ಇಂದಿನ ಸ್ಥಿತಿಗತಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ದೇಶ ವಿದೇಶಗಳಿಂದ ಅತಿ ವೇಗವಾಗಿ ಹರಡುವ ನಾನಾ ವೈರಸ್‌ಗಳೂ ಪತ್ತೆಯಾಗಿವೆ. ಪ್ರಕೃತಿಯ ಏರುಪೇರುಗಳಿಂದ ಶರೀರಕ್ಕೆ ನಾನಾ ಕಾಯಿಲೆಗಳು ಬರುತ್ತವೆ. ದೇಹವನ್ನು ಕಾಪಾಡುವುದರ ಜೊತೆಗೆ ಪ್ರಕೃತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ನಮ್ಮ ಗುರುತರ ಜವಾಬ್ದಾರಿಯೂ ಆಗಿದೆ. ಗೊತ್ತಿಲ್ಲದ ಕಾಯಿಲೆಗಳ ಪತ್ತೆಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಸಹಕಾರಿ ಎಂದು ಹಿರಿಯ ವೈದ್ಯ, ಆರ್ಥೊಪೆಡಿಕ್ ಸ್ಪೆಷಲಿಸ್ಟ್ ಡಾ. ಪ್ರಕಾಶ್ ಭಟ್ ಉಡುಪಿ ನುಡಿದರು.

ಕಾಪು: ಇಂದಿನ ಸ್ಥಿತಿಗತಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ದೇಶ ವಿದೇಶಗಳಿಂದ ಅತಿ ವೇಗವಾಗಿ ಹರಡುವ ನಾನಾ ವೈರಸ್‌ಗಳೂ ಪತ್ತೆಯಾಗಿವೆ. ಪ್ರಕೃತಿಯ ಏರುಪೇರುಗಳಿಂದ ಶರೀರಕ್ಕೆ ನಾನಾ ಕಾಯಿಲೆಗಳು ಬರುತ್ತವೆ. ದೇಹವನ್ನು ಕಾಪಾಡುವುದರ ಜೊತೆಗೆ ಪ್ರಕೃತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ನಮ್ಮ ಗುರುತರ ಜವಾಬ್ದಾರಿಯೂ ಆಗಿದೆ. ಗೊತ್ತಿಲ್ಲದ ಕಾಯಿಲೆಗಳ ಪತ್ತೆಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಸಹಕಾರಿ ಎಂದು ಹಿರಿಯ ವೈದ್ಯ, ಆರ್ಥೊಪೆಡಿಕ್ ಸ್ಪೆಷಲಿಸ್ಟ್ ಡಾ. ಪ್ರಕಾಶ್ ಭಟ್ ಉಡುಪಿ ನುಡಿದರು. ಭಾನುವಾರ ಶಂಕರಪುರ ಸಮೀಪದ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾಲಯದಲ್ಲಿ, ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ, ಜೇಸಿಐ ಶಂಕರಪುರ ಜಾಸ್ಮಿನ್, ಗಾಯತ್ರಿ ವೃಂದ ಬಂಟಕಲ್ಲು ಆಶ್ರಯದಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಆಯುರ್ವೇದ ಸರ್ಜನ್ ಡಾ. ಸುಕೇಶ್ ಎ. ಮೂಡುಬಿದಿರೆ ಮಾತನಾಡಿ, ಕಾಯಿಲೆ ಬಂದಾಗ ಮಾತ್ರ ವೈದ್ಯರನ್ನು ಕಾಣುವುದಲ್ಲ. ಆಗಾಗ ಆರೋಗ್ಯ ತಪಾಸಣೆಯನ್ನು ಮಾಡುವುದೂ ಅಗತ್ಯವಾಗಿದೆ. ಹಳ್ಳಿ ಪಂಡಿತರು ಆಯುರ್ವೇದ ವೈದ್ಯರಲ್ಲ. ವೈದ್ಯರಲ್ಲಿಗೆ ಹೋಗಿ ತಪಾಸಣೆ ನಡೆಸಿ ಔಷಧ ತಂದರೆ ಅದು ಆಯುರ್ವೇದ ಮದ್ದು ಎಂದರು.

ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಶಂಕರಪುರ ಇದರ ಟ್ರಸ್ಟಿ ಹರಿದಾಸ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಎರಡು ತಿಂಗಳಿಗೊಮ್ಮೆ ಇಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಕರೆ ನೀಡಿದರು. ಹಿರಿಯ ಜೇಸಿಐ ನಾಯಕರಾದ ನವೀನ್ ಅಮೀನ್ ಶಂಕರಪುರ, ಜೇಸಿಐ ಅಧ್ಯಕ್ಷ ರಾಜೇಶ್ ಆಚಾರ್ಯ, ಕಾರ್ಯದರ್ಶಿ ಭವ್ಯ ಸುವರ್ಣ, ಬಂಟಕಲ್ಲು ಗಾಯತ್ರಿ ವೃಂದದ ಅಧ್ಯಕ್ಷೆ ವಿದ್ಯಾ ಹರೀಶ್, ಕೃಷ್ಣವೇಣಿ ಆಯುರ್ವೇದ ಮತ್ತು ಆಶ್ರಯಧಾಮದ ಟ್ರಸ್ಟಿ ಪದ್ಮನಾಭ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಮೇಶ್ ಮಿತ್ತಾಂತಾಯ ಇದ್ದರು.

ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಲಕ್ಷ್ಮೀಶ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಪರಿಚಯ ಮಾಡಿದರು. ಶುಶ್ರೂಷಕಿ ಜ್ಯೋತಿ ನಿರೂಪಿಸಿದರು. ಶುಶ್ರೂಷಕಿ ನಾಗವೇಣಿ ಆರ್ ಶೆಟ್ಟಿ ಧನ್ಯವಾದವಿತ್ತರು.,ಡಾ,ಅನುಪಮಾ,ಭಾರತಿ, ಸರಸ್ವತಿ, ಅಭಿಷೇಕ್ ಶ್ರೀದೇವ್ ಸಹಕರಿಸಿದರು. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.