ಸಾರಾಂಶ
ಕಾರಟಗಿ:
ಗ್ರಾಮೀಣ ಭಾಗದಲ್ಲಿ ನುರಿತ ವೈದ್ಯರ ತಂಡ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡು ಆರೋಗ್ಯ ಸೇವೆ ನೀಡುತ್ತಿರುವುದು ಜನರಿಗೆ ವರದಾನವಾಗಿದೆ. ಇದು ಮಾದರಿ ಕೆಲಸವಾಗಿದ್ದು ಇಂಥ ಶಿಬಿರದ ಲಾಭವನ್ನು ಜನರು ಪಡೆಯಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಇಲ್ಲಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚಿವ ಶಿವರಾಜ ತಂಗಡಗಿ ಸಹಕಾರ, ವೈದೇಹಿ ಆಸ್ಪತ್ರೆ ಬೆಂಗಳೂರು, ಮಾರುತಿ ಕಣ್ಣಿನ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಷನ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್‌ಸ್ ಹಾಗೂ ಪಾರ್ವತಮ್ಮ ಚಾರಿಟೇಬಲ್ ಟ್ರಸ್ಟ್ ಗಂಗಾವತಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕಾರಟಗಿ ಹಾಗೂ ಯುವ ಬ್ಲಾಕ್ ಕಾಂಗ್ರೆಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯವೇ ಭಾಗ್ಯ ಎನ್ನುವಂತೆ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಉಚಿತ ಆರೊಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಅಗ್ನಿಗುಂಡ ದ್ಯಾವಮ್ಮ ದೇವಿ ಆರಾಧಕ ಭೀಮಪ್ಪಜ್ಜನವರು, ಸಾಧನೆಗೆ ಸದೃಢ ಆರೋಗ್ಯ ಮುಖ್ಯ. ದೇಹವು ರೋಗಗಳ ನೆಲೆಯಾಗದಂತೆ ಎಚ್ಚರ ವಹಿಸಬೇಕು ಹಾಗೂ ದುಶ್ಚಟಗಳಿಂದ ದೂರವಿರಬೇಕು. ಸದಾ ಸಕಾರಾತ್ಮಕ ಚಿಂತನೆ ಹಾಗೂ ಸುತ್ತಮುತ್ತಲ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪಿಆರ್‌ಒ ಡಾ. ಮಲ್ಲಿಕಾರ್ಜುನ ಹಚ್ಚೊಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಬಿರದಲ್ಲಿ ೯೧ ಜನರಿಗೆ ಕಣ್ಣಿಗೆ ಸಂಬಂಧಿಸಿದಂತೆ, ೧೭೦ಕ್ಕೂ ಹೆಚ್ಚು ಜನರಿಗೆ ಹೃದಯ ತೊಂದರೆ, ನರದ ಸಮಸ್ಯೆ, ಎಲುಬು ಕೀಲುಗಳ ಸಮಸ್ಯೆ, ಕಣ್ಣಿನ ತಪಾಸಣೆ, ಕ್ಯಾನ್ಸರ್, ಸ್ಪೈನಲ್ ಕಾರ್ಡ್ ಚಿಕಿತ್ಸೆ, ಬಿಪಿ ಶುಗರ್, ಮಧುಮೇಹಗಳಂತಹ ರೋಗಗಳಿಗೆ ಸಂಬಂಧಿಸಿದ ಪರೀಕ್ಷೆ ಕೈಗೊಳ್ಳಲಾಯಿತು.ಈ ವೇಳೆ ಮುಖಂಡರಾದ ಚೆನ್ನಬಸಪ್ಪ ಸುಂಕದ, ಶಿವರೆಡ್ಡಿ ನಾಯಕ, ಚನ್ನಬಸಪ್ಪ ಸುಂಕದ, ನಗರ ಕಾಂಗ್ರೆಸ್ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಅರಳಿ, ಜಿಲ್ಲಾ ಯುವ ಕಾಂಗ್ರೆಸ್‌ನ ಲಿಂಗೇಶ ಕಲ್ಗುಡಿ, ಶಿವಕುಮಾರ ನಾಯಕ, ಕೊಟ್ರೇಶ ಶೀಲವಂತರ, ಸುನೀಲ್ ಮೂಲಿಮನಿ, ಶರಣಬಸವಗೌಡ ರಾಮನಗರ, ದುರುಗೇಶ ಸಾಲೋಣಿ, ಶ್ರೀಶೈಲ ಹೊಳಗುಂದಿ, ಶರಣಬಸವ ದಿದ್ದಿಗಿ, ಪುಟ್ಟು, ಮಲ್ಲು, ಶರಣಬಸವ, ಯಶವಂತ, ಅವಿನಾಶ, ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಅನಂತ್ ಜೂರಟಗಿ, ಸಿಎಚ್‌ಒಗಳಾದ ಹನುಮಂತಪ್ಪ ಗುರಿಕಾರ, ಶಿವಲೀಲಾ ಸಿಬ್ಬಂದಿ ಸಾವಿತ್ರಿ, ಸುಮಾ, ಗಾಯತ್ರಿ, ಪರಶುರಾಮ್, ಸುಮಂಗಲಾ ಇನ್ನಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))