ಗ್ರಾಮಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಆರೋಗ್ಯ ಮುಖ್ಯಪಾತ್ರ: ಡಾ.ವಿನಯ್‌ ಕುಮಾರ್ ಮುತ್ತಗಿ

| Published : Mar 15 2025, 01:08 AM IST

ಸಾರಾಂಶ

ಜಗತ್ತಿನ ಎಲ್ಲೆಡೆ ಕ್ಯಾನ್ಸರ್‌ ನ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಭಾರತವು ಹಳ್ಳಿಗಳಿಂದ ಕೂಡಿದ ದೇಶ. ಹಳ್ಳಿಗಳಲ್ಲಿ ಕ್ಯಾನ್ಸರ್‌ ನ ಬಗ್ಗೆ ಅರಿವು ಮೂಡಿಸುವುದು ಅವಶ್ಯವಿರುವುದು ದುರದೃಷ್ಟ ಸಂಗಾತಿ. ನಗರ ಪ್ರದೇಶದಲ್ಲಿ ಕೇಳುತ್ತಿದ್ದ ರೋಗವು ಹಳ್ಳಿಗಳನ್ನು ಆವರಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಗ್ರಾಮಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಆರೋಗ್ಯ ಮುಖ್ಯಪಾತ್ರ ವಹಿಸುತ್ತದೆ ಎಂದು ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯ ರೇಡಿಯೇಷನ್‌ ಆಂಕೊಲಾಜಿಸ್ಟ್ ಡಾ.ವಿನಯ್‌ ಕುಮಾರ್ ಮುತ್ತಗಿ ಹೇಳಿದರು.

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜು ಹಾಗೂ ಐಕ್ಯೂಎಸ್‌ಸಿ ಸಹಯೋಗದೊಂದಿಗೆ ವಿಸ್ತರಣೆ ಹಾಗೂ ಪ್ರಭಾವಿತ ಚಟುವಟಿಕೆಗಳು ಎಂಬ ಕಾರ್ಯಕ್ರಮದ ಅಡಿಯಲ್ಲಿ ಟಿ.ನರಸೀಪು ತಾಲೂಕಿನ ಬನ್ನೂರು ಹೋಬಳಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್‌ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಎಲ್ಲೆಡೆ ಕ್ಯಾನ್ಸರ್‌ ನ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಭಾರತವು ಹಳ್ಳಿಗಳಿಂದ ಕೂಡಿದ ದೇಶ. ಹಳ್ಳಿಗಳಲ್ಲಿ ಕ್ಯಾನ್ಸರ್‌ ನ ಬಗ್ಗೆ ಅರಿವು ಮೂಡಿಸುವುದು ಅವಶ್ಯವಿರುವುದು ದುರದೃಷ್ಟ ಸಂಗಾತಿ. ನಗರ ಪ್ರದೇಶದಲ್ಲಿ ಕೇಳುತ್ತಿದ್ದ ರೋಗವು ಹಳ್ಳಿಗಳನ್ನು ಆವರಿಸಿಕೊಂಡಿದೆ. ಕ್ಯಾನ್ಸರ್‌ ರೋಗದ ಲಕ್ಷಣಗಳು, ಗುರುತಿಸುವಿಕೆ, ಪರಿಹಾರ ಕ್ರಮಗಳು ಸರ್ಕಾರದ ಯೋಜನೆಗಳು ಮುಂತಾದವುಗಳ ಬಗ್ಗೆ ತಿಳುವಳಿಕೆ ಇರಬೇಕಾದದ್ದು ಅನಿವಾರ್ಯವಾಗಿದೆ. ಕ್ಯಾನ್ಸರ್‌ ಅನ್ನುವಂತದ್ದು ಮಾರಣಾಂತಿಕ ರೋಗವಲ್ಲ ಸೂಕ್ತ ಚಿಕಿತ್ಸೆಗಳಿಂದ ಗುಣಪಡಿಸಿಕೊಳ್ಳಬಹುದು ಎಂಬ ಅರಿವು ಇರಬೇಕಾಗಿದೆ. ವೈದ್ಯರ ನಿಗದಿತ ಸಲಹೆ ಮೇರೆಗೆ ಕ್ಯಾನ್ಸರ್‌ ರೋಗವನ್ನು ಗೆಲ್ಲಬಹುದೆಂದು ಎಂಬ ಅರಿವು ಇರಬೇಕಾಗಿದೆ ಎಂದು ಅವರು ಹೇಳಿದರು.

ಮಧ್ಯಪಾನದ ಸೇವನೆಯಿಂದಲೂ ಕ್ಯಾನ್ಸರ್‌ ರೋಗ ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಇತ್ತೀಚಿಗೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿವೆ. ಸ್ತನಗಳಲ್ಲಿ ಗಂಟುಗಳು ಸ್ತನ ಕ್ಯಾನ್ಸರ್‌ನ ಲಕ್ಷಣವಾಗಿರುತ್ತದೆ ಎಂದು ಅವರು ವಿವರಿಸಿದರು.

ಗ್ರಾಮೀಣ ಜನರು ರೋಗವನ್ನು ಬೇರೆಯವರಿಗರ ಹೇಳಿದರೆ, ಅವಮಾನವಾಗುತ್ತದೆಂದು ಹೇಳಿಕೊಳ್ಳುವಲ್ಲಿ ಮುಜಗರಕ್ಕೊಳಗಾಗುತ್ತಿದ್ದಾರೆ. ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಾಗ ಶೀಘ್ರವಾಗಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು ಎಂದರು.

ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯ ಸರ್ಜಿಕಲ್‌ ಆಂಕೊಲಾಜಿಸ್ಟ್ ಮತ್ತು ರೋಬೋಟಿಕ್ ಸರ್ಜನ್‌ ಡಾ. ರಕ್ಷಿತ್ ಶೃಂಗೇರಿ ಮಾತನಾಡಿ, ಕ್ಯಾನ್ಸರ್‌ರೋಗ ಮನುಷ್ಯನನ್ನು ಕೊಲ್ಲುವುದಿಲ್ಲ, ಕುಟುಂಬದ ಮನಸ್ಸುಗಳನ್ನು ಕೊಲ್ಲುತ್ತದೆ. ದುಶ್ಚಟಗಳನ್ನು ದೂರ ಮಾಡಿದರೆ ಕ್ಯಾನ್ಸರನ್ನು ತಡೆಗಟ್ಟಬಹುದು ಎಂದರು.

ಮಹಾಜನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್‌.ಆರ್‌. ತಿಮ್ಮೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಬಗೆಗಿನ ಅರಿವುಗಳು ಕಡಿಮೆ ಇದೆ ವಿದ್ಯಾವಂತ ಯುವ ಸಮುದಾಯಗಳೇ, ವಿವೇಕರಹಿತವಾಗಿ ವರ್ತಿಸುತ್ತಿರುವುದು ಶೋಚನೀಯ ಸಂಗತಿ ಎಂದರು. ಭೂಗೋಳ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ.ಜಿ. ದೊಡ್ಡರಸಯ್ಯ, ಡಾ. ಸಿದ್ಧರಾಜು, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಎಂ. ನಾಗೇಶ್, ಜೆ. ಮನೋಜ್‌ ಕುಮಾರ್‌, ಮಾರಗೌಡನಹಳ್ಳಿಯ ಮುಖ್ಯಸ್ಥರು, ವಿವಿಧ ಗ್ರಾಮಗಳಿಂದ ಗ್ರಾಮಸ್ಥರು 400ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.