ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಉತ್ತಮ ಆಡಳಿತದ ಅಂಗವಾಗಿ ಬಿಜೆಪಿಯ ಬಾಗಲಕೋಟೆ ಕ್ಷೇತ್ರದ ಗ್ರಾಮೀಣ ಮಂಡಲ ಹಾಗೂ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಸಹಯೋಗದಲ್ಲಿ ರಾಂಪೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಆರೋಗ್ಯಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಜರುಗಿತು.

ವೈದ್ಯರಾದ ಡಾ.ಸಮೀರಕುಮಾರ ಕುಲಕರ್ಣಿ, ಡಾ.ಕಿರಣ ಬಿಜಾಪುರ, ಡಾ.ವಿಠ್ಠಲ ಕುಂಬಾರ, ಡಾ.ಜ್ಯೋತಿ ಉಳಿಗೇರ, ಡಾ.ವಿಶ್ವನಾಥ ಸೇರಿದಂತೆ ಅನೇಕ ವೈದ್ದರು ಸಿಬ್ಬಂದಿ ಜನರ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ 300 ಕ್ಕೂ ಹೆಚ್ಚು ಜನ ಭಾವಹಿಸಿದ್ದರು, ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಲಾಯಿತು. ಇದರ ಜೊತೆಗೆ ರಕ್ತದಾನ ಶಿಬಿರವೂ ನಡೆಯಿತು.ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ಮಹಾದೇವ ಹರ್ಜನ್, ಅಪ್ಪಾಜಿ ಜೋಳದ, ಮುದಕಣ್ಣ ಒಡೆಯರ, ದುಂಡೇಶ ಕೊಣ್ಣೂರ, ಮಳರಸ್ವಾಮಿ ವಂದಾಲ, ರವಿ ಹಕಾರ, ದುಂಡೇಶ ಕೊಣ್ಣೂರ, ಗ್ಯಾನಪ್ಪ ಕಾಳಗಿ, ಪಾನಪ್ಪ ವಡ್ಡರ, ಪರಶು ಕಂಬಾರ, ಸಂಗಮೇಶ ಮಂಕಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.