ಟ್ರಾಕ್ಟರ್- ಕಾರಿನ ನಡುವೆ ಮುಖಾಮುಖಿ ಡಿಕ್ಕಿ

| Published : Oct 14 2025, 01:00 AM IST

ಸಾರಾಂಶ

ಕಡೂರು, ತಾಲೂಕಿನ ಮಚ್ಚೇರಿ ಬಳಿಯ ನಾಯಿಸಾಡ್ಲಿ ಸೇತುವೆ ಬಳಿ ಟ್ರಾಕ್ಟರ್ ಮತ್ತು ಕಾರಿನ ನಡುವೆ ಸೋಮವಾರ ಮುಖಾಮುಖಿ ಢಿಕ್ಕಿಯಾಗಿ ಎರಡು ವಾಹನಗಳು ಢಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಕನ್ನಡಪ್ರಭ ವಾರ್ತೆ,ಕಡೂರು

ತಾಲೂಕಿನ ಮಚ್ಚೇರಿ ಬಳಿಯ ನಾಯಿಸಾಡ್ಲಿ ಸೇತುವೆ ಬಳಿ ಟ್ರಾಕ್ಟರ್ ಮತ್ತು ಕಾರಿನ ನಡುವೆ ಸೋಮವಾರ ಮುಖಾಮುಖಿ ಢಿಕ್ಕಿಯಾಗಿ ಎರಡು ವಾಹನಗಳು ಢಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಟ್ರಾಕ್ಟರ್ ಚಾಲಕನಿಗೆ ಗಾಯವಾಗಿದ್ದು, ಕಡೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಡೂರು ಕಡೆಯಿಂದ ತೆರಳುತ್ತಿದ್ದ ಕಾರು ನಾಯಿಸಾಡ್ಲಿ ತಿರುವಿನಲ್ಲಿ ಎದುರಿಗೆ ಬಂದ ಟ್ರಾಕ್ಟರ್ ಢಿಕ್ಕಿಯಾಗಿದೆ. ಟ್ರಾಕ್ಟರ್ ಚಾಲಕ ವಿನಯ್ ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಕ್ಟರ್‌ನ ದೊಡ್ಡಚಕ್ರಗಳು ಮುರಿದು ಹೋಗಿವೆ. ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆ ಬದಿಯಲ್ಲಿ ಜಲಜೀವನ್ ಯೋಜನೆ ಪೈಪ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಅಪಘಾತ ನಡೆದ ಸ್ಥಳದಲ್ಲಿ ಕಾಮಗಾರಿ ಕೆಲಸ ಮುಗಿದಿದ್ದರೂ ಅಲ್ಲಿ ಮಣ್ಣನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಯಾಗಿದೆ. ಇಲ್ಲಿನ ತಿರುವುಗಳಲ್ಲಿ ದಟ್ಟವಾಗಿ ಗಿಡಗಂಟಿಗಳು ಬೆಳೆದಿದ್ದು, ಎದುರಿನಿಂದ ಬರುವ ವಾಹನಗಳು ಕಾಣದಿ ರುವುದರಿಂದ ಅಪಘಾತಗಳ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ. ಸಂಬಂದಿಸಿದ ಅಧಿಕಾರಿಗಳು ಗಿಡಗಂಟಿಗಳ ತೆರವಿನ ಕಾರ್ಯಚರಣೆ ನಡೆಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ. 13ಕೆಡಿಆರ್3 (ಕಡೂರಿನ ನಾಯಿಸಾಡ್ಲಿ ಸೇತುವೆ ಬಳಿ ಟ್ರಾಕ್ಟರ್ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿರುವುದು.