ಕನ್ನಡಪ್ರಭವಾರ್ತೆ ತಿಪಟೂರು
ನಗರದ ಎಸ್‌ವಿಪಿ ಪ್ರೌಢಶಾಲೆ ಹಾಗೂ ಎನ್‌ಎಸ್‌ಎಂ ಬಾಲಿಕಾ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟೀಯ ಯೋಗ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಚನ್ನಾಂಬಿಕ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಶಿಸ್ತಿನ ಸಮತೋಲನವನ್ನು ಸೃಷ್ಟಿಸುತ್ತದೆ. ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಮತ್ತು ನೀವು ವಿಶ್ರಾಂತಿ ಪಡೆಯಲು ಸಹ ಯೋಗ ಸಹಕಾರಿಯಾಗಿದೆ. ಸ್ನಾಯುವಿನ ನಮ್ಯತೆಯನ್ನು ಸುಧಾರಿಸಿ ದೇಹದ ಭಂಗಿ ಮತ್ತು ಜೋಡಣೆಯನ್ನು ಸರಿಪಡಿಸುವುದರ ಜೊತೆಗೆ ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಒದಗಿಸುತ್ತದೆ. ಆಂತರಿಕ ಅಂಗಗಳನ್ನು ಬಲಪಡಿಸುತ್ತದೆ. ಅಸ್ತಮಾ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳಿಗೆ ಹಾಗೂ ತ್ವಚೆಯ ಹೊಳಪಿನಲ್ಲಿ ಸಹಾಯ ಮಾಡುತ್ತದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದನ್ನು ಕಲಿತು ಉಪಯೋಗ ಪಡೆದುಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖೋಪಾಧ್ಯಾಯರು, ಶಿಕ್ಷಕರುಗಳು ಹಾಘೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ದೇಹ, ಆತ್ಮವನ್ನು ನಿಯಂತ್ರಿಸಲು ಸಹಕಾರಿ
ನಗರದ ಎಸ್‌ವಿಪಿ ಪ್ರೌಢಶಾಲೆ ಹಾಗೂ ಎನ್‌ಎಸ್‌ಎಂ ಬಾಲಿಕಾ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟೀಯ ಯೋಗ ದಿನ ಆಚರಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.