ಭೋಜನಶಾಲೆ ನಿರ್ಮಾಣಕ್ಕೆ ಸಹಕಾರ ಕೊಡಿ

| Published : Sep 20 2025, 01:00 AM IST

ಸಾರಾಂಶ

ರಾಮನಾಥಪುರದ ಕಾವೇರಿ ನದಿ ಹತ್ತಿರವಿರುವ ಶ್ರೀ ಉತ್ತರಾಧಿಮಠದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಮಾತನಾಡಿದ ಅವರು, ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ಹತ್ತು ರೂಮುಗಳು ಹಾಗೂ ಭೋಜನ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ಶ್ರೀ ಮಠದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಧನ ಸಹಾಯ ಮಾಡಿ ಎಂದು ಕನಕಚಾರ್ಯರು ಮನವಿ ಮಾಡಿದರು.

ರಾಮನಾಥಪುರ: ಶ್ರೀ ಉತ್ತರಾಧಿ ಮಠದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಿ, ಧರ್ಮ, ಜಾತಿ, ಸಮಾನತೆಗೆ ತಾವೆಲ್ಲ ಶ್ರಮಿಸಬೇಕು ಎಂದು ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರು ವೇ. ಕನಕಾಚಾರ್ಯರು ಮನವಿ ಮಾಡಿದರು.

ರಾಮನಾಥಪುರದ ಕಾವೇರಿ ನದಿ ಹತ್ತಿರವಿರುವ ಶ್ರೀ ಉತ್ತರಾಧಿಮಠದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಮಾತನಾಡಿದ ಅವರು, ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ಹತ್ತು ರೂಮುಗಳು ಹಾಗೂ ಭೋಜನ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ಶ್ರೀ ಮಠದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಧನ ಸಹಾಯ ಮಾಡಿ ಎಂದು ಕನಕಚಾರ್ಯರು ಮನವಿ ಮಾಡಿದರು.

ಶ್ರೀ ಮಠದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀಮಠದಿಂದ ಪ್ರಸಾದದ ವ್ಯವಸ್ಥೆ ಮಾಡಿದ್ದರು.