ಭಾರಿ ಮಳೆ: ಚಾರ್ಮಾಡಿ ಘಾಟ್‌ನಲ್ಲಿ ಮರಗಳು ಉರುಳಿ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತ

| Published : Oct 10 2024, 02:32 AM IST / Updated: Oct 10 2024, 11:01 AM IST

ಭಾರಿ ಮಳೆ: ಚಾರ್ಮಾಡಿ ಘಾಟ್‌ನಲ್ಲಿ ಮರಗಳು ಉರುಳಿ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಚಾರ್ಮಾಡಿ ಘಾಟಿ ಪರಿಸರದಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಭಾರಿ ಗಾಳಿ, ಮಳೆ ಸುರಿದಿದ್ದು ಭೂಕುಸಿತ ಸಂಭವಿಸಿದೆ.ಘಾಟಿಯ ಮೂರನೇ ತಿರುವಿನ ಬಳಿ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಮರಗಳು ಉರುಳಿ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತವೂ ಉಂಟಾಗಿದೆ.

 ಬೆಳ್ತಂಗಡಿ ಚಾರ್ಮಾಡಿ ಘಾಟಿ ಪರಿಸರದಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಭಾರಿ ಗಾಳಿ, ಮಳೆ ಸುರಿದಿದ್ದು ಭೂಕುಸಿತ ಸಂಭವಿಸಿದೆ.

ಘಾಟಿಯ ಮೂರನೇ ತಿರುವಿನ ಬಳಿ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಮರಗಳು ಉರುಳಿ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತವೂ ಉಂಟಾಗಿದೆ. ಮರಗಳು ರಸ್ತೆಗೆ ಬಿದ್ದ ಪ್ರದೇಶದಲ್ಲಿ ಒಂದು ವಾಹನ ಮಾತ್ರ ಸಂಚರಿಸುವಷ್ಟು ಜಾಗ ಇದ್ದು ಬೇಕಾಬಿಟ್ಟಿ ವಾಹನಗಳನ್ನು ನುಗ್ಗಿಸಿದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು.ನದಿಯಂತಾದ ಹೆದ್ದಾರಿ:

ಘಾಟಿ ಪ್ರದೇಶದಲ್ಲಿ ನಿರಂತರ ಎರಡು ತಾಸಿಗಿಂತ ಅಧಿಕ ಕಾಲ ಮಳೆ ಸುರಿದ ಕಾರಣ ಘಾಟಿ ಹೆದ್ದಾರಿಯೇ ನದಿಯಂತಾಗಿತ್ತು. ಘಾಟಿ ಪ್ರದೇಶದಲ್ಲಿರುವ ಹಲವಾರು ಜಲಪಾತಗಳು ರಸ್ತೆ ತನಕವೂ ಧುಮ್ಮಿಕ್ಕಿದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಲಪಾತಗಳಿಂದ ರಸ್ತೆಗೆ ಬಿದ್ದ ನೀರು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ಹಳ್ಳದಂತೆ ಹರಿಯಿತು.ಗುಡ್ಡ ಕುಸಿತ ಹಾಗೂ ಮರ ಉರುಳಿರುವ ಕುರಿತು ಸ್ಥಳೀಯರಾದ ಚಾರ್ಮಾಡಿ ಹಸನಬ್ಬ ಹಾಗು ಇತರರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.ಮರ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ಇಲ್ಲಿ ಯಾವುದೇ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ.