ಮಳೆಗೆ ಬೀಳುತ್ತಿರುವ ಮನೆಗಳು

| Published : Jul 26 2024, 01:31 AM IST

ಸಾರಾಂಶ

ಗಾಳಿ ಸಹಿತ ಸುರಿದ ಮಳೆಗೆ ಪಟ್ಟಣದ ಬೇಲೂರು ರಸ್ತೆಯಲ್ಲಿರುವ ಆಸಿಯಾ ಬಾನುರವರಿಗೆ ಸೇರಿದ ಮನೆಯ ಮತ್ತು ಈದ್ಗಾ ಬೀದಿಯಲ್ಲಿರುವ ಶಫಿ ರವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು, ಮನೆಯ ಸುತ್ತಲೂ ಬಿರುಕು ಕಾಣಿಸಿಕೊಂಡು ಕುಸಿಯುವ ಹಂತದಲ್ಲಿದೆ. ಅದೆ ರೀತಿ ಪಟ್ಟಣದ ಮೇಲಳ್ಳಿ ಬೀದಿಯಲ್ಲಿರುವ ವಾಮಿದ ರವರಿಗೆ ಸೇರಿದ ಮನೆಯು ಸಂಪೂರ್ಣ ಹಾನಿಯಾಗಿದೆ.

ಕನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಭಾಗದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತಗೊಂಡಿಂದ್ದು ಮನೆಗಳ ಗೋಡೆ ನೆಲಕಚ್ಚುತ್ತಿವೆ.

ಬುಧವಾರ ರಾತ್ರಿ ಗಾಳಿ ಸಹಿತ ಸುರಿದ ಮಳೆಗೆ ಪಟ್ಟಣದ ಬೇಲೂರು ರಸ್ತೆಯಲ್ಲಿರುವ ಆಸಿಯಾ ಬಾನುರವರಿಗೆ ಸೇರಿದ ಮನೆಯ ಮತ್ತು ಈದ್ಗಾ ಬೀದಿಯಲ್ಲಿರುವ ಶಫಿ ರವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು, ಮನೆಯ ಸುತ್ತಲೂ ಬಿರುಕು ಕಾಣಿಸಿಕೊಂಡು ಕುಸಿಯುವ ಹಂತದಲ್ಲಿದೆ. ಅದೆ ರೀತಿ ಪಟ್ಟಣದ ಮೇಲಳ್ಳಿ ಬೀದಿಯಲ್ಲಿರುವ ವಾಮಿದ ರವರಿಗೆ ಸೇರಿದ ಮನೆಯು ಸಂಪೂರ್ಣ ಹಾನಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮನೆಯ ವಾರಸುದಾರರು, ಮಳೆಯಿಂದಾಗಿ ನಮ್ಮ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಗೊಂಡಿತು. ತಕ್ಷಣ ನಾವು ಪಕ್ಕದ ಮನೆಯಲ್ಲಿ ಆಶ್ರಯ ಪಡೆದು ಮುಂದೆ ಆಗಬಹುದಾದ ಅನಾಹುತಗಳಿಂದ ತಪ್ಪಿಸಿಕೊಂಡಿದ್ದೇವೆ. ನಾವು ತೆರಳಿದ ಕೆಲ ಹೊತ್ತಿನಲ್ಲಿ ಕುಸಿದು ಬಿದ್ದಿದೆ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ನೆಲೆಸಲು ಇದ್ದೊಂದು ಮನೆಯು ಹಾನಿಯಾಗಿದ್ದು ಬೇರೆ ಸೂರು ಕಲ್ಪಿಸಿಕೊಡಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.