ರಾಸುಗಳ ಆರೋಗ್ಯಪಾಲನೆ ನಮ್ಮೆಲ್ಲರ ಕರ್ತವ್ಯ: ಶಾಸಕ ಶಾಸಕ ಮಂಜು

| Published : Oct 25 2024, 01:04 AM IST

ರಾಸುಗಳ ಆರೋಗ್ಯಪಾಲನೆ ನಮ್ಮೆಲ್ಲರ ಕರ್ತವ್ಯ: ಶಾಸಕ ಶಾಸಕ ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ರೈತರು ಕೃಷಿ ಜೊತೆಗೆ ಬಹುದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಅವಲಂಭಿಸಿದ್ದು, ಸಾಮಾನ್ಯವಾಗಿ ಎಲ್ಲರ ಬಳಿಯೂ ಜಾನುವಾರುಗಳಿವೆ. ಇವುಗಳು ರೈತ ಕುಟುಂಬಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದು, ರಾಸುಗಳಿಗೆ ಸಮಯಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆ, ನಿರ್ವಹಣೆ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರೈತರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ರಾಸುಗಳ ಆರೋಗ್ಯಪಾಲನೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.

ತಾಲೂಕಿನ ದೊಡ್ಡಗಾಡಿಗನಹಳ್ಳಿಯಲ್ಲಿ ಪಶುವೈದ್ಯಕೀಯ ಇಲಾಖೆ ಹಾಗೂ ಮಂಡ್ಯ ಹಾಲು ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ರೈತರು ಕೃಷಿ ಜೊತೆಗೆ ಬಹುದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಅವಲಂಭಿಸಿದ್ದು, ಸಾಮಾನ್ಯವಾಗಿ ಎಲ್ಲರ ಬಳಿಯೂ ಜಾನುವಾರುಗಳಿವೆ. ಇವುಗಳು ರೈತ ಕುಟುಂಬಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದು, ರಾಸುಗಳಿಗೆ ಸಮಯಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆ, ನಿರ್ವಹಣೆ ಮಾಡಬೇಕಿದೆ ಎಂದರು.

ಲಕ್ಷಾಂತರ ರು. ವ್ಯಯಿಸಿ ರಾಸುಗಳನ್ನು ಖರೀದಿಸಿದ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸುವ ಜೊತೆಗೆ ಅವುಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಎಲ್ಲರೂ ತಮ್ಮ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಪನಿರ್ದೇಶಕ ಸುರೇಶ್, ತಾಂತ್ರಿಕ ಸಹಾಯಕ ದಿನೇಶ್, ಜೆಡಿಎಸ್ ಮುಖಂಡ ಹುಲ್ಲೇಗೌಡ, ಡಾ. ಕೃಷ್ಣಮೂರ್ತಿ, ಡಾ.ಸಂಜು, ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್, ಡೈರಿ ಅಧ್ಯಕ್ಷೆ ವಿಜಯಾ ರಮೇಶ್, ಸಂಗೀತ, ಸಾವಿತ್ರಿರಾಜು, ವೆಂಕಟರಮಣ, ಪುಟ್ಟೇಗೌಡ, ಮಹದೇವೇಗೌಡ, ಪಶುಪರೀಕ್ಷಕ ಶ್ರೀನಾಥ್, ಧನಂಜಯ, ಜಾನುವಾರು ಅಧಿಕಾರಿ ಚಂದ್ರು ಸೇರಿ ಹಲವರಿದ್ದರು.