ಸಾರಾಂಶ
ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮ ಸಮಾರಂಭದಲ್ಲಿ ಶ್ರೀಶೈಲ ಶ್ರೀಗಳ ಮಾತನಾಡಿ, ನಿಜಗುಣ ದೇವರಿಗೆ ಎಲ್ಲರನ್ನೂ ಪ್ರೀತಿಸುವ ಗುಣವಿದೆ ಎಂದರು.
ಕನ್ನಡಪ್ರ ವಾರ್ತೆ ಮೂಡಲಗಿ
ತನ್ನಂತೆ ಇತರರನ್ನು ನೋಡುವವನು ನಿಜವಾದ ಸಂತನಾಗುತ್ತಾನೆ. ನಿಜಗುಣ ದೇವರಿಗೆ ಎಲ್ಲರನ್ನೂ ಪ್ರೀತಿಸುವ ಗುಣವಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಹಾಸ್ವಾಮಿಗಳು ನುಡಿದರು.ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಸೋಮವಾರ ಜರುಗಿದ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾವು ಚಿಕ್ಕವ ಇರುವಾಗಿನಿಂದಲೂ ನೋಡುತ್ತಿದ್ದೇವೆ. ನಿಜಗುಣ ದೇವರು 30 ವರ್ಷದ ಹಿಂದೆ ಹೇಗಿದ್ದರೂ ಈಗಲೂ ಕೂಡಾ ಹಾಗೇ ಇದ್ದಾರೆ. ಕಾರಣ ಇವರಲ್ಲಿ ಬೇಧ-ಭಾವ ಇಲ್ಲ. ಎಲ್ಲರೂ ಒಂದೇ ಎಂದು ತಿಳಿದು ನಡೆಯುವ ಅಪರೂಪದ ಸಂತರು ಎಂದರು.
ಬೀದರಿನ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ನಿಜಗುಣ ದೇವರು ನಮ್ಮ ಪರಂಪರೆಯಲ್ಲಿಯೇ ಅಪರೂಪದ ವ್ಯಕ್ತಿ. ಇವರಿಗೆ ಪ್ರವಚನದ ಕಲೆ ಇದೆ. ಕವನ ಬರೆಯುವ ಹುಚ್ಚಿದೆ. ಬರೆದಿದ್ದನ್ನು ರಾಗ ಸಂಯೋಜಿಸಿ ಹಾಡುವ ಉತ್ಕಟ ಇದ್ದೇ ಇದೆ ಅದಕ್ಕಾಗಿಯೇ ಸಾವಿರಾರು ಗೀತೆಗಳನ್ನು ರಚಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು..ವೇದಿಕೆ ಮೇಲೆ ಶ್ರೀಮಠದ ನಿಜಗುಣ ದೇವರು, ಬೆಂಗಳೂರಿನ ವಿಭೂತಿಪೂರಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಷಷ್ಠಬ್ಧಿ ಸಂಭ್ರಮದ ಗೌರವಾಧ್ಯಕರು ಹಾಗೂ ಬೆಳಗಾವಿ-ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಎಂ.ಚಂದರಗಿಯ ವೀರಭದ್ರಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಅನ್ನದಾನಿ ಅಪ್ಪಣ್ಣ ಮಹಾಸ್ವಾಮಿಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು. ಗಣೇಶ ಮಹಾರಾಜರು ನಿರೂಪಿಸಿದರು.