ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಸಾಧಕ ವೈದ್ಯರಿಗೆ ಕೊಡಮಾಡುವ ಹೆಲ್ತ್‌ಕೇರ್‌ ಎಕ್ಸಲೆನ್ಸ್ ಅವಾರ್ಡ್‌-2026 ಪುರಸ್ಕ್ರತರಾದ ಯಂಡಿಗೇರಿ ಆಸ್ಪತ್ರೆಯ ಡಾ.ಪ್ರೀತಿಶ ಯಂಡಿಗೇರಿ ಹಾಗೂ ಡಾ.ಅಶ್ವಿನಿ ಯಂಡಿಗೇರಿ ದಂಪತಿಗೆ ಯಂಡಿಗೇರಿ ಆಸ್ಪತ್ರೆಯ ಶುಶ್ರೂಶಕರು ಹಾಗೂ ಸಿಬ್ಬಂದಿ ಸನ್ಮಾನಿಸಿದರು.

ಎಲುಬು, ಕೀಲು ಮರು ಜೋಡಣೆ ಶಸ್ತ್ರಚಿಕಿತ್ಸಾ ತಜ್ಞ ಡಾ.ಪ್ರೀತಿಶ ಯಂಡಿಗೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ಒಂದು ದಶಕಕ್ಕೂ ಅಧಿಕ ಸಮಯದಿಂದ ವೈದ್ಯ ವೃತ್ತಿಯಲ್ಲಿರುವ ನಾನು ಸುಮಾರು 5 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ನಮ್ಮ ತೆರೆಮರೆಯ ಈ ನಿಸ್ವಾರ್ಥ ಸೇವೆ ಗುರುತಿಸಿದ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ತಂಡ ತೆರೆಯ ಮೇಲೆ ತಂದು ನಮಗೆ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿ ಸೇವೆಗೆ ಸಂದ ಫಲವಾಗಿದ್ದು, ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ.ಅಶ್ವಿನಿ ಯಂಡಿಗೇರಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಹೆರಿಗೆ, ಬಂಜೆತನ ಸೇರಿದಂತೆ ಮಹಿಳೆಯರಿಗೆ ಸಂಬಂಧಿತ ಅನೇಕ ರೋಗಗಳಿಗೆ ಯಂಡಿಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಶುಶ್ರೂಶಕರು ಹಾಗೂ ಎಲ್ಲ ಸಿಬ್ಬಂದಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ನಮಗೆ ಹೆಲ್ತ್‌ಕೇರ್‌ ಎಕ್ಸಲೆನ್ಸ್ ಅವಾರ್ಡ್‌-2026 ಪ್ರಶಸ್ತಿಯನ್ನು ನೀಡಿ ಗೌರವಿಸಿದ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳಾದ ಅಮೋಘ, ಪ್ರವೀಣ, ಸಾವಿತ್ರಿ, ಚನ್ನಪ್ಪ, ಅನೀಲ, ಪ್ರದೀಪ, ಲಕ್ಷ್ಮಿ, ಭರತ, ಪ್ರೀತಿ, ನಿಖಿತಾ, ಜಾನ್ವಿ ಇದ್ದರು.