ರಾಸುಗಳ ಆರೋಗ್ಯಕ್ಕಾಗಿ ಸರ್ಕಾರವು ಉಚಿತ ಬರಡು ರಾಸು ತಪಾಸಣೆ ಮತ್ತು ಚಿಕಿತ್ಸೆ-ಔಷಧಿ ವಿತರಣೆ ಅಭಿಮಾನ ಆರಂಭಿಸಿದೆ. ಎಲ್ಲಾ ರಾಸುಗಳ ಆರೋಗ್ಯ ತಪಾಸಣೆ ಮಾಲೀಕರ ಜವಾಬ್ದಾರಿಯಾಗಿದೆ. ಪಶು ಇಲಾಖೆಯಿಂದ ದೊರೆಯುವ ಆರ್ಥಿಕ ನೆರವು, ಸೌಲಭ್ಯ ಪಡೆದುಕೊಳ್ಳಬೇಕು.

ಮಂಡ್ಯ:

ಸಾಕು ಪ್ರಾಣಿ-ಪಕ್ಷಿಗಳ ಆರೋಗ್ಯ, ಆರೈಕೆ ಅತ್ಯವಶ್ಯಕ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಹೇಳಿದರು.

ತಾಲೂಕಿನ ಬೂದನೂರು ಗ್ರಾಮದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಪಶು ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ರೋಟರಿ ಸಕ್ಕರೆನಾಡು ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಜೀವಜಂತು ಕಲ್ಯಾಣ ದಿವಸ ಹಾಗೂ ಪ್ರಾಣಿ ಕಲ್ಯಾಣ ಪಾಕ್ಷಿಕ-ಉಚಿತ ಬರಡು ರಾಸು ತಪಾಸಣೆ ಮತ್ತು ಚಿಕಿತ್ಸೆ-ಔಷಧಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ರೈತರ ಉಪ ಆರ್ಥಿಕ ಜೀವನಾಡಿ ಹೈನುಗಾರಿಕೆಯಾಗಿದೆ. ರಾಸುಗಳ ಅನಾರೋಗ್ಯ ಕಂಡ ತಕ್ಷಣ ಪಶುವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಕೊಳ್ಳುಬೇಕು ಎಂದು ಸಲಹೆ ನೀಡಿದು.

ರಾಸುಗಳ ಆರೋಗ್ಯಕ್ಕಾಗಿ ಸರ್ಕಾರವು ಉಚಿತ ಬರಡು ರಾಸು ತಪಾಸಣೆ ಮತ್ತು ಚಿಕಿತ್ಸೆ-ಔಷಧಿ ವಿತರಣೆ ಅಭಿಮಾನ ಆರಂಭಿಸಿದೆ. ಎಲ್ಲಾ ರಾಸುಗಳ ಆರೋಗ್ಯ ತಪಾಸಣೆ ಮಾಲೀಕರ ಜವಾಬ್ದಾರಿಯಾಗಿದೆ. ಪಶು ಇಲಾಖೆಯಿಂದ ದೊರೆಯುವ ಆರ್ಥಿಕ ನೆರವು, ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ರೋಟರಿ ಸಕ್ಕರೆನಾಡು ಸಂಸ್ಥೆ ಅಧ್ಯಕ್ಷ ನಂದೀಶ್, ರೈತರು ಸಾಗುತ್ತಿರುವ ರಾಸುಗಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ, ಔಷಧೋಪಚಾರ ಲಭ್ಯವಾಗದಿದ್ದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಪಶುವೈದ್ಯಾಕಾರಿ ಡಾ.ಸತೀಶ್, ಡಾ.ಗೀತಾ, ಡಾ.ಮಿಥುನ್‌ರಾಜ್, ಜಾನುವಾರು ಅಕಾರಿ ರಘುರಾಜ್, ಪಶುಪರೀಕ್ಷಕರಾದ ಅನಿಲ್, ಸತೀಶ್, ಶಂಕರ್, ರೋಟರಿ ಸಕ್ಕರೆನಾಡು ಸಂಸ್ಥೆ ವಯಲಾಧ್ಯಕ್ಷ ಹೊನ್ನೇಗೌಡ, ಸಹಪಾಲಕ ಅಕ್ಷರಂ ವೆಂಕಟೇಶ್, ಕಾರ್ಯದರ್ಶಿ ಅರುಣ್‌ಕುಮಾರ್, ಕೃಷ್ಣ, ವಿನಯ್, ಶೇಖರ್ ಮತ್ತಿತರರಿದ್ದರು.ಫೆ.6 ರಿಂದ 29 ರವರೆಗೆ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರ

ಮಂಡ್ಯ: ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಫೆ.6ರಿಂದ 26 ರವರೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಫೆ.6ರಂದು ಮದ್ದೂರು ತಾಲೂಕು ಆಸ್ಪತ್ರೆ, ಫೆ.7ರಂದು ಕೆ.ಆರ್ ಪೇಟೆ ತಾಲೂಕು ಆಸ್ಪತ್ರೆ, ಫೆ.11ರಂದು ಪಾಂಡವಪುರ ಉಪ ವಿಭಾಗ ಆಸ್ಪತ್ರೆ, ಫೆ.12ರಂದು ನಾಗಮಂಗಲ ಸಾರ್ವಜನಿಕ ಆಸ್ಪತ್ರೆ, ಫೆ.18ರಂದು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ, ಫೆ.20 ರಂದು ಕೆ.ಆರ್ ಪೇಟೆ ತಾಲೂಕು ಆಸ್ಪತ್ರೆ, ಫೆ.21ರಂದು ಮದ್ದೂರು ತಾಲೂಕು ಆಸ್ಪತ್ರೆ, ಫೆ24 ರಂದು ಪಾಂಡವಪುರ ಉಪವಿಭಾಗ ಆಸ್ಪತ್ರೆ, ಫೆ.25ರಂದು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ, ಫೆ.26ರಂದು ನಾಗಮಂಗಲ ಸಾರ್ವಜನಿಕ ಆಸ್ಪತ್ರೆ, ಫೆ26 ರಂದು ಹಾಗೂ ಪ್ರತಿ ಮಂಗಳವಾರ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.