ಹೊನ್ನಾವರದಲ್ಲಿ ಮಳೆಯ ಅಬ್ಬರ, ಕಾಳಜಿ ಕೇಂದ್ರ ಮುಂದುವರಿಕೆ

| Published : Jul 06 2024, 12:53 AM IST

ಹೊನ್ನಾವರದಲ್ಲಿ ಮಳೆಯ ಅಬ್ಬರ, ಕಾಳಜಿ ಕೇಂದ್ರ ಮುಂದುವರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಎರಡು ದಿನದಿಂದ ವರುಣ ಎಡಬಿಡದೇ ಅಬ್ಬರಿಸಿದ್ದು, ಗುಂಡಬಾಳ ಹಾಗೂ ಭಾಸ್ಕೇರಿ ನದಿ ತೀರದ ತಗ್ಗು ಪ್ರದೇಶದ ತೋಟ, ಮನೆಗಳು ಜಲಾವೃತವಾಗಿತ್ತು.

ಹೊನ್ನಾವರ: ತಾಲೂಕಿನಲ್ಲಿ ವರುಣಾರ್ಭಟ ಮುಂದುವರಿದಿದ್ದು, ಸಿದ್ದಾಪುರ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಶುಕ್ರವಾರ ಗುಂಡಬಾಳ ನದಿ ತೀರದಲ್ಲಿ ಪ್ರವಾಹ ಇಳಿಮುಖವಾದರೂ ಆರು ಕಾಳಜಿ ಕೇಂದ್ರ ಮುಂದುವರಿದಿದೆ.

ಕಳೆದ ಎರಡು ದಿನದಿಂದ ವರುಣ ಎಡಬಿಡದೇ ಅಬ್ಬರಿಸಿದ್ದು, ಗುಂಡಬಾಳ ಹಾಗೂ ಭಾಸ್ಕೇರಿ ನದಿ ತೀರದ ತಗ್ಗು ಪ್ರದೇಶದ ತೋಟ, ಮನೆಗಳು ಜಲಾವೃತವಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಮಳೆ ಇದ್ದರೂ, ಘಟ್ಟದ ಮೇಲಿನ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ನೆರೆಯು ಇಳಿಮುಖವಾಗಿದೆ. ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರು ಪುನಃ ಮನೆಗೆ ತೆರಳಿದ್ದರು. ಶುಕ್ರವಾರ ಮಧ್ಯಾಹ್ನದ ನಂತರ ಮಳೆಯ ಪ್ರಮಾಣ ಅಧಿಕವಾಗಿರುದರಿಂದ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಡಿಬೈಲ್ ನಂ. 1, ಹಿರಿಯ ಪ್ರಾಥಮಿಕ ಶಾಲೆ ಗುಂಡಿಬೈಲ್ ನಂ. 2, ಹೆಬೈಲ್ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಬಾಳ ನಂ. 1 ಶಾಲೆಗಳಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಬಾಳ ನಂ. 2 ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇರೊಳ್ಳಿ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. 88 ಕುಟುಂಬದಿಂದ 195ಜನರು ಕಾಳಜಿ ಕೇಂದ್ರದಲ್ಲಿದ್ದಾರೆ.

ಸಚಿವರ ಭೇಟಿ:

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಗುಂಡಬಾಳ ನದಿತಟದ ನೆರೆ ಸಂತ್ರಸ್ತರಿರುವ ಕಾಳಜಿ ಕೇಂದ್ರಗಳಿಗೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿದರು.ಪರಿಹಾರ: ಗುಂಡಬಾಳ ಎಡ ಹಾಗೂ ಬಲ ದಂಡೆಯಲ್ಲಿ ಜನರು ಬಹಳಷ್ಟು ಕಷ್ಟದಲ್ಲಿದ್ದಾರೆ. ಸಂತ್ರಸ್ತರಿಗೆ 24 ಗಂಟೆಗಳೊಳಗೆ ಪರಿಹಾರ ನೀಡಲು ಆದೇಶ ಮಾಡಲಾಗಿದೆ. ಪ್ರತಿ ತಹಸೀಲ್ದಾರ್ ಖಾತೆಯಲ್ಲಿ ₹50 ಲಕ್ಷ ಇದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ₹9 ಕೋಟಿ ಇದೆ. ಮನೆ ಕಳೆದುಕೊಂಡವರಿಗೆ 24 ಗಂಟೆಯಲ್ಲಿ ₹1 ಲಕ್ಷ ನೀಡುವುದಲ್ಲದೇ 1 ಮನೆ ನೀಡುವ ಯೋಜನೆಯಿದೆ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.