ಸಾರಾಂಶ
- ಮಲೇಬೆನ್ನೂರಲ್ಲಿ ರೋಗಿಗಳ ಆಪ್ತ ಸಮಾಲೋಚನಾ ಸಭೆ - - - ಮಲೇಬೆನ್ನೂರು: ಸಮಗ್ರ ಆರೋಗ್ಯ ತಪಾಸಣಾ ಅಭಿಯಾನದಲ್ಲಿ ಕುಷ್ಠರೋಗ, ಕ್ಷಯರೋಗ, ಎಚ್‌ಐವಿ ಸೋಕು, ವಾಂತಿ-ಭೇದಿ, ನೀರು ಪರೀಕ್ಷೆ, ೩೦ ವಯೋಮಿತಿಯ ಎಲ್ಲರಿಗೂ ಆರೋಗ್ಯ ಪರೀಕ್ಷೆ ನಡೆಸುವ ಗೃಹ ಆರೋಗ್ಯ ಯೋಜನೆಗೆ ಸರ್ಕಾರ ಶೀಘ್ರವೇ ಚಾಲನೆ ನೀಡಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಗ್ರ ಆರೋಗ್ಯ ಅಭಿಯಾನ ಹಾಗೂ ವಿವಿಧ ರೋಗಿಗಳ ಆಪ್ತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಮನೆಗಳಲ್ಲಿನ ವಂಶಪಾರಂಪರ್‍ಯ ಕಾಯಿಲೆಗಳ ಚರ್ಚೆ ನಡೆಸಲಾಗುತ್ತದೆ ಎಂದರು.ದಂತ ವೈದ್ಯೆ ಡಾ. ಗಜಾಲ ಮಾತನಾಡಿ, ಪುಟ್ಟ ಮಕ್ಕಳಿಗೂ ಬಾಯಿಹುಣ್ಣು ಆಗುತ್ತಿದೆ. ಪ್ರೌಢ ಹಂತದಲ್ಲೂ ತಂಬಾಕು ಸೇವನೆ ಹೆಚ್ಚಾಗುತ್ತಿದ್ದು, ಪೋಷಕರು ಮಕ್ಕಳ ಬಗ್ಗೆ ಗಂಭೀರ ಕಾಳಜಿ ತೆಗೆದುಕೊಳ್ಳಬೇಕಿದೆ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಬೇಕು, ನಾಲಿಗೆ ಸ್ವಚ್ಛಗೊಳಿಸಿಕೊಳ್ಳಬೇಕು. ಶುದ್ಧ ನೀರನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಂತಾನೋತ್ಪತ್ತಿ ಅಧಿಕಾರಿ ಡಾ ರೇಣುಕಾರಾಧ್ಯ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಅವಕಾಶವಿದೆ. ಈ ಆಸ್ಪತ್ರಗೆ ವೈದ್ಯರ ಕೊರತೆ ಬೇಗ ನೀಗಬಹುದು ಎಂದರು.ಆಪ್ತ ಸಮಾಲೋಚಕಿ ಶೈಲಜಾ ಮಾತನಾಡಿ, ಗರ್ಭಿಣಿ ಮಹಿಳೆಯರಿಗೆ ಎಚ್‌ಐವಿ ಪರೀಕ್ಷೆ ಮಾಡುವುದರಿಂದ ಮಗುವಿಗೆ ಬರತಕ್ಕ ಕಾಯಿಲೆಗಳ ತಡೆಗಟ್ಟಬಹುದು. ಎಚ್‌ಐವಿ ಕಿಟ್ ಕೊರತೆ ಕಂಡುಬಂದಿದೆ. ೨೦ ಶಾಲೆಗಳ ವಯಸ್ಕರ ಮಕ್ಕಳಿಗೆ ಏಡ್ಸ್ ಜಾಗೃತಿ ಕಾರ್ಯಕ್ರಮಗಳು ಯಶಸ್ಸು ಕಂಡಿವೆ. ಇಂದು ೧೫೭ ಎಚ್‌ಐವಿ, ೧೫೭ ರಕ್ತ ಒತ್ತಡ, ಸಕ್ಕರೆ ಕಾಯಿಲೆ ಹಾಗೂ ೨೦ ಸಾಮಾನ್ಯ ಪರೀಕ್ಷೆ ನಡೆಸಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಖಾದರ್, ಪುರಸಭಾ ಸದಸ್ಯ ಶಿವು, ಪುರಸಭೆ ಅಧಿಕಾರಿ ಉಮೇಶ್, ಶಿವರಾಜ್ ಕೂಸಗಟ್ಟಿ, ಉಮ್ಮಣ್ಣ, ನಾಗರಾಜ್, ನಳಿನಾ, ನೇತ್ರಾಧಿಕಾರಿ ಶ್ರೀರಾಮುಲು, ರಾಜು, ಆಶಾ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.- - - -೨೩ಎಂಬಿಆರ್೧:
ಕಾರ್ಯಕ್ರಮದಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಅಧಿಕಾರಿ ಡಾ ರೇಣುಕಾರಾಧ್ಯ ಮಾತನಾಡಿದರು.