ಇನ್ನು ಕೃಷಿ ಬಳಕೆ ವಿದ್ಯುತ್ ಪೂರೈಕೆ ಮಾಡಲು ಅಳವಡಿಸಿರುವ ಕಂಬಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದ್ದು, ಅದರ ಲೆಕ್ಕಾಚಾರಕ್ಕೆ ಇನ್ನೂ ಇಲಾಖೆ ಮುಂದಾಗಿಲ್ಲ.
ಬಂಗಾರಪೇಟೆ: ತಾಲೂಕಿನಲ್ಲಿಶೆರಡು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಮಳೆಗೆ ೩೧.೪೬ ಹೆಕ್ಟರ್ ವಿವಿಧ ತೋಟಗರಿಕಾ ಬೆಳೆಗಳು ನಾಶವಾಗಿದ್ದು, ರೈತರಿಗೆ ೧೫.೫೩ ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ತಾಲೂಕಿನಲ್ಲಿ ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬಾರಿ ಪ್ರಮಾಣದಲ್ಲಿ ಮಳೆಯ ನಡುವೆ ಬಿರುಗಾಳಿ ಬೀಸಿದೆ. ಗಾಳಿಯ ವೇಗಕ್ಕೆ ಬೂದಿಕೋಟೆ ಮತ್ತು ಕಾಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಿಕ್ಕೆ ಅಳವಡಿಸಿದ್ದ ಸುಮಾರು ೭೦ ವಿದ್ಯುತ್ ಕಂಬಗಳು ಮರಿದು ಬಿದ್ದಿದ್ದು, ಇಲಾಖೆಗೆ ಸುಮಾರು ೬ ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಕೃಷಿ ಬಳಕೆ ವಿದ್ಯುತ್ ಪೂರೈಕೆ ಮಾಡಲು ಅಳವಡಿಸಿರುವ ಕಂಬಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದ್ದು, ಅದರ ಲೆಕ್ಕಾಚಾರಕ್ಕೆ ಇನ್ನೂ ಇಲಾಖೆ ಮುಂದಾಗಿಲ್ಲ. ಇತ್ತ ಗಾಳಿಯ ರಭಸಕ್ಕೆ ೩೦ಕ್ಕೂ ಹೆಚ್ಚಿನ ಮರಗಳು ಧರೆಗುರುಳಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿತ್ತು. ಬೆಳೆ ನಷ್ಟವಾಗಿದ್ದ ಕಾರಣ ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.ಬಿರುಗಾಳಿಗೆ ಮಾವು ಶೇ ೭೦ ರಷ್ಟು ಉದುರಿದ್ದು, ೧೪ ಹೆಕ್ಟರ್‌ನಷ್ಟು ನಾಶವಾಗಿದ್ದು ರೈತರಿಗೆ ೭ ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬಾಳೆ ೧೦.೭೮ ಹೆಕ್ಟರ್ ನಾಶವಾಗಿದ್ದು, ೫.೩೯ ಲಕ್ಷ ರೈತರಿಗೆ ನಷ್ಟವಾಗಿದೆ. ಟೊಮೇಟೊ ೦.೮೬ ಹೆಕ್ಟರ್ ನಾಶ ೪೩ ಸಾವಿರ ನಷ್ಟವಾಗಿದ್ದು, ವಿವಿಧ ತರಕಾರಿ ಬೆಳೆಗಳು ೩.೮೨ ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿ ೧.೯೧ ಲಕ್ಷ ನಷ್ಟ ಉಂಟಾಗಿದೆ. ಇದರೊಟ್ಟಿಗೆ ೨ ಹೆಕ್ಟರ್‌ನಲ್ಲಿ ಹೂವು ನಾಶವಾಗಿ ಸುಮಾರು ೮೦ ಸಾವಿರದಷ್ಟು ರೈತರಿಗೆ ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಸರ್ಕಾರಕ್ಕೆ ಪರಿಹಾರಕ್ಕಾಗಿ ವರದಿಯನ್ನು ತಯಾರಿಸಿದ್ದಾರೆ.