ಸಾರಾಂಶ
ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಪರೋಪಕಾರಂ ಇದಂ ಸೇವಾ ಯೋಜವೆಯ ಪ್ರಥಮ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಅಪತ್ಬಾಂಧವ ಈಶ್ವರ್ ಮಲ್ಪೆ ಹಾಗೂ ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಲ್ಲಿನ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಪರೋಪಕಾರಂ ಇದಂ ಸೇವಾ ಯೋಜವೆಯ ಪ್ರಥಮ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಇಲ್ಲಿನ ಅಯ್ಯಪ್ಪ ನಗರದ ವಿಶೇಷ ಮಕ್ಕಳ ವಿಜೇತ ಶಾಲೆಯಲ್ಲಿ ನೆರವೇರಿತು.ಕಾರ್ಯಕ್ರಮದಲ್ಲಿ ನಿಸ್ವಾರ್ಥ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಅಪತ್ಬಾಂಧವ ಈಶ್ವರ್ ಮಲ್ಪೆ ಹಾಗೂ ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಸಂಸ್ಥೆಯ ೧೦ನೇ ಸೇವಾ ಯೋಜನೆಯ ಅಂಗವಾಗಿ ಸವಿನ್ ಎಂಬ ಮಗುವಿನ ಚಿಕಿತ್ಸೆಗೆ ೨೫ ಸಾವಿರ ರು.ಗಳ ಸಹಾಯ ಧನವನ್ನು ಹಸ್ತಾಂತರಿಸಲಾಯಿತು.ಅಲ್ಲದೆ ವಿಜೇತ ವಿಶೇಷ ಶಾಲೆಗೆ ದೇಣಿಗೆ ನೀಡಿ ಪ್ರೋತ್ಸಾಹಿಸುವುದರೊಂದಿಗೆ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಹಾಗೂ ಅವಶ್ಯಕ ದಿನಸಿ ವಸ್ತುಗಳನ್ನು ಸಂಸ್ಥೆಯ ಪ್ರಮುಖರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪುತ್ತೂರಿನ ಅಂಚೆ ಇಲಾಖೆಯ ಮಾರುಕಟ್ಟೆ ಪ್ರಬಂಧಕ ಗುರುಪ್ರಸಾದ್, ಮಿಥುನ್ ಶೆಟ್ಟಿ, ಮೂಡಬಿದ್ರೆಯ ಖ್ಯಾತ ವಕೀಲರಾದ ಜಯಪ್ರಕಾಶ್ ಭಂಡಾರಿ, ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಪ್ರಜ್ವಲ್ ಕುಲಾಲ್, ಸದಸ್ಯರಾದ ಲೀನಾ ಫೆರಾವ್, ಜ್ಞಾನ್ ಪ್ರಕಾಶ್ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.