ಸಾರಾಂಶ
ಕಾರ್ಕಳ ಹೆಬ್ರಿ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ತೋಟಗಳಲ್ಲಿನ ಅಡಕೆ ಮರಗಳು ಧರಾಶಾಹಿಯಾಗಿದೆ. ಲಕ್ಷಾಂತರ ರು. ಹಾನಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ಬುಧವಾರ ಮುಂಜಾನೆ ಬೀಸಿದ ಭಾರಿ ಸುಳಿಗಾಳಿಗೆ ಮನೆ, ತೋಟಗಳಲ್ಲಿನ ಅಡಕೆ ಮರಗಳು ಧರಾಶಾಹಿಯಾಗಿದ್ದು ಲಕ್ಷಾಂತರ ರು. ಹಾನಿಯಾಗಿದೆ.ಪಶ್ಚಿಮ ಘಟ್ಟದ ತಪ್ಪಲಿನ ಕಬ್ಬಿನಾಲೆ ಹೋಗುವ ರಸ್ತೆಯ ಮೇಲೆ ಮರಗಳು ಬಿದ್ದು ಹೆಬ್ರಿ ಕಬ್ಬಿನಾಲೆ ಮುನಿಯಾಲು ಸಂಪರ್ಕ ರಸ್ತೆಯು ಸಂಪೂರ್ಣ ಬಂದ್ ಆಗಿತ್ತು. ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ತೋಟಗಳಲ್ಲಿನ ಅಡಕೆ ಮರಗಳು ಧರೆಗುರುಳಿದ ಕಾರಣ ಆರು ಲಕ್ಷ ರು. ಗೂ ಹೆಚ್ಚು ನಷ್ಟ ಸಂಭವಿಸಿದೆ.
ಕಬ್ಬಿನಾಲೆ ಕೇಸರಿಬೈಲು ಲಕ್ಷ್ಮೀ ಸಂಜೀವ ರೈ ,.ಸದಾನಂದ ಶೆಟ್ಟಿ ಎಂಬವರು ಮನೆ ಹಾಗು ಮನೆಯ ಹಟ್ಟಿಗಳಿಗೆ ಹಾನಿ ಸಂಭವಿಸಿದೆ. ಗಾಳಿಯ ತೀವ್ರತೆಗೆ ಮನೆಯ ತಗಡು ಸೀಟು, ಹಂಚು ಹಾರಿಹೋಗಿದೆ. ಕಬ್ಬಿನಾಲೆಯ ಭಾಗದಲ್ಲಿ ಲಕ್ಷ್ಮೀ ಸಂಜೀವ ರೈ, ಸದಾನಂದ ಶೆಟ್ಟಿ, ಸುಧಾಕರ ಶೆಟ್ಟಿ, ರಾಜನ್ ಫಿಲಿಪ್ಸ್ ಅವರ ಅಡಕೆ, ತೆಂಗು ತೋಟಕ್ಕೆ ಭಾರಿ ಹಾನಿಯಾಗಿದೆ. 600ಕ್ಕೂ ಅಡಿಕೆ, 25ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿವೆ. ಕಾರ್ಕಳ ತಾಲೂಕಿನ ಮಾಳ ಕೆರುವಾಶೆಗಳಲ್ಲಿ ಉತ್ತಮ ಮಳೆಯು ಸುರಿದಿದೆ.ಘಟನಾ ಸ್ಥಳಕ್ಕೆ ಹೆಬ್ರಿ ತಹಸೀಲ್ಧಾರ್ ಎಸ್.ಎ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ನಿರೀಕ್ಷಕ ಹಿತೇಶ್ ಯು ಬಿ, ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ, ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಭೇಟಿ ನೀಡಿದ್ದಾರೆ.