ಸಾಹಿತ್ಯವನ್ನು ‌ನಾಡಿನಾದ್ಯಂತ‌ ಪಸರಿಸಲು ಸಹಕರಿಸಿ

| Published : Jul 18 2024, 01:31 AM IST

ಸಾರಾಂಶ

ಭಾಷೆ, ಪರಿಸರ ಮತ್ತು ಜಿಲ್ಲೆಯ ಬರಹಗಾರರ ಸಾಹಿತ್ಯವನ್ನು ‌ನಾಡಿನಾದ್ಯಂತ‌ ಕೊಂಡೊಯ್ಯುವ ಸಲುವಾಗಿ ಚಾಮರಾಜನಗರ ಜಿಲ್ಲಾ ಲೇಖಕರ ಸಂಘವನ್ನು‌ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಭಾಷೆ, ಪರಿಸರ ಮತ್ತು ಜಿಲ್ಲೆಯ ಬರಹಗಾರರ ಸಾಹಿತ್ಯವನ್ನು ‌ನಾಡಿನಾದ್ಯಂತ‌ ಕೊಂಡೊಯ್ಯುವ ಸಲುವಾಗಿ ಚಾಮರಾಜನಗರ ಜಿಲ್ಲಾ ಲೇಖಕರ ಸಂಘವನ್ನು‌ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ಹೇಳಿದರು.

ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮೌಲಿಕ ಸಾಹಿತ್ಯ ಪರ‌ ಕಾರ್ಯಕ್ರಮಗಳ ಜೊತೆಗೆ ಪ್ರತಿಭಾನ್ವಿತ ಯುವ ಕವಿಗಳಿಗೆ ಕಮ್ಮಟ ಸಂಘಟಿಸುವುದು, ಪುಸ್ತಕ ಪ್ರಕಟಿಸುವುದು, ವಿವಿಧ ಗೋಷ್ಠಿ ಸಂಘಟಿಸಿ ಯುವ ಬರಹಗಾರರಿಗೆ ವೇದಿಕೆ ಕಲ್ಪಿಸುವುದು, ಜಿಲ್ಲೆಯ ಲೇಖಕರ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡಿಸಿ ಅಲ್ಲಿನ ಓದುಗರು ಅಧ್ಯಯನಿಸುವಂತೆ ಮಾಡುವುದು ಸಂಘದ ಉದ್ದೇಶವಾಗಿದೆ ಎಂದರು.

ಈ ವೇಳೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ದುಂಡುಮಾದಯ್ಯ ರೇಚಂಬಳ್ಳಿ, ಉಪಾಧ್ಯಕ್ಷರಾಗಿ ಶೀಲಾ ಸತ್ಯೇಂದ್ರಸ್ವಾಮಿ, ಕಾರ್ಯದರ್ಶಿಯಾಗಿ ಸೋಮಶೇಖರ ಬಿಸಲ್ವಾಡಿ, ಸಹ ಕಾರ್ಯದರ್ಶಿಯಾಗಿ ಡಾ ಪಿ ಪ್ರೇಮ, ಖಜಾಂಚಿಯಾಗಿ ಗು.ಚಿ. ರಮೇಶ್ ಆಯ್ಕೆ ಮಾಡಲಾಗಿದೆ.

ಯಳಂದೂರು ತಾಲೂಕು ಸಂಚಾಲಕರಾಗಿ ದೊರೆಸ್ವಾಮಿ ಮದ್ದೂರು, ಕೊಳ್ಳೇಗಾಲ ತಾಲೂಕು ಸಂಚಾಲಕರಾಗಿ ಮಂಜುನಾಥ ಬಾಳಗುಣಸೆ, ಗುಂಡ್ಲುಪೇಟೆ ತಾಲೂಕು ಸಂಚಾಲಕರಾಗಿ ಬಿ ಎಸ್ ಗವಿಸ್ವಾಮಿ, ಚಾಮರಾಜನಗರ ತಾಲೂಕು ಸಂಚಾಲಕರಾಗಿ ಡಾ ನಂಜರಾಜು ಹೊಂಗನೂರು,‌ ಹನೂರು ತಾಲೂಕು ಸಂಚಾಲಕರಾಗಿ ದಿವ್ಯನಂದಮೂರ್ತಿ ಆಯ್ಕೆ ಮಾಡಲಾಯಿತು.

ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಶಿವಕುಮಾರ್ ಕೆಂಪನಪುರ, ಎಸ್ ಜಿ ಮಹಲಿಂರ್ಗಿ, ಶಂಕರ ಅಂಕನಶೆಟ್ಟಿಪುರ, ವಿ ಮಂಜುಳಾ, ರವಿಚಂದ್ರಪ್ರಸಾದ್ ಕಹಳೆರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.