ಭಕ್ತರಹಳ್ಳಿ ಬಳಿ ರಾಜ್ಯ ಹೆದ್ದಾರಿ 33ರಲ್ಲಿ ಹೈವೇ ಟೂರಿಸ್ಟ್ ಡಾಭಾದಲ್ಲಿ ಬುಧವಾರ ತಡರಾತ್ರಿ ನಡೆದಿದೆ

ಹಲ್ಲೆ ನಡೆಸಿದ ಆರೋಪಿಗಳಾದ ಅರುಣ್ ಕುಮಾರ್, ಹನುಮಂತ, ಹನುಮಂತಯ್ಯ, ಅಂಜನ್ ಕುಮಾರ್‌, ದೇವರಾಜರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಡಿಹಳ್ಳಿ ಗ್ರಾಮದ ಅರುಣ ಕುಮಾರ, ಹನುಮಂತಯ್ಯ, ಹನುಮಂತ, ಎಂಬುವರು ತಡರಾತ್ರಿ 11:30 ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ಹೈವೇ ಟೂರಿಸ್ಟ್ ಡಾಬಾಗೆ ಹೋಗಿ ಊಟ ಕೇಳಿದ್ದಾರೆ. ಮದ್ಯವ್ಯಸನಿಗಳಾಗಿದ್ದ ಈ ಗುಂಪು ಊಟದ ನಂತರ ಬಿಲ್ ಕೇಳಿದ ಹಿನ್ನೆಲೆಯಲ್ಲಿ ಅಡುಗೆ ಸರಿ ಇಲ್ಲ ಎಂದು ಗಲಾಟೆ ಮಾಡಿ ಅಡುಗೆ ಭಟ್ಟ ಶರತ್ ಹಾಗೂ ಕ್ಯಾಶಿಯರ್ ಮಾದೇಶ ಇಬ್ಬರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಡಾಬಾದಲ್ಲಿ ಇದ್ದ ಹಲವಾರು ವಸ್ತುಗಳನ್ನು ಚಲ್ಲಾಪಿಲ್ಲಿಗೊಳಿಸಿ ಜಖಂಗೊಳಿಸಿದ್ದಾರೆ. ನಂತರ ಕುರುಡಿಹಳ್ಳಿ ಪಾಳ್ಯದ ದೇವರಾಜುನನ್ನು ಕರೆ ಮಾಡಿ ಕರೆಯಿಸಿಕೊಂಡು ಮತ್ತೊಮ್ಮೆ ಗಲಾಟೆ ಮಾಡಿದ್ದಾರೆ. ಈ ಸಂಬಂಧ ಘಟನಾ ವಿಡಿಯೋಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಗಾಯಗೊಂಡ ಕ್ಯಾಶಿಯರ್ ಮಾದೇಶ, ಅಡಿಗೆಭಟ್ಟ ಶರತ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.