ಸಾರಾಂಶ
ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಇಂದ್ರಪ್ರಸ್ತ ಸಭಾಂಗಣದಲ್ಲಿ ಹೆಬ್ರಿಯ ಮಾಧ್ಯಮ ಮಿತ್ರರನ್ನು ಅಮೃತ ಭಾರತಿ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಅಮೃತ ಭಾರತಿ ಕಾಲೇಜಿನ ಶಿಕ್ಷಣದ ಮೈಲುಗಲ್ಲುಗಳಿಗೆ ಬೆಳಕು ಚೆಲ್ಲುವಂತೆ ಮಾಡಿದ್ದು ಮಾಧ್ಯಮರಂಗ. ಸಮಾಜದ ಕಳಕಳಿಯಲ್ಲಿ ಮಾಧ್ಯಮದ ಪಾತ್ರ ಮಹತ್ತರ ಎಂದು ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಎಚ್.ಗುರುದಾಸ್ ಶೆಣೈ ಹೇಳಿದರು.ಅವರು ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಇಂದ್ರಪ್ರಸ್ತ ಸಭಾಂಗಣದಲ್ಲಿ ಹೆಬ್ರಿಯ ಮಾಧ್ಯಮ ಮಿತ್ರರನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಭಾರತಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ ವಹಿಸಿ ಮಾತನಾಡಿ, ಮಾಧ್ಯಮಗಳಿಂದ ಸಮಾಜದ ಬದಲಾವಣೆ ಆಗಿದೆ. ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ಮಾಧ್ಯಮ ವಹಿಸಿದೆ. ಅವರಿಂದ ನಿರಂತರವಾಗಿ ಸಮಾಜಮುಖ ಕೆಲಸಗಳಾಗಲಿ ಎಂದರು.ಹೆಬ್ರಿ ತಾಲೂಕಿನ ಮಾಧ್ಯಮ ಮಿತ್ರರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಅಮರೇಶ್ ಹೆಗಡೆ, ಎಸ್‌ಕೆಪಿಎ ಅಧ್ಯಕ್ಷ ಪದ್ಮ ಪ್ರಸಾದ್ ಜೈನ್, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲು, ಪಿಆರ್‌ಓ ವಿಜಯ್ ಕುಮಾರ್ ಶೆಟ್ಟಿ, ಉಪನ್ಯಾಸಕ ಸುಹಾಸ್ ಶೆಟ್ಟಿ ಮುಟ್ಲುಪಾಡಿ ಇದ್ದರು.ಉಪನ್ಯಾಸಕ ಸುಹಾಸ್ ಶೆಟ್ಟಿ ಮುಟ್ಲುಪಾಡಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.