ಹೆಬ್ರಿ: ಸಾಹಿತ್ಯ ಸಮ್ಮೇಳನ ‘ಚೈತ್ರ ನಂದನ’ ಸಮಾರೋಪ

| Published : Feb 03 2024, 01:47 AM IST

ಸಾರಾಂಶ

ಹೆಬ್ರಿ ತಾಲೂಕು ನಾಲ್ಕನೇ ಸಾಹಿತ್ಯ ಸಮ್ಮೇಳನ ‘ಚೈತ್ರ ನಂದನ’ ಸಮಾರೋಪಗೊಂಡಿತು. ಉಪನ್ಯಾಸಕಿ ಶ್ರೀ ಮುದ್ರಾಡಿ ಸಮಾರೋಪ ಭಾಷಣ ಮಾಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳಹೆಬ್ರಿ ತಾಲೂಕಿನ ಮುದ್ರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಬಾತನಯ ಮುದ್ರಾಡಿ ವೇದಿಕೆಯಲ್ಲಿ ಆಯೋಜಿಸಲಾದ ನಾಲ್ಕನೇ ಸಾಹಿತ್ಯ ಸಮ್ಮೇಳನ ‘ಚೈತ್ರ ನಂದನ’ ಸಮಾರೋಪ ಸಮಾರಂಭ ನಡೆಯಿತು.ಎನ್.ಎಸ್.ಎ.ಎಂ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀ ಮುದ್ರಾಡಿ ಸಮಾರೋಪ ಭಾಷಣ ಮಾಡಿದರು. ಹೆಬ್ರಿ ಕಸಾಪ ಅಧ್ಯಕ್ಷ ಶ್ರೀ ನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷ ಕಬ್ಬಿನಾಲೆ ಬಾಲಕೃಷ್ಣ ಹೆಬ್ಬಾರ್ ಪ್ರತಿಸ್ಪಂದನೆ ನೀಡಿದರು.ಸಭೆಯಲ್ಲಿ ಉಡುಪಿ ಜಿಲ್ಲೆ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜೆ. ಡಾ. ಭಕ್ರೆಮಠ ಮುದ್ರಾಡಿ ವಾಸುದೇವ ಭಟ್, ವರಂಗ ವಿಎಸ್‌ಎಸ್‌ಎನ್‌ ಅಧ್ಯಕ್ಷ ಲಕ್ಷ್ಮಣ ಆಚಾರ್ಯ, ಯೂನಿಯನ್ ಬ್ಯಾಂಕ್ ಶಾಖಾ ಪ್ರಬಂಧಕ ಆನಂದ ಕುಮಾರ್ ಬಕರೆ, ಸಿ.ಎ. ರವಿರಾವ್, ಉದ್ಯಮಿಗಳಾದ ಗುರುದಾಸ್ ಶೆಣೈ, ಸತೀಶ್ ಕಿಣಿ, ಕೆ.ಮಂಜುನಾಥ, ಮುಖ್ಯಶಿಕ್ಷಕ ಇಂದಿರಾ ಬಾಯರಿ, ಕಬ್ಬಿನಾಲೆ ಕೆಳಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಕಬ್ಬಿನಾಲೆ ಮೇಲ್ಮಠ ದೇವಸ್ಥಾನದ ಮೊಕ್ತೇಸರ ಪರಮೇಶ್ವರ ಹೆಬ್ಬಾರ್, ಮುದ್ರಾಡಿ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ತಾರನಾಥ ಹೆಗ್ಡೆ, ಬಲ್ಲಾಡಿ ಮಠದ ನಾರಾಯಣ ಭಟ್, ನಾಟ್ಕದೂರು ಸುಕುಮಾರ್ ಮೋಹನ್, ಹೆಬ್ರಿಯ ಕ.ರಾ.ಸ. ನೌಕರರ ಸಂಘ ಅಧ್ಯಕ್ಷ ಹರೀಶ್ ಪೂಜಾರಿ, ಕಾರ್ಕಳ ಕ.ರಾ.ಸ. ನೌಕರರ ಸಂಘದ ಅಧ್ಯಕ್ಷ‌‌ ಅಣ್ಣಪ್ಪ ಉಪಸ್ಥಿತರಿದ್ದರು. ಗಣಪತಿ ಎಂ. ಸ್ವಾಗತಿಸಿದರು. ಪ್ರವೀಣ ಕುಮಾರ್ ವಂದಿಸಿದರು. ರಂಜಿತಾ, ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಸತೀಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.* ಪುಸ್ತಕ ಬಿಡುಗಡೆಬಾಲಕೃಷ್ಣ ಭಾರದ್ವಾಜ್ ಕಬ್ಬಿನಾಲೆ ಬರೆದ ‘ದಾಸ ಪಂಥ: ಒಂದು ತೌಲನಿಕ ಅಧ್ಯಯನ’, ನರೇಂದ್ರ ಕಬ್ಬಿನಾಲೆ ಬರೆದ ‘ನನ್ನ ನಿನ್ನ ನಡುವೆ’ ಕವನ ಸಂಕಲನ, ಅಜಿತ್ ಪೂಜಾರಿ ಮುದ್ರಾಡಿ ಅವರ ‘ಆಂತರ್ಯ ಭಾವನೆಗಳ ಮಿಡಿತ’ ಕವನ ಸಂಕಲನ, ಪ್ರೇಮ ಬಸನಗೌಡ ಬಿರಾದರ ಬರೆದ ‘ಅದೃಷ್ಟ’ ಕವನ ಸಂಕಲನವನ್ನು ವೀರಪ್ಪ ಮೊಯ್ಲಿ ಬಿಡುಗಡೆ ಮಾಡಿದರು.