ನೆಲಮಂಗಲ: ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೀಪಾವಳಿ ಅಂಗವಾಗಿ ಐದು ದಿನಗಳ ಕಾಲ ನಡೆದ ಪಟಾಕಿ ಮಾರಾಟದ ಬಳಿಕ ಮೈದಾನ ಕಸದ ತೊಟ್ಟಿಯಂತಾಗಿದೆ. ಎಲ್ಲೆಂದರಲ್ಲಿ ಖಾಲಿ ಬಿಯರ್ ಬಾಟಲಿಗಳು, ಪಟಾಕಿ ಡಬ್ಬಗಳ ತ್ಯಾಜ್ಯ ಹಾಗೂ ಆಹಾರದ ಕಸ ಹರಡಿಕೊಂಡಿದ್ದು, ಕ್ರೀಡಾಂಗಣದ ದುಸ್ಥಿತಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ
ನೆಲಮಂಗಲ: ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೀಪಾವಳಿ ಅಂಗವಾಗಿ ಐದು ದಿನಗಳ ಕಾಲ ನಡೆದ ಪಟಾಕಿ ಮಾರಾಟದ ಬಳಿಕ ಮೈದಾನ ಕಸದ ತೊಟ್ಟಿಯಂತಾಗಿದೆ. ಎಲ್ಲೆಂದರಲ್ಲಿ ಖಾಲಿ ಬಿಯರ್ ಬಾಟಲಿಗಳು, ಪಟಾಕಿ ಡಬ್ಬಗಳ ತ್ಯಾಜ್ಯ ಹಾಗೂ ಆಹಾರದ ಕಸ ಹರಡಿಕೊಂಡಿದ್ದು, ಕ್ರೀಡಾಂಗಣದ ದುಸ್ಥಿತಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಹತ್ತಾರು ವರ್ಷಗಳಿಂದ ಇದೇ ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತಿತ್ತು. ಆದರೆ ಈ ಬಾರಿ ಕಂಡು ಬಂದಿರುವಷ್ಟು ಅವ್ಯವಸ್ಥೆ ಹಿಂದೆಂದೂ ಕಂಡುಬಂದಿಲ್ಲ ಎಂಬುದು ಸ್ಥಳೀಯರ ಆರೋಪ.ಬಿಯರ್ ಬಾಟಲಿ, ಪಟಾಕಿ ಡಬ್ಬಗಳೇ ಎಲ್ಲೆಡೆ:
ಕ್ರೀಡಾಂಗಣದಾದ್ಯಂತ ಖಾಲಿ ಬಿಯರ್ ಬಾಟಲಿಗಳು ಹಾಗೂ ಆಹಾರ ತ್ಯಾಜ್ಯದ ರಾಶಿ ಬಿದ್ದಿವೆ. ಇದರ ಜೊತೆಗೆ ಪಟಾಕಿ ಅಂಗಡಿ ಮಾಲೀಕರೇ ಕ್ರೀಡಾಂಗಣದ ಆವರಣದಲ್ಲಿ ಪಟಾಕಿಗಳನ್ನು ಸಿಡಿಸಿರುವುದರಿಂದ ಸುಟ್ಟ ಪಟಾಕಿ ಡಬ್ಬಗಳು, ಕಾಗದದ ಚೂರುಗಳು ಹಾಗೂ ಇತರ ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿಕೊಂಡಿವೆ. ವ್ಯಾಪಾರ ಮುಗಿದ ಬಳಿಕ ಸ್ವಚ್ಛತೆ ಕಾಪಾಡುವ ಜವಾಬ್ದಾರಿಯನ್ನು ನಿರ್ಲಕ್ಷಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಮಳಿಗೆಗಳ ಸಂಖ್ಯೆ ಹೆಚ್ಚಳವೇ ಅವ್ಯವಸ್ಥೆಗೆ ಕಾರಣ:
ಈ ಬಾರಿ ಪಟಾಕಿ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸಿರುವುದರಿಂದ ಕ್ರೀಡಾಂಗಣದಲ್ಲಿ ಹೆಚ್ಚಿನ ಜನಸಂದಣಿ ಹಾಗೂ ತ್ಯಾಜ್ಯ ಸಂಗ್ರಹವಾಗಿದೆ ಎಂಬ ದೂರುಗಳಿವೆ. ಊಟ ಮಾಡಿ, ಮದ್ಯಪಾನ ಮಾಡಿ ಬಾಟಲಿಗಳನ್ನು ಅಲ್ಲೇ ಬಿಟ್ಟು ಹೋಗಿರುವುದು ಮಾತ್ರವಲ್ಲದೆ, ಪಟಾಕಿ ಮಾರಾಟಗಾರರಿಂದಲೇ ಮೈದಾನದಲ್ಲಿ ಪಟಾಕಿ ಸಿಡಿಸಿರುವ ಆರೋಪವೂ ಇದೆ.ಕ್ರೀಡಾಂಗಣದ ಸ್ವಚ್ಛತೆಗೆ ಹೊಣೆ ಯಾರು:
ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಮೀಸಲಾದ ಕ್ರೀಡಾಂಗಣವನ್ನು ವ್ಯಾಪಾರಕ್ಕಾಗಿ ಬಳಸಿದ ಬಳಿಕ ಸ್ವಚ್ಛವಾಗಿ ಹಸ್ತಾಂತರಿಸುವ ಹೊಣೆಗಾರಿಕೆ ಯಾರದ್ದು? ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲವೇ ಎಂಬ ಪ್ರಶ್ನೆಗಳು ಎದುರಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಬಿಯರ್ ಬಾಟಲಿ, ಪಟಾಕಿ ಡಬ್ಬಗಳ ತ್ಯಾಜ್ಯ ಸೇರಿದಂತೆ ಎಲ್ಲಾ ಕಸವನ್ನು ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಪಟಾಕಿ ಮಳಿಗೆಗಳಿಗೆ ಅನುಮತಿ ನೀಡುವಾಗ ಸ್ವಚ್ಛತೆ ಮತ್ತು ಮೈದಾನದ ಸಂರಕ್ಷಣೆಗೆ ಕಟ್ಟುನಿಟ್ಟಿನ ಷರತ್ತು ವಿಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಕೋಟ್...............
ನಾವು ಪ್ರತಿನಿತ್ಯ ಕ್ರೀಡಾಂಗಣಕ್ಕೆ ವಾಯುವಿಹಾರಕ್ಕೆಂದು ತೆರಳುತ್ತೇವೆ. ಈ ಬಾರಿ ಪಟಾಕಿ ಮಳಿಗೆಗಳಿಂದ ಕ್ರೀಡಾಂಗಣದ ತುಂಬಾ ತ್ಯಾಜ್ಯ ಹರಡಿದೆ. ವಾಯು ವಿಹಾರದ ವೇಳೆ ಗಾಳಿಗೆ ಇಲ್ಲಿನ ತ್ಯಾಜ್ಯಗಳೆಲ್ಲ ಮೈಮೇಲೆ ಹಾರುತ್ತವೆ. ನಗರಸಭೆ ಮುಂದಿನ ಬಾರಿ ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕೊಡುವಾಗ ಪಟಾಕಿ ಮಾರಾಟ ಮುಗಿದ ಕೂಡಲೇ ಕ್ರೀಡಾಂಗಣ ಸ್ವಚ್ಛಗೊಳಿಸಬೇಕೆಂಬ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಬೇಕಿದೆ.-ಚೈತ್ರ ಡಿ ಟಿ, ಸ್ಥಳೀಯ ನಿವಾಸಿ
ಕೋಟ್..........ಪಟಾಕಿ ಮಾರಾಟದ ಬಳಿಕ ಮೈದಾನದಲ್ಲಿ ಖಾಲಿ ಬಾಟಲಿ, ಆಹಾರ ತ್ಯಾಜ್ಯ, ಪಟಾಕಿ ಡಬ್ಬಗಳು ಹಾಗೂ ಸುಟ್ಟ ಪಟಾಕಿಗಳ ಅವಶೇಷಗಳು ಎಲ್ಲೆಂದರಲ್ಲಿ ಬಿದ್ದಿವೆ. ಕ್ರೀಡಾಂಗಣದಲ್ಲಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಯಾರೂ ವಹಿಸಿಕೊಂಡಿಲ್ಲ. ಸಾರ್ವಜನಿಕ ಬಳಕೆಯ ಮೈದಾನವನ್ನು ಈ ರೀತಿ ದುಸ್ಥಿತಿಗೆ ತಳ್ಳಿರುವುದು ಬೇಸರದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ವಚ್ಛತೆ ಕೈಗೊಂಡು, ಮುಂದಿನ ವರ್ಷದಿಂದ ಮಳಿಗೆಗಳ ಸಂಖ್ಯೆ ಮತ್ತು ನಿರ್ವಹಣೆಗೆ ಸೂಕ್ತ ನಿಯಮ ರೂಪಿಸಬೇಕು.
-ಜನಸೈನ್ಯ ನರಸಿಂಹಯ್ಯ, ಹೋರಾಟಗಾರರು11ಕೆಎನ್ಎಲ್ಎಂ2 -
ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೀಪಾವಳಿ ಪ್ರಯುಕ್ತ ಪಟಾಕಿ ಮಾರಾಟದ ಬಳಿಕ ಮೈದಾನ ಕಸದ ತೊಟ್ಟಿಯಂತಾಗಿರುವುದು.11ಕೆಎನ್ಎಲ್ಎಂ3 -
ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಧ್ಯದ ಬಾಟಲಿ ಬಿದ್ದಿರುವುದು.11ಕೆಎನ್ಎಲ್ಎಂ4 -
ಚೈತ್ರ ಡಿ ಟಿ, ಸ್ಥಳೀಯ ನಿವಾಸಿ.11ಕೆಎನ್ಎಲ್ಎಂ5 -
ಜನಸೈನ್ಯ ನರಸಿಂಹಯ್ಯ, ಹೋರಾಟಗಾರರು.