ಸಾರಾಂಶ
ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಲು ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅಪರಾಧ ನಿಗ್ರಹ ದಳದ ಸಿಪಿಐ ಎಸ್.ಎಂ. ಶಿರಗುಪ್ಪಿ ಹೇಳಿದರು.
ಗದಗ: ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಲು ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅಪರಾಧ ನಿಗ್ರಹ ದಳದ ಸಿ.ಪಿ.ಐ ಎಸ್.ಎಂ.ಶಿರಗುಪ್ಪಿ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಜೆ.ಟಿ.ಪದವಿ ಪೂರ್ವ ವಿಭಾಗದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕೆ.ಎಲ್.ಇ ಸಂಸ್ಥೆಯ ಕೊಡುಗೆ ಅಪಾರ ಎಂದರು. ಪ್ರಾ. ಪ್ರೊ.ಪಿ.ಜಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಮೊಬೈಲ್ ಯುಗದಲ್ಲಿ ಮೊಬೈಲ್‌ಗೆ ಹೆಚ್ಚಿನ ಗಮನವನ್ನು ಕೊಡದೆ ಪ್ರತಿದಿನ ಬೆಳಗಿನ ಒಂದು ಗಂಟೆಯ ಸಮಯವನ್ನು ಕಡ್ಡಾಯವಾಗಿ ಆರೋಗ್ಯಕ್ಕೆ ಮೀಸಲಿಡಬೇಕು ಎಂದು ತಿಳಿಸಿದರು.ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಭ್ಯಾಸದಷ್ಟೆ ಸಮಯವನ್ನು ಕ್ರೀಡೆಗೂ ಮೀಸಲಿಟ್ಟು ಕ್ರೀಡಾ ಕ್ಷೇತ್ರದಲ್ಲಿಯೂ ಹೆಚ್ಚಿನ ಸಾಧನೆ ಮಾಡಲು ಅವಕಾಶವಿದೆ ಎಂದರು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಈಶಣ್ಣಾ ಮುನವಳ್ಳಿ ಸೇರಿದಂತೆ ಮಹಾವಿದ್ಯಾಲಯದ ಸಮಸ್ತ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ತೇಜಶ್ವಿನಿ ಮಾಗಡಿ ಪ್ರಾರ್ಥಿಸಿದರು. ಪಪೂ ಪ್ರಾ. ಎಸ್.ಬಿ.ಹಾವೇರಿ ಸ್ವಾಗತಿಸಿದರು. ನೇತ್ರಾ ನಾಗಲೋಟಿಮಠ ಹಾಗೂ ರಾಜೇಶ್ವರಿ ರಾಜೂರ ನಿರೂಪಿಸಿದರು. ಸಿ.ಆರ್. ನಾಗಭೂಷಣ ವಂದಿಸಿದರು.