ಸಾರಾಂಶ
ಸಮರ್ಪಣ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟಿ.ಡಿ. ರಾಜೇಗೌಡ
ಕನ್ನಡಪ್ರಭ ವಾರ್ತೆ, ಕೊಪ್ಪಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ, ಶೃಂಗೇರಿ, ನ.ರಾ. ಪುರ ಮತ್ತು ಖಾಂಡ್ಯ ಹೋಬಳಿಗೆ ಗ್ಯಾರಂಟಿ ಯೋಜನೆಗಾಗಿ ಪ್ರತೀ ವರ್ಷ ₹೨೫೦ ಕೋಟಿ ಅನುದಾನ ಖರ್ಚು ಮಾಡಲಾಗುತ್ತಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಸಮರ್ಪಣ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಸಮಯದಲ್ಲಿ ಅದೆಷ್ಟೋ ಜನ ಊಟವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಔಷಧಿ ಮಾತ್ರೆಗಳಿಲ್ಲದೆ ಕಂಗೆಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಇವು ಮುಕ್ತಿಕಂಡಿವೆ. ಗ್ಯಾರಂಟಿ ಯೋಜನೆಗಳ ನಡುವೆಯೂ ಕೇಂದ್ರದಲ್ಲಿ ಅಗತ್ಯ ಕಾಮಗಾರಿಗಳು ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಸರ್ಕಾರದ ಏಳಿಗೆ ಸಹಿಸದ ವಿಪಕ್ಷಗಳು ಸರ್ಕಾರದ ಮೇಲೆ ಮತ್ತು ನನ್ನ ಮೇಲೆ ಸದಾ ಟೀಕೆ ಮಾಡುತ್ತಿವೆ ಎಂದರು.ಬಿಜೆಪಿ ಸಮಯದಲ್ಲಾದ ಅಭಿವೃದ್ಧಿ ಕಾಂಗ್ರೆಸ್ ಅಧಿಕಾರವಧಿಯಲ್ಲಾದ ಅಭಿವೃದ್ಧಿಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು ಬಿಜೆಪಿ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರಗಳು ನಡೆದಿದ್ದವು.ನನ್ನ ಕ್ಷೇತ್ರದ ಅಭಿವೃದ್ಧಿ ನನ್ನ ಮತದಾರರಿಗೆ ತಿಳಿದಿದೆ. ವಿಪಕ್ಷಗಳ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ಅನಾವಶ್ಯಕ ಟೀಕೆಗಳಿಗೆ ಉತ್ತಸಲ್ಲ ಎಂದು ಹೇಳಿದರು.
ಕೊಪ್ಪ, ಜಯಪುರ ಆಸ್ಪತ್ರೆಗಳ ಉದ್ಘಾಟನೆ ಮುಂದೂಡಿಕೆಜು.೭ರಂದು ಕೊಪ್ಪದಲ್ಲಿ ₹೧೨ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಯಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶಂಕುಸ್ಥಾಪನೆ, ಶೃಂಗೇರಿಯ ನೂರು ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆ ಮುಂದೂಡಲಾಗಿದೆ.
ಜುಲೈನಲ್ಲಿ ಅತಿಯಾದ ಮಳೆಯ ಕಾರಣದಿಂದ ಜಿಲ್ಲಾಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದು ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಶಾಸಕರು ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸುದ್ಧಿಗೋಷ್ಠಿಯಲ್ಲಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ರವೀಂದ್ರ ಕುಕ್ಕುಡಿಗೆ, ಮುಖಂಡರಾದ ಹೆಚ್.ಎಂ. ಸತೀಶ್, ಹೆಚ್.ಎಸ್. ಇನೇಶ್, ಕೆ.ಟಿ. ಮಿತ್ರ, ಅನ್ನಪೂರ್ಣ ನರೇಶ್, ಓಣಿತೋಟ ರತ್ನಾಕರ್, ಸಂದೇಶ್, ವಿಜಯ್ ಕುಮಾರ್, ಸತೀಶ್ ಪೂಜಾರಿ, ಜೇಸುದಾಸ್ (ಜಾರ್ಜ್) ಮುಂತಾದವರಿದ್ದರು.