ಗಳಿಕೆಗಿಂತ ಆರೋಗ್ಯ ಮುಖ್ಯ

| Published : Jul 02 2025, 12:21 AM IST

ಸಾರಾಂಶ

ಆರಾಮ ತಪ್ಪಿದಲ್ಲಿ ನಿರ್ಲಕ್ಷ್ಯ ಮಾಡಬೇಡಿ ನಂತರ ದೊಡ್ಡ ಪ್ರಮಾಣದಲ್ಲಿ ರೋಗ ಬೆಳೆಯುತ್ತೆ. ಗಳಿಕೆಗಿಂತ ಆರೋಗ್ಯ ಮುಖ್ಯ ಎಂದು ವಿಜಯಪುರ ಡಾ.ಉಮಾಮಹೇಶ್ವರ ಸಿಂಧೂರ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಆರಾಮ ತಪ್ಪಿದಲ್ಲಿ ನಿರ್ಲಕ್ಷ್ಯ ಮಾಡಬೇಡಿ ನಂತರ ದೊಡ್ಡ ಪ್ರಮಾಣದಲ್ಲಿ ರೋಗ ಬೆಳೆಯುತ್ತೆ. ಗಳಿಕೆಗಿಂತ ಆರೋಗ್ಯ ಮುಖ್ಯ ಎಂದು ವಿಜಯಪುರ ಡಾ.ಉಮಾಮಹೇಶ್ವರ ಸಿಂಧೂರ ಹೇಳಿದರು.

ಸ್ಥಳೀಯ ಸಿಂಧೂರ ವಸತಿಯಲ್ಲಿರುವ ಅಪ್ಪಯ್ಯ ಸ್ವಾಮಿ ಜಾತ್ರೆ ಹಾಗೂ ದಿ.ಕುಮಾರ ಡವಳೇಶ್ವರ ಸ್ಮರಣಾರ್ಥ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮೊದಲಿನ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಈಗ ಹೆಚ್ಚು ಗಳಿಕೆ ಮಾಡುವುದು ಒಂದೇ ಗುರಿಯಾಗಿದೆ. ಇದರಿಂದ ಸಕ್ಕರೆ ಹಾಗೂ ಬಿಪಿ ಹೆಚ್ಚು ಆಗಲಿವೆ. ಅಲ್ಲದೇ ಆಯುಷ್ಯ ಸಹ ಕಮ್ಮಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.ನೀವೆಲ್ಲರೂ ರೈತರು ನಿಮ್ಮ ಜಮೀನದಲ್ಲಿ ನಿಮ್ಮ ಕುಟುಂಬಕ್ಕೆ ಸಾಲುವಷ್ಟು ಸಾವಯವ ಬೆಳೆಯಿರಿ. ಆರೋಗ್ಯ ಚೆನ್ನಾಗಿ ಕಾಯ್ದುಕೊಳ್ಳಿರಿ. ಲಿಂ.ಮಲ್ಲಪ್ಪ ಅಜ್ಜನವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ತಂದೆ-ತಾಯಿ ನಾವು ನಡೆದಿದ್ದೇವೆ. ನಾನು ಹುಟ್ಟಿದ ಐಗಳಿ ಗ್ರಾಮ ಗ್ರಾಮಸ್ಥರು ಎಲ್ಲರೂ ಆರಾಮದಿಂದ ಇರಬೇಕೆನ್ನುವುದು ನನ್ನ ಗುರಿಯಾಗಿದೆ. ಬಡ ಕುಟುಂಬ ದವಾಖಾನೆ ಬಿಲ್‌ ಕಟ್ಟಲು ಆಗುವುದಿಲ್ಲ. ಅಂಥಹವರಿಗೆ ಶಿಬಿರದಲ್ಲಿ ಉಚಿತ ಸೇವೆ ಮಾಡುವುದರಿಂದ ನಮಗೆ ತೃಪ್ತಿ ಸಿಗಲಿದೆ ಎಂದರು. ಬ್ಯಾಂಕ್‌ ನಿವೃತ್ತ ಮ್ಯಾನೇಜರ್‌ ಮಹಾದೇವ ಹಾಲಳ್ಳಿ ಮಾತನಾಡಿ, ಅಪ್ಪಯ್ಯ ಸ್ವಾಮಿಗಳು ಪವಾಡ ಪುರುಷರು ಅವರಲ್ಲಿ ಒಂದು ಶಕ್ತಿ ಇದೆ. ಶ್ರೀಗಳ ಪರಮ ಔಕ್ತನಾದ ಲಿಂ.ಮಲ್ಲಪ್ಪ ಶರಣರು 2 ಎಕರೆ ಜಮೀನದಲ್ಲಿ ಒಂದು ಸುಂದರವಾದ ಅಪ್ಪಯ್ಯ ಸ್ವಾಮಿಗಳ ದೇವಾಲಯ ನಿರ್ಮಿಸಿ ಅದನ್ನು ಸಾರ್ವಜನಿಕರಿಗೆ ಒಪ್ಪಿಸಿದ ಮಹಾ ಶರಣರು ಅವರಲ್ಲಿರುವ ತ್ಯಾಗ ಮನೋಭಾವ ಗುಣ ದೊಡ್ಡದು. ಅವರಂತೆ ಮಗ ಮೊಮ್ಮಗ (ವೈದ್ಯರು) ಸಹ ಅವರ ದಾರಿಯಲ್ಲಿ ನಡೆದಿದ್ದಾರೆ. ವಿಜಯಪುರದಲ್ಲಿ ತಮ್ಮ ಆಸ್ಪತ್ರೆಯನ್ನು ಬಂದ ಮಾಡಿ 2 ದಿನ ಜಾತ್ರೆಯಲ್ಲಿ ಭಕ್ತರ ಆರೋಗ್ಯ ಉಚಿತ ತಪಾಸಣೆ ಮಾಡಿದ ಕಾರ್ಯ ದೊಡ್ಡದು ಎಂದು ಶ್ಲಾಘಿಸಿದರು.ಕನ್ನಾಳದ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಎಸ್.ಸನದಿ ಶಿಬಿರ ಉದ್ಘಾಟಿಸಿದರು. ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗನಗೌಡ ಪಾಟೀಲ, ಹಣಮಂತ ಕರಿಗಾರ, ದಾನಯ್ಯ ಮಠಪತಿ, ಶಿದ್ರಾಮ ಸಿಂಧೂರ, ವಿಜಯಪುರದ ವೈದ್ಯ ಸಿಬ್ಬಂದಿ ಡಾ.ಉಮಾಮಹೇಶ್ವರ ಸಿಂಧೂರ, ಡಾ.ಸುಧಾ ವಾಲಿಕಾರ, ಅಕ್ಷಯ ವಾಲಿಕಾರ, ದಾನೇಶ ನಿರಜನ, ದುಂಡಪ್ಪ ಗಾಂಜದ, ಶಿವಾನಂದ ವಿಡುತೆ, ಪೂಜಾ ರಾಜಪೂತ್, ಮಧುರಾ ಶಿರೋಳಕರ, ಕಾಶಿನಾಥ ಹಳೆಮನಿ, ಭೀಮಾಶಂಕರ ಜಮಶಟ್ಟಿ, ಗಜಾನನ ರಾಹುತೆ, ಶ್ರೀದೇವಿ ರಾಹುತೆ ಸೇರಿದಂತೆ ಅನೇಕರು ಇದ್ದರು. ಕೇದಾರಿ ಬಿರಾದಾರ ಸ್ವಾಗತಿಸಿದರು. ಮಲಗೌಡ ಪಾಟೀಲ ವಂದಿಸಿದರು. ನಮ್ಮ ಅಜ್ಜ ಲಿಂ.ಮಲ್ಲಪ್ಪ ಶರಣರು ಶ್ರೀಅಪ್ಪಯ್ಯ ಸ್ವಾಮಿಗಳ ಪರಮ ಭಕ್ತರು ಆಗಿದ್ದರು. ನಮ್ಮ ಜಮೀನದಲ್ಲಿ ಶ್ರೀಗಳ ದೇವಾಲಯ ನಿರ್ಮಿಸಿ ಸಾರ್ವಜನಿಕರಿಗೆ ಒಪ್ಪಿಸಿದರು. ಅವರಲ್ಲಿರುವ ತ್ಯಾಗ ನನ್ನ ತಂದೆಯಾದ ಅಭಿಯಂತರ ನರಸಪ್ಪ ಸಿಂಧೂರ ಅವರು ಹಾಗೂ ನಾವು ದಂಪತಿ ಅಳವಡಿಸಿಕೊಂಡಿದ್ದೇವೆ. ಶ್ರೀಗಳ ಜಾತ್ರೆಯಲ್ಲಿ ಆರೋಗ್ಯ ಉಚಿತ ತಪಾಸಣೆ ಮಾಡಿ ಔಷಧ ಗುಳಗಿ ವಿತರಿಸಿ ಎಲ್ಲರೂ ಆರೋಗ್ಯವಂತರಾಗಿ ಸುಂದರ ಬದುಕಿನಲ್ಲಿ ಇರಬೇಕೆನ್ನುವುದು ನಮ್ಮ ಗುರಿಯಾಗಿದೆ.

-ಡಾ.ಉಮಾಮಹೇಶ್ವರ ಸಿಂಧೂರ, ವಿಜಯಪುರ.ಮಹಾ ತಪಸ್ವಿ ಜಂಗಮ ಜ್ಯೋತಿ ಲಿಂ.ಅಪ್ಪಯ್ಯ ಸ್ವಾಮಿಗಳಲ್ಲಿ ಒಂದು ಶಕ್ತಿ ಇದೆ. ಆ ಶಕ್ತಿ ಜಾತ್ರೆಯಲ್ಲಿ ಸೇವೆ ಮಾಡಲು ಕರೆ ತಂದಿದೆ. ಅಪ್ಪಯ್ಯ ಸ್ವಾಮಿಗಳು ಇನ್ನಷ್ಟು ನಮಗೆ ಶಕ್ತಿ ಕೊಡಲಿ. ನಿಮ್ಮೆಲ್ಲರ ಸೇವೆಗೆ ಸಿಂಧೂರ ದಂಪತಿ ಸದಾ ಸಿದ್ದರಿದ್ದೇವೆ.

-ಡಾ.ಪಾರ್ವತಿ ಸಿಂಧೂರ,

ವಿಜಯಪುರ.