ಅಂತರ್‌ ನೃತ್ಯಶಾಲಾ ಸ್ಪರ್ಧೆಯಲ್ಲಿ ತೇಜೋಮಯಿ ಗದ್ದಿಗೆ ಪ್ರಥಮ ಸ್ಥಾನ

| Published : Aug 23 2024, 01:09 AM IST

ಸಾರಾಂಶ

ಬೆಂಗಳೂರು: ನಗರದ ಮಲ್ಲೇಶ್ವರದ ಎಂಎಲ್‌ಎ ಕಾಲೇಜು ಸಭಾಗಂಣದಲ್ಲಿ ಭಾನುವಾರ ನಡೆದ ನಾಟ್ಯೋತ್ಸವ-2024ರ ಅಂತರ್‌ ನೃತ್ಯಶಾಲಾ ಸ್ಪರ್ಧೆಯಲ್ಲಿ ಹಂಪಿನಗರದ ಶ್ರೀ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ತೇಜೋಮಯಿ ಗದ್ದಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಬೆಂಗಳೂರು: ನಗರದ ಮಲ್ಲೇಶ್ವರದ ಎಂಎಲ್‌ಎ ಕಾಲೇಜು ಸಭಾಗಂಣದಲ್ಲಿ ಭಾನುವಾರ ನಡೆದ ನಾಟ್ಯೋತ್ಸವ-2024ರ ಅಂತರ್‌ ನೃತ್ಯಶಾಲಾ ಸ್ಪರ್ಧೆಯಲ್ಲಿ ಹಂಪಿನಗರದ ಶ್ರೀ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ತೇಜೋಮಯಿ ಗದ್ದಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್‌(ರಿ) ಸಹಯೋಗದೊಂದಿಗೆ ಸೇವಾ ಕಲ್ಯಾಣ ಚಾರಿಟೇಬಲ್‌ ಟ್ರಸ್ಟ್‌ ಆಯೋಜಿಸಿದ ನಾಟ್ಯೋತ್ಸವದಲ್ಲಿ ಸೇವಾ ಕಲ್ಯಾಣ ಚಾರಟೇಬಲ್‌ ಟ್ರಸ್ಟ್‌ನ ಸ್ಥಾಪನಾಧಿಕಾರಿ ರಾಜೀವ್‌.ಸಿ ಹಾಗೂ ಟ್ರಸ್ಟ್‌ನ ನಿರ್ವಹಣಾಧಿಕಾರಿ ಬದರಿನಾಥ ಕೆ.ಎಂ ಅವರು ಆಯ್ಕೆಯ ಪ್ರಮಾಣ ಪತ್ರ ನೀಡಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿನಿಗೆ ಮಾಗಡಿ ರಸ್ತೆಯ ಚೋಳರಪಾಳ್ಯದ ಶಿವಲೀಲಾ ಡ್ಯಾನ್ಸ್‌ ಆ್ಯಂಡ್‌ ಮ್ಯೂಸಿಕ್‌ ಅಕಾಡೆಮಿ ತರಬೇತುದಾರರಾದ ವಿದುಷಿ ನೇತ್ರಾವತಿ ಮಂಜುನಾಥ ಮಾರ್ಗದರ್ಶನ ನೀಡಿದ್ದಾರೆ. ಭಾರತಿ ವಿದ್ಯಾಲಯದ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ಸಿಬ್ಬಂದಿ ಅಭಿನಂದಿಸಿದ್ದಾರೆ.