ಸಾರಾಂಶ
ಈ ಪ್ಯಾಕೇಜ್‌ಗಳು ಮೂಲಭೂತ ಆರೋಗ್ಯ ತಪಾಸಣೆ, ಪುರುಷರ ಸಮಗ್ರ ಆರೋಗ್ಯ ತಪಾಸಣೆ, ಮಹಿಳೆಯರ ಸಮಗ್ರ ಆರೋಗ್ಯ ತಪಾಸಣೆ, ಮಧುಮೇಹ ಆರೋಗ್ಯ ಪ್ಯಾಕೇಜ್ ಮತ್ತು ಹೃದಯ ಆರೋಗ್ಯ ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್‌ಗಳು ಏ.8ರಿಂದ 30ರ ವರೆಗೆ ರಿಯಾಯಿತಿ ಶುಲ್ಕಗಳಲ್ಲಿ ಲಭ್ಯವಿವೆ.
ಕನ್ನಡಪ್ರಭ ವಾರ್ತೆ ಉಡುಪಿ
ವಿಶ್ವ ಆರೋಗ್ಯ ದಿನದಂಗವಾಗಿ ನಗರದ ಡಾ.ಟಿ.ಎಂ.ಎ. ಪೈ ಆಸ್ಪತ್ರೆಯು ವಿಶೇಷ ಹೆಲ್ತ್ ಚೆಕ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ ‘ನನ್ನ ಆರೋಗ್ಯ, ನನ್ನ ಹಕ್ಕು’ ಈ ಹಿನ್ನೆಲೆಯಲ್ಲಿ ಜನರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕನ್ನು ನೀಡುವ ಈ ಆರೋಗ್ಯ ಪ್ಯಾಕೇಜ್‌ಗಳು ವಿವಿಧ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್, ಪ್ರಾರಂಭದಲ್ಲಿಯೇ ರೋಗಗಳ ಪತ್ತೆಯು ಅತ್ಯಂತ ಮಹತ್ವದ್ದಾಗಿದೆ. ಈ ಪ್ರಮುಖ ಅಗತ್ಯವನ್ನು ಗುರುತಿಸಿ ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿಯು ವಿವಿಧ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ಯಾಕೇಜ್‌ಗಳು ಮೂಲಭೂತ ಆರೋಗ್ಯ ತಪಾಸಣೆ, ಪುರುಷರ ಸಮಗ್ರ ಆರೋಗ್ಯ ತಪಾಸಣೆ, ಮಹಿಳೆಯರ ಸಮಗ್ರ ಆರೋಗ್ಯ ತಪಾಸಣೆ, ಮಧುಮೇಹ ಆರೋಗ್ಯ ಪ್ಯಾಕೇಜ್ ಮತ್ತು ಹೃದಯ ಆರೋಗ್ಯ ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್‌ಗಳು ಏ.8ರಿಂದ 30ರ ವರೆಗೆ ರಿಯಾಯಿತಿ ಶುಲ್ಕಗಳಲ್ಲಿ ಲಭ್ಯವಿವೆ.ಅಪಾಯಿಂಟ್‌ಮೆಂಟ್‌ಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು 7259361555 ಅನ್ನು ಸಂಪರ್ಕಿಸಲು ಕೋರಲಾಗಿದೆ.
ಡಾ. ಟಿ.ಎಂ.ಎ. ಪೈ ಆಸ್ಪತ್ರೆಯು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಮತ್ತು ಸಮುದಾಯದಲ್ಲಿ ರೋಗಗಳನ್ನು ತಡೆಗಟ್ಟುವ ಆರೋಗ್ಯ ಕ್ರಮಗಳ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸಲು ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.