ಸಾರಾಂಶ
ನಮ್ಮ ಆಹಾರ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಸಿಂಧನೂರು, ಗಂಗಾವತಿ ಭಾಗದಲ್ಲಿ ಗೊಬ್ಬರ ಸುರಿದು ಅಪಾಯಕಾರಿ ಅಹಾರ ಬೆಳೆದು, ಸೇವಿಸುತ್ತಿದ್ದೇವೆ. ಅಡುಗೆ ಮನೆಯಿಂದ ಆರೋಗ್ಯ ಕಳೆದುಕೊಂಡಿದ್ದೇವೆ.
ಕೊಪ್ಪಳ: ಕೃತಿ ಸಹಜ ಆಹಾರ ಮತ್ತು ಜೀವನ ಪದ್ಧತಿ ಕಣ್ಮರೆ ಆಗುತ್ತಿದೆ. ಕಾರ್ಪೊರೇಟ್ ಆಹಾರದಿಂದ ಆರೋಗ್ಯ ಹಾಳು ಆಗುತ್ತಿದೆ ಎಂದು ಮೈಸೂರಿನ ಆಹಾರ ವಿಜ್ಞಾನದ ಸಂತ ಮಿಲ್ಲೆಟ್ ಮ್ಯಾನ್ ಆಫ್ ಇಂಡಿಯಾ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಡಾ. ಖಾದರ್ ವಲಿ ದೂದೇಕುಲ ಹೇಳಿದರು.
ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಆಹಾರ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಸಿಂಧನೂರು, ಗಂಗಾವತಿ ಭಾಗದಲ್ಲಿ ಗೊಬ್ಬರ ಸುರಿದು ಅಪಾಯಕಾರಿ ಅಹಾರ ಬೆಳೆದು, ಸೇವಿಸುತ್ತಿದ್ದೇವೆ. ಅಡುಗೆ ಮನೆಯಿಂದ ಆರೋಗ್ಯ ಕಳೆದುಕೊಂಡಿದ್ದೇವೆ. ಅಮೆರಿಕದಲ್ಲಿ, ಕೊಪ್ಪಳದಲ್ಲಿ ಪಿಜ್ಜಾ ಒಂದೇ ರೀತಿಯ ಟೆಸ್ಟ್ ನೀಡುತ್ತದೆ. ಇದು ರಾಸಾಯಿನಕದಿಂದ ತಯಾರಿಸಿದ್ದು ಎಂದರು.ಪ್ಲಾಸ್ಟಿಕ್ ಬಾಟಲ್ ನೀರು ಸೇವಿಸಿದ್ದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀರು ಶುದ್ಧ ಮಾಡಿಕೊಳ್ಳುವ ಪದ್ಧತಿಯೇ ಸರಿಯಿಲ್ಲ. ಜಾನುವಾರು ಆರೋಗ್ಯವು ಸರಿ ಇಲ್ಲದಂತೆ ಆಗುತ್ತದೆ ಎಂದರು.ಈ ಸೂರ್ಯ ಕಿರಣಗಳು ಚೈತನ್ಯ ತುಂಬುವ ಮೊದಲ ಪ್ರಕ್ರಿಯೆ. ಆಗಲೇ ನಿಮ್ಮ ಆರೋಗ್ಯ ಒದಗುತ್ತದೆ. ಖಾದಿ ಹಾಕಿಕೊಂಡು ಸ್ವಾಮೀಜಿಗಳನ್ನು ನೋಡಿದರೆ ಆರೊಗ್ಯ ವೃದ್ಧಿಯಾಗುತ್ತದೆ. ಸೂರ್ಯ ನಮಸ್ಕಾರ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಸಿಗುವುದಿಲ್ಲ. ಮಾನವ ಜಾತಿಯಲ್ಲಿ ಎಲ್ಲ ಹದ ತಪ್ಪಿದೆ ಎಂದರು.ನೀರನ್ನು ಶುದ್ಧ ಮಾಡಿಕೊಳ್ಳಬೇಕು. ತಾಮ್ರದ ಪಾತ್ರೆಯಲ್ಲಿ ಇರಿಸಿಕೊಂಡು ಕುಡಿಯಬೇಕು. ಗಂಗಾವತಿ ಭಾಗದಲ್ಲಿ ಕ್ಯಾನ್ಸರ್ ಹರಡುವಿಕೆ ಹೆಚ್ಚಾಗಿದೆ. ಪಾಶ್ಚಾತ್ಯ ದೇಶಗಳು ಪೆಟೆಂಟ್ ಮಾಡಿಕೊಂಡು ಮೋಸ ಮಾಡುತ್ತಿವೆ. ರೊಟ್ಟಿಯಲ್ಲಿ ಅಕ್ಕಿ ಬಳಸಿಕೊಂಡು ಮಾಡುತ್ತಿದ್ದೇವೆ ಎಂದರು.ನಾಲ್ಕು ಮಳೆ ಬಂದರೆ ಬೆಳೆಯುವ ಸಿರಿಧಾನ್ಯದಿಂದ ಆರೋಗ್ಯ ಉತ್ತಮ ಆಗುತ್ತದೆ. ಅಕ್ಕಿ, ಗೋಧಿ ಬಳಕೆ ಪ್ರಾರಂಭವಾದಾಗಿನಿಂದ ಬಿಪಿ ಶುಗರ್ ಪ್ರಾರಂಭ ಆಯಿತು ಎಂದರು.ಅಕ್ಕಿ, ಗೋಧಿ ಬಳಕೆ ನಿಲ್ಲಿಸಿ, ನಿಮ್ಮ ಆರೋಗ್ಯ ಸಹಜವಾಗಿ ಸುಧಾರಣೆಯಾಗುತ್ತದೆ. ಮೂರು ತಿಂಗಳು ಸಿರಿಧಾನ್ಯ ಬಳಸಿದರೆ ಶುಗರ್ ಸಾಮಾನ್ಯಸ್ಥಿತಿಗೆ ಬರುತ್ತದೆ. ದೇವರು ನೀಡಿದ ಅಹಾರವನ್ನು ಬಿಟ್ಟು ಪಿಜ್ಜಾ, ಬರ್ಗರ್ ಬಳಕೆ ಮಾಡುವುದು ತಪ್ಪು. ಕೋರ್ಲೆ ಬಳಕೆಯಿಂದ ಕ್ಯಾನ್ಸರ್ ಕಾರಕ ಅಂಶಗಳು ಕಿತ್ತು ಬೀಸಾಕುತ್ತಾರೆ. ಸ್ವಾಮೀಜಿಗಳು ಮರದ ಚಪ್ಪಲಿ ಬಳಸುವುದು ಸಹ ಆರೋಗ್ಯಕ್ಕೆ ಒಳ್ಳೆಯದು ಎಂದರು.ಸಿರಿಧಾನ್ಯ ತಿಂದರೆ ಯಕೃತ್ತು, ಮೂತ್ರಪಿಂಡ ಆರೋಗ್ಯಪೂರ್ಣ ವಾಗಿ ಇರುತ್ತವೆ. ಆರ್ಕ ಅಕ್ಕಿ ಬಳಕೆಯಿಂದ ಮಕ್ಕಳಲ್ಲಿ ಬ್ಲಡ್ ಕ್ಯಾನ್ಸರ್ ವಾಸಿಯಾಗುತ್ತದೆ. ಜೋಳದ ಬಳಕೆಯಿಂದ ವೀರ್ಯಕಣಗಳು ಹೆಚ್ಚಾಗುತ್ತವೆ ಎಂದರು.ಅತೀಯಾದ ನೀರು ಬಳಕೆಯಿಂದ ಮುಂದೆ ನೀರಿನ ಅಭಾವ ಎದುರಾಗುತ್ತದೆ. ಸಿರಿಧಾನ್ಯ ಬಳಕೆ ಮಾಡಿದರೆ ಕೋರೋನ ಸಹ ಬರಲ್ಲ. ಗೋಧಿ ರೊಟ್ಟಿ ತಿನ್ನುವವರನ್ನು ನೋಡಿದರೆ ಅಯ್ಯೋ ಅಂತಿವಿ. ನಮ್ಮಲ್ಲಿದ್ದ ಅದ್ಭುತ ಆಹಾರ ಸಂಪ್ರದಾಯ ಮರೆಯಾಗಿದೆ. ಸಿರಿ ಧಾನ್ಯಗಳ ರಹದಾರಿ ನಿರ್ಮಾಣ ಮಾಡಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಕ್ಕಿ, ಸಕ್ಕರೆ ನಮ್ಮ ಬಾಯಿಗೆ ಹಾಕಿಕೊಳ್ಳಬಾರದು. ಹಾಲಿನ ಬಳಕೆ ದೂರ ಮಾಡಿದರೆ ಶೇ.೭೦ ಆಸ್ಪತ್ರೆ ಬಂದಾಗುತ್ತವೆ ಎಂದರು.