ಜೀವನಶೈಲಿ, ಆಹಾರ ಪದ್ಧತಿ ಬದಲಾವಣೆಯಿಂದ ಆರೋಗ್ಯ: ಡಿಎಚ್‌ಒ

| Published : Sep 28 2025, 02:00 AM IST

ಸಾರಾಂಶ

ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಟ್ರಾನ್ಸ್‌ಕೆಥೆಟರ್ ಅಓರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್‌ನ 6ನೇ ವಾರ್ಷಿಕೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಹೃದಯಕ್ಕೆ ಸಂಬಂಧಿಸಿದಂತೆ ಯುವಜನರಲ್ಲಿ ಹೆಚ್ಚಿನ ಕೊಲೆಸ್ಟರಾಲ್‌ ಪತ್ತೆಯಾಗುತ್ತಿದೆ ಎನ್ನುವ ವರದಿ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಯುವಕರು ಜೀವನಶೈಲಿ, ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದರು.

ನಗರದ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಶನಿವಾರ ವಿಶ್ವ ಹೃದಯ ದಿನದ ಅಂಗವಾಗಿ ಟ್ರಾನ್ಸ್‌ಕೆಥೆಟರ್ ಅಓರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್‌ನ 6ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹೊರಗಿನ ಆಹಾರ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಮಾರಕ. ಇಂದಿನ ಪೀಳಿಗೆ ಪೌಷ್ಟಿಕಾಂಶಕ್ಕಿಂತ ಮುಖ್ಯವಾಗಿ ಬಾಯಿ ರುಚಿಗೆ ತಿನ್ನುವುದು ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣ. ಇದರಿಂದ ಹೃದಯ ಸಮಸ್ಯೆ ಕೂಡ ಹೆಚ್ಚುತ್ತಿದೆ ಎಂದರು.ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇಂಟರ್‌ವೆನ್‌ಕ್ಷನಲ್ ಕಾರ್ಡಿಯೋಲಾಜಿಸ್ಟ್ ಡಾ. ಯೂಸುಫ್ ಕುಂಬ್ಳೆ ಮಾತನಾಡಿ, ಇಂಡಿಯಾನಾ ಆಸ್ಪತ್ರೆ 15 ವರ್ಷಗಳಿಂದ ಹೃದಯ ರಕ್ತನಾಳದ ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಹೃದಯ ಕವಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಂತ್ರಜ್ಞಾನವು ಸುಮಾರು 5 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಾರಂಭವಾಯಿತು. ಕಳೆದ ಆರು ವರ್ಷಗಳಿಂದ ರಚನಾತ್ಮಕ ಹೃದಯ ಕಾಯಿಲೆ ಚಿಕಿತ್ಸೆಯಲ್ಲಿ ಇಂಡಿಯಾನಾ ಆಸ್ಪತ್ರೆ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ ಎಂದರು.

ಆಸ್ಪತ್ರೆಯ ಚೇರ್‌ಮನ್ ಡಾ. ಆಲಿ ಕುಂಬ್ಳೆ, ಆಸ್ಪತ್ರೆಯ ಗ್ರೂಪ್ ಚೀಫ್‌ ಎಕ್ಸಿಕ್ಯೂಟಿವ್ ಆಫೀಸರ್ ಡಾ.ಆದಿತ್ಯ ಭಾರದ್ವಾಜ್, ಮೆಡಿಕಲ್ ಡೈರೆಕ್ಟರ್ ಡಾ. ಅಪೂರ್ವ ಶ್ರೀಜಯದೇವ, ಸಿಇಒ ಇ.ವಿಜಯಚಂದ್ರ ಇದ್ದರು. ಜಗದೀಶ ಯಡಪಡಿತ್ತಾಯ ನಿರೂಪಿಸಿದರು.