ಸಾರಾಂಶ
ಮನುಷ್ಯ ಹುಟ್ಟು-ಸಾವುಗಳ ನಡುವೆ ಜೀವನ ನಡೆಸುವಾಗ ಸಮಾಜಮುಖಿಯಾಗಿ ಸಾಧನೆ ಮಾಡಿದರೆ ಸತ್ತ ನಂತರವೂ ಜೀವಂತವಾಗಿರುತ್ತಾರೆ. ಸುತ್ತಮುತ್ತಲಿನ ನಾಗರೀಕರು ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆ, ಉತ್ತಮ ಪರಿಸರ, ಪೌಷ್ಟಿಕ ಆಹಾರ, ವ್ಯಾಯಾಮ ಅತ್ಯವಶ್ಯಕ. ವೈದರ ಸಲಹೆ ಅನುಸರಿಸಿದರೆ ಆರೋಗ್ಯವಂತ ಜೀವನ ನಡೆಸಬಹುದು.
ಕನ್ನಡಪ್ರಭ ವಾರ್ತೆ ಭಾರತೀನಗರ
ಪ್ರಸ್ತುತ ಮನುಷ್ಯರಿಗೆ ಆಸ್ತಿ-ಅಧಿಕಾರಕ್ಕಿಂತ ಆರೋಗ್ಯವೇ ಅತ್ಯಮೂಲ್ಯ. ಆರೋಗ್ಯವನ್ನು ಖರೀಸಲು ಸಾಧ್ಯವಿಲ್ಲ ಎಂದು ರೋಟರಿ ಅಧ್ಯಕ್ಷ ಶಶಿಕುಮಾರ್ ತಿಳಿಸಿದರು.ಕೆ.ಎಂ.ದೊಡ್ಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಸಂಸ್ಥೆಯಿಂದ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮನುಷ್ಯ ಹುಟ್ಟು-ಸಾವುಗಳ ನಡುವೆ ಜೀವನ ನಡೆಸುವಾಗ ಸಮಾಜಮುಖಿಯಾಗಿ ಸಾಧನೆ ಮಾಡಿದರೆ ಸತ್ತ ನಂತರವೂ ಜೀವಂತವಾಗಿರುತ್ತಾರೆ. ಸುತ್ತಮುತ್ತಲಿನ ನಾಗರೀಕರು ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆ, ಉತ್ತಮ ಪರಿಸರ, ಪೌಷ್ಟಿಕ ಆಹಾರ, ವ್ಯಾಯಾಮ ಅತ್ಯವಶ್ಯಕ. ವೈದರ ಸಲಹೆ ಅನುಸರಿಸಿದರೆ ಆರೋಗ್ಯವಂತ ಜೀವನ ನಡೆಸಬಹುದು ಎಂದರು.ಈ ವೇಳೆ ಕಾಂಗ್ರೆಸ್ ಮುಖಂಡ ಆಶಯ್ ಜಿ.ಮಧು ಅವರ ಅಭಿಮಾನಿಗಳ ಬಳಗದಿಂದ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಮಂದಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಶಿಬಿರದಲ್ಲಿ 60 ಕ್ಕೂ ಹೆಚ್ಚು ಮಂದಿ ತಪಾಸಣೆಯಲ್ಲಿ ಪಾಲ್ಗೊಂಡಿದ್ದು ಅದರಲ್ಲಿ 24 ಮಂದಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಈ ವೇಳೆ ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಕುಮಾರ್ ರಾಜು, ಮರಿಸ್ವಾಮಿ, ಮರಿಚನ್ನೇಗೌಡ, ಶಿವರಾಮು, ಸ್ವರೂಪ್‌ಚಂದ್ರ, ಪ್ರದೀಪ್, ನೇತ್ರ ವೈದ್ಯಾಧಿಕಾರಿ ಗುರುಮೂರ್ತಿ, ಎಂ.ಆರ್.ಮಧು, ಶಿವಮ್ಮ, ಶಿವರತ್ನಮಣಿ, ಡಾ.ಸೌಮ್ಯ ಸೇರಿದಂತೆ ಎಲ್ಲಾ ರೋಟರಿ ಸದಸ್ಯರು ಉಪಸ್ಥಿತರಿದ್ದರು.