ಸಾರಾಂಶ
ಇದೇ ರೀತಿ ಬೇರೆ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡಿದರೆ ಸಂಸ್ಥೆ ಏಳಿಗೆಗೆ ಅನುಕೂಲವಾಗುತ್ತದೆ, ನವೋದಯ ವಿದ್ಯಾ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಮರುಕಳಿಸಲು ಎಲ್ಲರ ಸಹಕಾರ ಅತ್ಯಗತ್ಯ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ನವೋದಯ ವಿದ್ಯಾಸಂಸ್ಥೆಗೆ ಹಳೆಯ ವಿದ್ಯಾರ್ಥಿಗಳ ಸಹಪಾಠಿಗಳು ಸೇರಿ ಒಂದೂವರೆ ಲಕ್ಷ ಹಣ ಒಟ್ಟುಗೂಡಿಸಿ ಸಂಸ್ಥೆಗೆ ಸಹಕಾರ ಮಾಡಿದ್ದಾರೆ.ಇದೇ ಸಂಸ್ಥೆಯಲ್ಲಿ ೧೯೮೮ ರಿಂದ ೧೯೯೮ ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸ್ನೇಹಿತರು ಒಗ್ಗೂಡಿ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ನೆರವೇರಿಸಿ, ತಮ್ಮ ನೆಚ್ಚಿನ ಗುರುಗಳಿಗೆ ಗೌರವವನ್ನು ಸಲ್ಲಿಸುವುದರ ಜೊತೆಗೆ ಎಲ್ಲಾ ಸ್ನೇಹಿತರು ಸೇರಿ ಸಂಸ್ಥೆಗೆ ಒಂದೂವರೆ ಲಕ್ಷ ಸಂಗ್ರಹಿಸಿ ಶಾಲಾ ಅಭಿವೃದ್ಧಿಗೆ ನೀಡಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಒ. ಆರ್. ರಂಗೇಗೌಡರು ಮಾತನಾಡುತ್ತಾ, ಇದೇ ರೀತಿ ಬೇರೆ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡಿದರೆ ಸಂಸ್ಥೆ ಏಳಿಗೆಗೆ ಅನುಕೂಲವಾಗುತ್ತದೆ, ನವೋದಯ ವಿದ್ಯಾ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಮರುಕಳಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನವೋದಯ ವಿದ್ಯಾಸಂಘದ ಗೌರವಾಧ್ಯಕ್ಷ ಶೇಷಶಯನ, ಕಾರ್ಯದರ್ಶಿ ಕೆಂಬಾಳ್ ಶರತ್, ಖಜಾಂಚಿ ಜಲೇಂದ್ರಕುಮಾರ್, ಡಾ.ಪ್ರಮೋದ್, ಸಂತೋಷ್ ಮರುವನಹಳ್ಳಿ, ಮುರಾರ್ಜಿ ಮಂಜಣ್ಣ, ಆನಂದ್ ಕಾಳೇನಹಳ್ಳಿ, ಶಿವಕುಮಾರ್, ಗನ್ನಿ ಗಿರೀಶ್, ರಾಘವೇಂದ್ರ ಮತ್ತಿತರಿದ್ದರು.