ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ದೇವರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಹೊರತಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜೆ.ವೈ.ಮಂಜುನಾಥ್ ಹಾಗೂ ಕಾರ್ಯದರ್ಶಿ ಚಿಕ್ಕೇಗೌಡ ಸಮ್ಮುಖದಲ್ಲಿ ಶಿವಣ್ಣ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮದ್ದೂರು:

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ದೇವರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಹೊರತಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜೆ.ವೈ.ಮಂಜುನಾಥ್ ಹಾಗೂ ಕಾರ್ಯದರ್ಶಿ ಚಿಕ್ಕೇಗೌಡ ಸಮ್ಮುಖದಲ್ಲಿ ಬಿ.ಆರ್.ಸಿ ಕೇಂದ್ರದಲ್ಲಿ ಮಾತುಕತೆ ನಡೆಸಿದ ಸಂಘದ ಪದಾಧಿಕಾರಿಗಳು ಮುಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆವರೆಗೆ ಶಿವಣ್ಣ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲು ತೀರ್ಮಾನಿಸಿದರು.

ಸಂಘದ ನಿರ್ದೇಶಕರಾಗಿ ಕಿರಣ, ಪುಷ್ಪಾ, ಸವಿತಾ, ಜೋಗಿಗೌಡ, ವೈ.ಸಿ.ಪ್ರಸನ್ನ, ಪ್ರಕಾಶ್, ತಿಮ್ಮೆಶ್, ದೇವರಾಜು, ರವಿಚಂದ್ರ, ಪ್ರಸಿಲ್ಲಾ ಜ್ಞಾನಕುಮಾರಿ, ಪ್ರೇಮ ಅವರನ್ನು ಮುಂದುವರಿಸಲು ನಿರ್ಧರಿಸಲಾಯಿತು.

ನೂತನ ಅಧ್ಯಕ್ಷ ಶಿವಣ್ಣ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ, ಸಂಘದ ಮಾಜಿ ಅಧ್ಯಕ್ಷ ನಿಂಗರಾಜು, ಮುಖಂಡರಾದ ಜಿ.ಸಿ.ರಮೇಶ್‌, ಆದಿಯಪ್ಪ, ಹೇಮಾವತಿ, ಜವರಯ್ಯ, ಬಿ.ಎಸ್.ಶ್ರೀನಿವಾಸ್, ರಾಜ್ಯ ಪರಿಷತ್ ಸದಸ್ಯ ಮಂಜು, ನಿರ್ದೇಶಕರಾದ ಮರಿಗೌಡ ಹಾಗೂ ಎನ್‌.ಜಿ.ಒ.ರವೀಶ್ ಮತ್ತಿತರರು ಅಭಿನಂದಿಸಿದರು.ಇಂದು ಬೇವುಕೊಪ್ಪಲು ಗ್ರಾಮಕ್ಕೆ ಸಿಎಂ ಭೇಟಿ

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.6ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ತಾಲೂಕಿನ ಬೇವುಕಲ್ಲುಕೊಪ್ಪಲು ಗ್ರಾಮದ ಶ್ರೀಹುಚ್ಚರಾಯ ಬೀರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ತಾಲೂಕಿನ ವಿ.ಸಿ ಫಾರಂ ಸ್ಟೇಡಿಯಂ ಆವರಣದಿಂದ 12.40 ಗಂಟೆಗೆ ಹೆಲಿಪ್ಯಾಡ್‌ಗೆ ಆಗಮಿಸುವರು. ನಂತರ 12.50 ಗಂಟೆಗೆ ಬೇವುಕಲ್ಲುಕೊಪ್ಪಲು ಗ್ರಾಮದ ಶ್ರೀಹುಚ್ಚರಾಯ ಬೀರೇಶ್ವರ ಸ್ವಾಮಿ ದೇವಸ್ಥಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮದ್ಯಾಹ್ನ 2.10ಕ್ಕೆ ಮತ್ತೆ ವಿ.ಸಿ ಫಾರಂ ಸ್ಟೇಡಿಯಂ ಆವರಣದಿಂದ ಹೆಲಿಫ್ಯಾಡ್ ಮೂಲಕ ಕೇಂದ್ರ ಸ್ಥಾನ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.