ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಾಥಪುರ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಕಟಾವು ಪ್ರಾರಂಭವಾದರೂ ತಗ್ಗುಪ್ರದೇಶದ ಹೊಗೆಸೊಪ್ಪು ಕಟ್ಟಾವು ಮಾಡಲು ಅನಾನುಕೂಲವಾಗಿದೆ. ಅತಿಯಾದ ಮಳೆ ಮತ್ತು ತೇವಾಂಶದ ಪರಿಣಾಮ ಸುಮಾರು 200ಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿದ್ದ ಹೊಗೆಸೊಪ್ಪು ಬೆಳೆವಣಿಗೆಯಾಗದೆ ರೈತರು ನಷ್ಟ ಅನುಭವಿಸುವಂತಾಗಿದೆ.ರಾಮನಾಥಪುರದ ತಂಬಾಕು ಮಾರುಕಟ್ಟೆಯ ಫ್ಲಾಟ್ ಫಾರಂ 7ರ ಮತ್ತು 63ರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಹೊಗೆಸೊಪ್ಪು ಬೆಳೆಯು, ಭಾಗಶಃ ಭಾರಿ ಹಾನಿಯಾಗಿದೆ. ಕೆಲವು ಬೆಳಗಾರರ ಬೆಳೆ ಸಂಪೂರ್ಣ ಹಾನಿಯಾಗಿದೆ. ಕೊಣನೂರು, ಮಲ್ಲಿಪಟ್ಟಣ, ದೊಡ್ಡಮಗ್ಗೆ, ರಾಮನಾಥಪುರ ಮುಂತಾದ ಫ್ಲಾಟ್ ಫಾರಂ 7 ಹಾಗೂ 63 ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬೆಳೆಗಳು ಹಾನಿಯಾಗಿದೆ.ರಾಮನಾಥಪುರ ಫ್ಲಾಟ್ ಫಾರಂ ಎರಡರಿಂದ ಸುಮಾರು 20 ಸಾವಿರ ಹೆಚ್ಚು ತಂಬಾಕು ಬೆಳೆಗಾರರು ಇದ್ದು, ಪ್ರಮುಖ ವಾಣಿಜ್ಯ ಬೆಳೆಯಾಗಿರುವುದರಿಂದ ತಂಬಾಕಿನಲ್ಲಿ ಕೋಟ್ಯಂತರ ರುಪಾಯಿ ವ್ಯವಹಾರ ನಡೆಯುತ್ತದೆ. ತಂಬಾಕು ಕೆಲವು ಕಡೆಗಳಲ್ಲಿ ಈಗಾಗಲೇ ಕಟಾವಿಗೆ ಬಂದಿದ್ದು ಕೆಲವು ಬೆಳೆಗಾರರು ಉತ್ಸಾಹದಿಂದ ತಂಬಾಕು ಸೊಪ್ಪು ಹದ ಮಾಡುವುದರಲ್ಲಿ ಮುಗ್ನರಾಗಿದ್ದಾರೆ. ಅದರೆ ಮತ್ತೆ ಮೂರು ದಿವಸಗಳಿಂದ ಮಳೆ ಆರಂಭವಾಗಿದ್ದು ಮಳೆಯನ್ನು ಲೆಕ್ಕಿಸದೆ ಕೆಲವರು ಕಟಾವು ಮತ್ತು ಹದ ಮಾಡುವಿಕೆ ಮುಂದುವರಿಸಿದ್ದಾರೆ.
ಈ ವರ್ಷ ಮೇ ಮತ್ತು ಜೂನ್‌ನಲ್ಲಿ ಸತತವಾಗಿ ವಾರಗಟ್ಟಲೆ ಮಳೆ ಸುರಿದಿರುವುದರಿಂದ ಅತಿಯಾದ ತಂಬಾಕು ನಾಟಿ ಮಾಡಿದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಹೊಗೆ ಸೊಪ್ಪು ಗಿಡಗಳು ಬೆಳವಣಿಗೆ ಆಗದೆ ಹೊಗೆಸೊಪ್ಪು ಉತ್ಪಾದನೆ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಾಗಲಿದೆ. ಆದರೆ ರೈತರು ನಾಟಿ ಮಾಡಿದ ನಂತರ ಮಾಡಬೇಕಾದ ಗೊಬ್ಬರ ಸೇರಿದಂತೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಮಾಡಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ತಂಬಾಕು ಗಿಡಗಳು ಬೆಳವಣಿಗೆ ಆಗದಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ. ಈ ಹಿಂದೆ ಮಳೆ ಕಡಿಮೆ ಇದ್ದರಿಂದ ಏಪ್ರಿಲ್ ಮತ್ತು ಮೇನಲ್ಲಿ ನಾಟಿ ಮಾಡಿದ ಗಿಡಗಳು ಸಾಕಷ್ಟು ಬೆಳವಣಿಗೆ ಆಗಲು ಸಾಧ್ಯವಾಯಿತು. ಆ ನಂತರ ನಾಟಿ ಮಾಡಿದ ಗಿಡಗಳು ಸತತ ಮಳೆಯಿಂದಾಗಿ ಸಮರ್ಪಕವಾಗಿ ಬೇರು ಬಿಡಲು ಆಗದೆ ಫ್ಲಾಟ್ ಫಾರಂ 7ರ ವ್ಯಾಪ್ತಿಯಲ್ಲಿ 2025ನೇ ಸಾಲಿನ ಒಟ್ಟು ಸುಮಾರು 6, 600 ಮತ್ತು ಫ್ಲಾಟ್‌ಫಾರಂ 63ರಲ್ಲಿ 5, 800 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ.ಹೇಳೀಕೆ-1ತಂಬಾಕು ರೈತರು ಪ್ರತಿ ವರ್ಷದಂತೆ ಈ ವರ್ಷವೂ ಸಹ ತಂಬಾಕಿಗೆ ವ್ಯವಸಾಯ ಮಾಡಿ ಗೊಬ್ಬರ ನೀಡಿ ಅಗತ್ಯ ಕೃಷಿ ಚಟುವಟಿಕೆಗಳ ನಡೆಸಿದರು ನಿರೀಕ್ಷಿತ ಪ್ರಮಾಣದಲ್ಲಿ ಗಿಡಗಳು ಬೆಳವಣಿಗೆಯಾಗಿಲ್ಲ. ಸತತ ಮಳೆ ಮತ್ತು ಹೆಚ್ಚಿನ ತೇವಾಂಶವೇ ಇದಕ್ಕೆ ಕಾರಣ.
- ಸವಿತಾ, ತಂಬಾಕು ಮಾರುಕಟ್ಟೆ ಅಧೀಕ್ಷಕರು, ರಾಮನಾಥಪುರಹೇಳೀಕೆ-2
ಮೇ ಮತ್ತು ಜೂನ್ ನಲ್ಲಿ ಸತತವಾಗಿ ಸುರಿದ ಮಳೆಯಿಂದ ತಂಬಾಕು ಗಿಡಗಳು ಗೊಬ್ಬರ ಹೀರಿಕೊಳ್ಳಲು ಆಗುವುದಿಲ್ಲ. ಅತಿಯಾದ ತೇವಾಂಶದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು ತಂಬಾಕು ಉತ್ಪಾದನೆ ಮೇಲೆ ಹೊಡೆತ ಬೀಳಲಿದೆ. - ಕೃಷ್ಣೇಗೌಡ, ರೈತಮುಖಂಡ