ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಹಾಗೂ ಶ್ರೀ ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘದಿಂದ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಕ್ಕಗಂಗೂರು ಹಾಗೂ ಸುತ್ತಲಿನ ಗ್ರಾಮಸ್ಥರಿಗೆ ಮಾ.15ರಂದು ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣಾ ಶಿಬಿರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ಡಾ. ಈ.ವಿರೂಪಾಕ್ಷಪ್ಪ ಹೇಳಿದ್ದಾರೆ.

- ನೊಳಂಬ ವೀರಶೈವ ಲಿಂಗಾಯತ ಸಮಾಜ ಆಯೋಜನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಹಾಗೂ ಶ್ರೀ ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘದಿಂದ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಕ್ಕಗಂಗೂರು ಹಾಗೂ ಸುತ್ತಲಿನ ಗ್ರಾಮಸ್ಥರಿಗೆ ಮಾ.15ರಂದು ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣಾ ಶಿಬಿರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ಡಾ. ಈ.ವಿರೂಪಾಕ್ಷಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಗಂಗೂರು ಗ್ರಾಮದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳ ನುರಿತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಆರೋಗ್ಯ ತಪಾಸಣೆ ಶಿಬಿರ ನಡೆಯಲಾಗುವುದು ಎಂದರು.

ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ಡಾ. ಈ.ವಿರೂಪಾಕ್ಷಪ್ಪ, ಫಿಜಿಷಿಯನ್‌ ಡಾ. ಎಸ್.ಎಸ್.ಸಾಹುಕಾರ, ಚರ್ಮರೋಗ ತಜ್ಞ ಡಾ. ಬಿ.ಎಸ್. ಮಂಜುನಾಥ, ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ. ಕೆ.ಎಂ.ಅಜಿತ್, ಮಕ್ಕಳ ತಜ್ಞ ಡಾ.ಬಸವಕುಮಾರ, ಮಕ್ಕಳ ಹೃದಯ ತಜ್ಞ ಡಾ.ಅರುಣ್ ಕರೆಗೌಡ, ಶಸ್ತ್ರಚಿಕಿತ್ಸಾ ತಜ್ಞ ಕೆ.ಎನ್. ಪವನ್, ಕಣ್ಣಿನ ತಜ್ಞ ಡಾ. ಜಿ.ಯು.ಅಭಿಷೇಕ್, ಕೀಲು ಮೂಳೆ ತಜ್ಞರಾದ ಡಾ. ವಿ.ಅವಿನ್‌, ಕಿರಣ್ ಪಾಳೇದ, ದಂತ ವೈದ್ಯರಾದ ಡಾ. ಎನ್.ಎಸ್. ಶರತ್ ಶಿಬಿರ ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.

ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದ ನಿರ್ದೇಶಕ, ಕುಕ್ಕವಾಡದ ಶ್ರೀ ಆಂಜನೇಯ ಪ. ಹಿರಿಯ ಸಹಕಾರಿ ಸಂಘದ ನಿರ್ದೇಶಕ ಜಿ.ಎಂ.ರುದ್ರಗೌಡ ಮಾತನಾಡಿ, ಕಳೆದ ವರ್ಷ ಹರಿಹರ ಹಾಗೂ ಹೊನ್ನಾಳಿ ತಾಲೂಕಿನಲ್ಲಿ ಆರೋಗ್ಯ ಶಿಬಿರ ನಡೆಸಿದ್ದೆವು. ಸಂಘ ಅಸ್ತಿತ್ವಕ್ಕೆ ಬಂದ ಒಂದೂವರೆ ವರ್ಷದಲ್ಲಿ ಇದೀಗ ಮೂರನೇ ಶಿಬಿರವನ್ನು ಚಿಕ್ಕಗಂಗೂರು ಗ್ರಾಮದಲ್ಲಿ ನಡೆಸುತ್ತಿದ್ದೇವೆ. ಸಂಘದಿಂದ ಸ್ವಚ್ಛತಾ ಕಾರ್ಯವನ್ನೂ ಉಕ್ಕಡಗಾತ್ರಿ, ದಾವಣಗೆರೆ ಕುವೆಂಪು ಭವನದ ಬಳಿ ನಡೆಸಿದ್ದೇವೆ ಎಂದರು.

ಚಿಕ್ಕಗಂಗೂರು ಗ್ರಾಮಸ್ಥರಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಸ್ಥರೂ ಆರೋಗ್ಯ ಶಿಬಿರದ ಸದುಪಯೋಗ ಪಡೆಯಬೇಕು. ಮಾ.15ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕಗಂಗೂರು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಸಂಘದ ನಿರ್ದೇಶಕರಾದ ಬಿ.ಬಿ.ಶಂಕರಗೌಡ, ಮಲ್ಲಿಕಾರ್ಜುನ, ಬಿ.ಕೆ.ರಾಮನಗೌಡ, ರಾಜಪ್ಪ, ಬಿ.ಸಂತೋಷ ಇತರರು ಇದ್ದರು.

- - -

-13ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ಹೆರಿಗೆ ಮತ್ತು ಸ್ತ್ರೀರೋಗ ತಜ್ಞ ಡಾ. ಈ.ವಿರೂಪಾಕ್ಷಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.