ಸಾರಾಂಶ
ಭವಿಷ್ಯದಲ್ಲಿ ಅನೇಕ ಸವಾಲುಗಳು ಎದುರಾಗಲಿವೆ. ಅವು ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆ ಎಂಬ ಸವಾಲುಗಳು. ಭವಿಷ್ಯ ತನ್ನೊಳಗೆ ಏನೆಲ್ಲವನ್ನು ಹಿಡಿದಿಟ್ಟುಕೊಂಡಿದೆ ಎಂಬುದರ ಬಗ್ಗೆ ನನಗೆ ಮತ್ತು ನಿಮಗೆ ಯಾವುದೇ ಸುಳಿವಿಲ್ಲ.
ಪವರ್ ಪಾಯಿಂಟ್
ಶತ್ರುವಿನ ಬುದ್ಧಿ ಜೊತೆಗೂ ಇಂದು ಹೋರಾಡಬೇಕಿದೆ!
ಜೆನ್ ಝೀ ಎಂಬುದು ಡಿಜಿಟಲ್ ಜ್ಞಾನವುಳ್ಳ ಪೀಳಿಗೆ. ಅವರು ತಾಂತ್ರಿಕವಾಗಿ, ಸಾಮಾಜಿಕವಾಗಿ ಮತ್ತು ಜಾಗತಿಕವಾಗಿ ಮುಂದುವರಿದಿದ್ದಾರೆ. ಅಂತಹ ಶಕ್ತಿಶಾಲಿ ಪೀಳಿಗೆಗೆ ಶಿಸ್ತು ಮತ್ತು ಸರಿಯಾದ ಮಾರ್ಗದರ್ಶನ ದೊರೆತರೆ, ಭಾರತವು ಒಂದು ಕ್ಷಣದಲ್ಲಿ ಹಲವಾರು ತಲೆಮಾರುಗಳಷ್ಟು ಮುನ್ನಡೆಯಬಹುದು. ಜೆನ್ ಝೀಗಳು ಭಾರತವನ್ನು ಮುಂದಕ್ಕೆ ಕೊಂಡೊಯ್ಯುವ ಇಂಧನ.
-ಜ. ಉಪೇಂದ್ರ ದ್ವಿವೇದಿ, ಸೇನಾ ಮುಖ್ಯಸ್ಥ
ಭವಿಷ್ಯದಲ್ಲಿ ಅನೇಕ ಸವಾಲುಗಳು ಎದುರಾಗಲಿವೆ. ಅವು ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆ ಎಂಬ ಸವಾಲುಗಳು. ಭವಿಷ್ಯ ತನ್ನೊಳಗೆ ಏನೆಲ್ಲವನ್ನು ಹಿಡಿದಿಟ್ಟುಕೊಂಡಿದೆ ಎಂಬುದರ ಬಗ್ಗೆ ನನಗೆ ಮತ್ತು ನಿಮಗೆ ಯಾವುದೇ ಸುಳಿವಿಲ್ಲ. ಉದಾಹರಣೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಏನು ಮಾಡುತ್ತಿದ್ದಾರೆ? ನಾಳೆ ಅವರು ಏನು ಮಾಡಲಿದ್ದಾರೆ ಎಂಬುದು ಬಹುಶಃ ಅವರಿಗೇ ಗೊತ್ತಿಲ್ಲ. ಸವಾಲುಗಳು ಬಹಳ ವೇಗವಾಗಿ ಬರುತ್ತವೆ. ಹೇಗೆಂದರೆ, ನೀವು ಹಳೆಯ ಸವಾಲನ್ನು ಅರ್ಥಮಾಡಿಕೊಳ್ಳಲು ಯತ್ನಿಸುವ ವೇಳೆ ಹೊಸ ಸವಾಲು ಜನ್ಮ ತಾಳಿರುತ್ತದೆ. ಇದೇ ರೀತಿಯ ಭದ್ರತಾ ಸವಾಲುಗಳನ್ನು ನಮ್ಮ ಸೇನೆ ಎದುರಿಸುತ್ತಿದೆ. ಅದು ಗಡಿ, ಭಯೋತ್ಪಾದನೆ, ಪ್ರಾಕೃತಿಕ ವಿಕೋಪಗಳು, ಸೈಬರ್ ದಾಳಿ.. ಯಾವುದೇ ಇರಬಹುದು.
ಬಾಹ್ಯಾಕಾಶ ಸಮರ, ಉಪಗ್ರಹಗಳು, ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹಲವು ಹೊಸ ಸವಾಲುಗಳೂ ಈಗ ಸೃಷ್ಟಿಯಾಗಿವೆ. ಆಪರೇಷನ್ ಸಿಂದೂರದ ಸಮಯದಲ್ಲಿ ಕರಾಚಿ ಮೇಲೆ ದಾಳಿಯಾಗುತ್ತಿದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದು ಒಂದು ರೀತಿಯ ಮಾಹಿತಿ ಸಮರ. ಇಂತಹ ಹಲವು ಸುಳ್ಳುಸುದ್ದಿಗಳು ಬಂದವು, ಅವು ನಮಗೂ ಸುದ್ದಿಯಂತೆ ಕಾಣುತ್ತಿದ್ದವು. ಅವು ಎಲ್ಲಿಂದ ಬಂದವು? ಯಾರು ಅವನ್ನು ಸೃಷ್ಟಿ ಮಾಡಿದರು? ಈ ಎಲ್ಲ ಸವಾಲುಗಳನ್ನು ಎದುರಿಸಬೇಕಾದರೆ, ನಾವು ಭೂಮಿ, ಆಕಾಶ, ನೀರು ಮತ್ತು ಈ ಮೂರರ ಮೇಲೂ ಕೆಲಸ ಮಾಡಬೇಕು.
ಇಡೀ ದೇಶವನ್ನು ಒಗ್ಗೂಡಿಸಿದ ‘ಸಿಂದೂರ’:
ಆಪರೇಷನ್ ಸಿಂದೂರ ಕೇವಲ ಶತ್ರುಗಳನ್ನು ಮಣಿಸುವ ಉದ್ದೇಶ ಹೊಂದಿರಲಿಲ್ಲ. ಅದು ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ ಕೆಲಸವೂ ಆಗಿತ್ತು. ಪ್ರಧಾನಿ ಮೋದಿಯವರು ಈ ಕಾರ್ಯಾಚರಣೆಗೆ ‘ಸಿಂದೂರ’ ಎಂದು ಹೆಸರಿಡೋಣ ಎಂದಾಗ ನನಗೆ ಕಾರ್ಗಿಲ್ ಯುದ್ಧ ನೆನಪಾಯಿತು. ಸೇನೆ ಅದಕ್ಕೆ ‘ಆಪರೇಷನ್ ವಿಜಯ್’ ಎಂದು ಹೆಸರಿಟ್ಟಿತ್ತು. ವಾಯುಪಡೆ ಅದನ್ನು ‘ಆಪರೇಷನ್ ಸಫೇದ್ ಸಾಗರ್’ ಎಂದು ಕರೆದಿತ್ತು. ಈ ಸಲ ಯುದ್ಧಕ್ಕೆ ಸ್ವತಃ ಪ್ರಧಾನಿಗಳು ‘ಆಪರೇಷನ್ ಸಿಂದೂರ’ ಎಂದು ಹೆಸರಿಟ್ಟರು. ಹಾಗಾದರೆ ಅದರಿಂದಾದ ಬಹುದೊಡ್ಡ ಪ್ರಯೋಜನ ಏನು? ಇಡೀ ದೇಶ ‘ಸಿಂದೂರ’ ಎಂಬ ಒಂದು ಶಬ್ದದಡಿ ಒಂದಾಯಿತು. ಇದು ದೇಶಾದ್ಯಂತ ಭಾವನಾತ್ಮಕವಾಗಿ ಪ್ರತಿಧ್ವನಿಸಿತು.
ಯುದ್ಧದಲ್ಲಿ ಯಾವಾಗಲೂ ಒಂದು ಗಮನಾರ್ಹ ಅಪಾಯಕಾರಿ ಅಂಶವಿರುತ್ತದೆ. ನೀವು ಯುದ್ಧವನ್ನು ಆರಂಭಿಸಿದಾಗ ಅಥವಾ ಶತ್ರುವಿನ ದಾಳಿಗೆ ಎದೆಗೊಟ್ಟಾಗ, ಮುಂದೇನಾಗುತ್ತದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಅಲ್ಲಿ ಯಾವಾಗಲೂ ಅನಿಶ್ಚಿತತೆ ಇರುತ್ತದೆ. ನಾವು ಎಷ್ಟು ಸೈನಿಕರನ್ನು ಕಳೆದುಕೊಳ್ಳಲಿದ್ದೇವೆ, ಮುಂದೆ ಯಾವ ಹೆಜ್ಜೆಯನ್ನು ಇಡುವ ಅನಿವಾರ್ಯತೆ ಎದುರಾಗುತ್ತದೆ ಅಥವಾ ಎಷ್ಟು ಮಂದಿ ನಾಗರಿಕರು ತೊಂದರೆಗೆ ಒಳಗಾಗಲಿದ್ದಾರೆ ಎಂಬುದರ ಬಗ್ಗೆ ಯಾವ ಅಂದಾಜೂ ಇರುವುದಿಲ್ಲ. ಈ ಎಲ್ಲ ಸವಾಲುಗಳ ಹೊರತಾಗಿಯೂ, ಆಪರೇಷನ್ ಸಿಂದೂರದ ಅವಧಿಯಲ್ಲಿ, ನಮಗೆ ಬೆದರಿಕೆ ಒಡ್ಡಿದ ಯಾವುದೇ ವ್ಯವಸ್ಥೆಯ ಮೇಲೆ ನೇರವಾಗಿ ದಾಳಿ ಮಾಡಬೇಕು ಎಂದು ನಾವು ನಿರ್ಧಾರ ಮಾಡಿಬಿಟ್ಟಿದ್ದೆವು. ಶತ್ರು ಪ್ರದೇಶವನ್ನು ಪ್ರವೇಶಿಸುವುದಾದರು ಸಹ, ನಾವು 100 ಕಿಮೀ ಆಳದವರೆಗೆ ಹೋಗಿ ದಾಳಿ ಮಾಡಿದೆವು.
ಹೊಸತನಕ್ಕೆ ತೆರೆದುಕೊಳ್ಳುವ ಅಗತ್ಯ:
ಯುದ್ಧದ ವೇಳೆ ಸಶಸ್ತ್ರ ಪಡೆಗಳು ಬದಲಾವಣೆಯನ್ನು ಸ್ವೀಕರಿಸುತ್ತಿದ್ದವು. ನಾವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡೆವು. ಡ್ರೋನ್‌ಗಳನ್ನು ಬಳಸಲು ಸಿದ್ಧರಾದೆವು, ಸುಧಾರಿತ ಮದ್ದುಗುಂಡುಗಳು ಮತ್ತು ನಿಖರ ಕಾರ್ಯಾಚರಣೆಗಳನ್ನು ನಡೆಸಿದೆವು. ನಾವು ಈ ಎಲ್ಲ ಹೊಸತನಗಳಿಗೆ ಹೊಂದಿಕೊಂಡ ಕಾರಣ ವಿಜಯ ಸಾಧಿಸಿದೆವು. ಇಂದಿನ ಯುದ್ಧಗಳಲ್ಲಿ ನೆಲದ ಮೇಲಿನ ಶತ್ರುಗಳ ಜೊತೆ ಮಾತ್ರವಲ್ಲ, ಅವರ ಮನಸ್ಸುಗಳೊಂದಿಗೆ ಸಹ ಹೋರಾಡಬೇಕಾಗುತ್ತದೆ. ಅಂದರೆ ಯುದ್ಧದಲ್ಲಿ ನಮ್ಮ ಬುದ್ಧಿಶಕ್ತಿಯೂ ಬೇಕು, ಭಾಗವಹಿಸುವಿಕೆಯೂ ಬೇಕು.
ಉದಾಹರಣೆಗೆ, ಪಾಕಿಸ್ತಾನವು ಸುಳ್ಳುಸುದ್ದಿ ಮತ್ತು ವದಂತಿಗಳನ್ನು ಹರಡುತ್ತಿದ್ದಾಗ, ಸಿಕಂದರಾಬಾದ್‌ನ ಒಬ್ಬ ವ್ಯಕ್ತಿ, ‘ಸರ್, ನನಗೆ ಟ್ವೀಟರ್‌ನಲ್ಲಿ 3 ಲಕ್ಷ ಅನುಯಾಯಿಗಳಿದ್ದಾರೆ. ಏನು ಮಾಡಬೇಕೆಂದು ಹೇಳಿ - ನಾನು ಅವರ ಸುಳ್ಳುಸುದ್ದಿಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ಹೇಳಿದರು. ದೇಶಾದ್ಯಂತ ನಮಗೆ ಅಂತಹ ಅನೇಕ ಕೊಡುಗೆಗಳು ಬಂದವು. ದೇಶಭಕ್ತಿಯಿಂದ ಉತ್ಸುಕರಾದ ಕೆಲವರು, ‘ನಮ್ಮನ್ನು ಸೈನ್ಯಕ್ಕೆ ನೇಮಿಸಿಕೊಳ್ಳಿ’ ಎಂದು ಹೇಳಿದರು. ನಾವು ಅವರಿಗೆ, ‘ನಿಮಗೆ ತರಬೇತಿ ನೀಡುವ ಅಗತ್ಯವಿದೆ. ಆ ಕಾಲ ಇನ್ನೂ ಕೂಡಿಬಂದಿಲ್ಲ’ ಎಂದು ಹೇಳಬೇಕಾಯಿತು.
ಸಮ್ಮಿಲನಶೀಲ ಭಾರತೀಯ ಸಂಸ್ಕೃತಿ:
ನಮ್ಮ ಸಂಸ್ಕೃತಿಯು ಸಮ್ಮಿಲನಶೀಲ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹದ್ದು, ಅಂದರೆ ಯಾರೇ ಬಂದರೂ ನಾವು ಅವರನ್ನು ನಮ್ಮೊಳಗೆ ಒಬ್ಬರೆಂದು ಸ್ವೀಕರಿಸುತ್ತೇವೆ. ನಮ್ಮ ಬೇರುಗಳು ಆಳವಾಗಿವೆ. ನಮ್ಮ ಸಂಸ್ಕೃತಿ ಬಲಿಷ್ಠವಾಗಿದೆ. ಪ್ರತಿಯೊಂದು ಹಿನ್ನೆಲೆಯ ಜನರು ನಮ್ಮೊಂದಿಗೆ ಬೆರೆತಿದ್ದಾರೆ - ಅದು ಇಸ್ಲಾಂ, ಕ್ರಿಶ್ಚಿಯನ್ ಇರಬಹುದು ಅಥವಾ ವಿದೇಶದಿಂದ ತಂದ ಯಾವುದೇ ಇತರ ನಂಬಿಕೆಯನ್ನು ಪಾಲಿಸುವ ಜನರಿರಬಹುದು. ಅವರೆಲ್ಲರೂ ಭಾರತಕ್ಕೆ ಬಂದು, ಭಾರತೀಯ ನಾಗರಿಕತೆಯ ಭಾಗವಾದರು. ಇಷ್ಟೇ ಅಲ್ಲ, ಭಾರತವು ನಮ್ಮ ಸಂಸ್ಕೃತಿಯನ್ನು ಇತರರೊಂದಿಗೆ ಹಂಚಿಕೊಂಡಿತು. ಬೌದ್ಧಧರ್ಮ ಭಾರತದಿಂದ ಚೀನಾ, ಜಪಾನ್ ಮತ್ತು ಇಂಡೋನೇಷ್ಯಾಕ್ಕೂ ಹರಡಿತು.
ಭಾರತದ ಭವಿಷ್ಯಕ್ಕೆ ಜೆನ್ ಝೀ ಇಂಧನ:
‘ಜನರೇಷನ್ ಝಡ್’ (ಜೆನ್ ಝೀ) ಎಂಬುದು ಡಿಜಿಟಲ್ ಜ್ಞಾನವುಳ್ಳ ಪೀಳಿಗೆ. ಅವರು ತಾಂತ್ರಿಕವಾಗಿ ಮುಂದುವರಿದಿದ್ದಾರೆ. ಸಾಮಾಜಿಕವಾಗಿ ಜಾಗೃತವಾಗಿದ್ದಾರೆ ಮತ್ತು ಜಾಗತಿಕವಾಗಿ ಸಂಪರ್ಕ ಹೊಂದಿದ್ದಾರೆ. ಅವರಿಗೆ ಪ್ರಪಂಚದಾದ್ಯಂತದ ಮಾಹಿತಿಯ ಲಭ್ಯತೆಯಿದೆ. ಅಂತಹ ಶಕ್ತಿಶಾಲಿ ಪೀಳಿಗೆಗೆ ಶಿಸ್ತು ಮತ್ತು ಸರಿಯಾದ ಮಾರ್ಗದರ್ಶನ ದೊರೆತರೆ, ಭಾರತವು ಒಂದು ಕ್ಷಣದಲ್ಲಿ ಹಲವಾರು ತಲೆಮಾರುಗಳಷ್ಟು ಮುನ್ನಡೆಯಬಹುದು, ಹಲವು ಯುಗಗಳಿಗಿಂತ ಮುಂದೆ ಜಿಗಿಯಬಹುದು. ಹಾಗಾಗಿ ಮುಂಬರುವ ದಿನಗಳಲ್ಲಿ, ಜೆನ್ ಝೀ ಭಾರತವನ್ನು ಮುಂದಕ್ಕೆ ಕೊಂಡೊಯ್ಯುವ ಇಂಧನವಾಗಲಿದೆ ಎಂಬುದು ಸತ್ಯ.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))