ಕ್ರೀಡೆಗಳಿಂದ ವ್ಯಕ್ತಿತ್ವ ವ್ಯಕ್ತಿತ್ವ ಆರೋಗ್ಯಕರ ಬೆಳವಣಿಗೆ ಸಾಧ್ಯ : ಕಮಲ ಕಿಶೋರ ಭಂಡಾರಿ

| Published : Aug 05 2024, 12:47 AM IST / Updated: Aug 05 2024, 08:50 AM IST

ಕ್ರೀಡೆಗಳಿಂದ ವ್ಯಕ್ತಿತ್ವ ವ್ಯಕ್ತಿತ್ವ ಆರೋಗ್ಯಕರ ಬೆಳವಣಿಗೆ ಸಾಧ್ಯ : ಕಮಲ ಕಿಶೋರ ಭಂಡಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಆರೋಗ್ಯಕರ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ಇಲ್ಲಿನ ಪಿಇ ಟ್ರಸ್ಟಿನ ಚೇರಮನ್ ಕಮಲ ಕಿಶೋರ ಭಂಡಾರಿ ಹೇಳಿದರು.

 ಗುಳೇದಗುಡ್ಡ :  ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಆರೋಗ್ಯಕರ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ಇಲ್ಲಿನ ಪಿಇ ಟ್ರಸ್ಟಿನ ಚೇರಮನ್ ಕಮಲ ಕಿಶೋರ ಭಂಡಾರಿ ಹೇಳಿದರು.

ಅವರು ಪಟ್ಟಣದ ಭಂಡಾರಿ ಹಾಗೂ ರಾಠಿ ಪದವಿ ಕಾಲೇಜಿನ 2023-24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಧ್ವಜಾರೋಹಣ ಮಾಡಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುತ್ತವೆ. ಸೋಲು ಗೆಲುವಿಗಿಂತ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದ ಆರೋಗ್ಯಕರ ಬೆಳವಣಿಗೆ ಸಾಧ್ಯವೆಂದು ಹೇಳಿದರು.

ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಕ್ರೀಡೆ ಮಹತ್ವದ ಪಾತ್ರವಹಿಸುತ್ತದೆ ಅಲ್ಲದೆ ಕ್ರೀಡಾಸ್ಪೂರ್ಥಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ್‌ ಡಾ.ಎನ್.ವೈ.ಬಡನ್ನವರ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಒಗ್ಗಟ್ಟನ್ನು ಮತ್ತು ಏಕತೆಯನ್ನು ಬೆಳೆಸುತ್ತವೆ ಎಂದು ಹೇಳಿದರು.

ಕ್ರೀಡಾಕೂಟದ ಸಂಯೋಜಕ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಿದಾನಂದ ನಂದಾರ, ಪುರುಷೋತ್ತಮ್ ಝಂವರ್, ಅಶೋಕ ಹೆಗಡೆ, ಸಿದ್ದರಾಮಯ್ಯ ಪುರಾಣಿಕಮಠ, ಎಂ.ಎಸ್. ಪಾಟೀಲ್, ಪಿ.ಬಿ. ಕಣವಿ, ಡಾ.ಸುರೇಖಾ ಎಂಡಿಗೇರಿ, ಡಾ. ಎಸ್. ಹೆಚ್. ದೊಡ್ಡಮನಿ, ಡಾ. ಬೆಳ್ಳೆನವರ, ಬಸವರಾಜ್ ಬಾನದ, ಡಾ.ಚವಡಿ, ಎಂ.ಎಂ ಪಾಟೀಲ, ಡಾ. ಮಂಜಣ್ಣ , ಡಾ. ನಾಗೇಂದ್ರಸ್ವಾಮಿ , ಡಾ.ಮುಖೇಶ್, ಡಾ.ಗಿರೀಶ್ ಕುಮಾರ್, ಶಿರಸಂಗಿ, ಹಾವರಗಿ ಚಿಕ್ಕಾಡಿ, ಪರಗಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಕಾಲೇಜಿನ ಸ್ಪರ್ಧಾಳುಗಳು ಭಾಗವಹಿಸಿದ್ದರು.