ಸಾರಾಂಶ
ಗುಂಡ್ಲುಪೇಟೆ ಊಟಿ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಹೆದ್ದಾರಿಯಲ್ಲಿ ನೀರು ಹರಿಯುವ ದೃಶ್ಯ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ನಿರೀಕ್ಷೆಯಂತೆ ಮಡಹಳ್ಳಿ ಸರ್ಕಲ್ ನೀರು, ಆರ್‌ಟಿಒ ಕಚೇರಿ ಬಳಿ ನೀರು ನಿಂತಿದೆ. ಮಡಹಳ್ಳಿ ಸರ್ಕಲ್ ಮಳೆಗೆ ಚಿಕ್ಕ ಕೆರೆಯಂತಾಗಿತ್ತು. ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಪರದಾಟ ನಡೆಸಿದರು.ಮೈಸೂರು ಊಟಿ ಹೆದ್ದಾರಿಯ ಡಿ.ದೇವರಾಜ ಅರಸು ಕ್ರೀಡಾಂಗಣದ ಮುಂದೆ ಮಳೆಯ ನೀರು ಹೆದ್ದಾರಿಯಲ್ಲಿ "ನಂದಿನಿ ಕೆಫೆ ಮೂ " ತನ ಹರಿದಾಡಿದೆ. ಹಳೆಯ ಕ್ಷೇತ್ರ ಶಿಕ್ಷಣಾಧಿಕಾರಿ ಆವರಣದಲ್ಲಿ ಮಳೆಯ ನೀರು ನಿಂತಿದೆ, ಬಸ್ ನಿಲ್ದಾಣದ ಮುಂದೆಯೂ ಮಳೆ ನೀರು ನಿಂತ ಕಾರಣ ಪ್ರಯಾಣಿಕರು ಪರದಾಟ ನಡೆಸಿದರು.
ಪುರಸಭೆಗೆ ಹಿಡಿ ಶಾಪ ಹಾಕಿದ ಸಾರ್ವಜನಿಕರು:ಮಳೆ ಬಂದಾಗಳೆಲ್ಲ ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲುವ ಕಾರಣ. ಈ ರಸ್ತೆಯಲ್ಲಿ ಸಂಚರಿಸುವ ಜನರು ಹಾಗೂ ಸವಾರರು ಪುರಸಭೆಗೆ ಹಿಡಿ ಶಾಪ ಹಾಕಿದರು. ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲದಂತೆ ಮಾಡಲು ಪುರಸಭೆ ಪ್ರಯತ್ನವನ್ನೇ ಮಾಡುತ್ತಿಲ್ಲ. ಇನ್ನಾದರೂ ಕೂಡಲೇ ಎಚ್ಚೆತ್ತು ಮಳೆ ನೀರು ನಿಲ್ಲದಂತೆ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.