ವಿಜಯಪುರ: ನಗರದ ಖ್ಯಾತ ಉದ್ಯಮಿ ರಾಜು ಬಿಜ್ಜರಗಿ ರವರ ಅಧ್ಯಕ್ಷತೆಯಲ್ಲಿ ನೂತನವಾಗಿ ಆರಂಭಿಸುತ್ತಿರುವ ಮೆಡ್‌ ಚಿಕಿತ್ಸಾ ಡೈಗ್ನೋಸ್ಟಿಕ್ ಅಂಡ್ ಹೆಲ್ತಕೇರ್‌ ಸೆಂಟರ್‌ ಅನ್ನು ಏ.19ರಂದು ಬೆಳಗ್ಗೆ 10ಕ್ಕೆ ನಗರದ ಹೊಸ ವಿಠ್ಠಲ ಮಂದಿರ ರಸ್ತೆಯಲ್ಲಿರುವ ಮಿಲನ ಕಾಂಪ್ಲೆಕ್ಸ್ ನಲ್ಲಿ ಲೋಕಾರ್ಪಣೆಯಾಗಲಿದೆ.

ಯರನಾಳ-ಉಕ್ಕಲಿ ಸಂಸ್ಥಾನ ವಿರಕ್ತಮಠದ ಶ್ರೀ ಗುರುಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲ ಮುಖ್ಯದ್ವಾರ ಉದ್ಘಾಟಿಸಲಿದ್ಧಾರೆ.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳರು ಸಿಟಿ-ಸ್ಕ್ಯಾನ್ ಉದ್ಘಾಟಿಸಲಿದ್ದು, ಶಾಸಕ ಸಬನಗೌಡ ಪಾಟೀಲ ಯತ್ನಾಳ ಪ್ರಯೋಗಾಲಯ ಉದ್ಘಾಟಿಸಲಿದ್ದಾರೆ. ಬಳಿಕ ಜಿಲ್ಲೆಯ ಹಲವು ಪ್ರತಿನಿಧಿಗಳು ಇಲ್ಲಿನ ಎಂಆರ್‌ಐ, ಯುಎಸ್‌ಜಿ, ವಿಕ್ಟರ್‌ 2ಡಿ ಎನ್‌ಬಿಎಸ್‌ ಮಶೀನ್, ಟಿಎಂಟಿ ಮಶೀನ್, ಔಷಧಾಲಯ, ಎಕ್ಸ್‌ರೇ ಸೇರಿದಂತೆ ವಿವಿಧ ಅತ್ಯಾಧುನಿಕ ಯಂತ್ರಗಳನ್ನು ಉದ್ಘಾಟಿಸಲಿದ್ದಾರೆ ಎಂದು ರಾಜು ಬಿಜ್ಜರಗಿ ತಿಳಿಸಿದ್ದಾರೆ.