ಪರಿಶುದ್ಧವಾರ ಜೀವನ ನಡೆಸಿ

| Published : Apr 08 2024, 01:03 AM IST

ಸಾರಾಂಶ

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀಮಲ್ಲಯ್ಯ ಮಂದಿರ ಕಟ್ಟಡದ ಪುನರ್ ನಿರ್ಮಾಣದ ಅಂಗವಾಗಿ ಹಮ್ಮಿಕೊಂಡಿರುವ ಮಹಾಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಜೀವನ ದರ್ಶನ ಕುರಿತ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀಮಲ್ಲಯ್ಯ ಮಂದಿರ ಕಟ್ಟಡದ ಪುನರ್ ನಿರ್ಮಾಣದ ಅಂಗವಾಗಿ ಹಮ್ಮಿಕೊಂಡಿರುವ ಮಹಾಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಜೀವನ ದರ್ಶನ ಕುರಿತ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.

ಪ್ರವಚನ ಕಾರ್ಯಕ್ರಮವನ್ನು ತದ್ದೇವಾಡಿಯ ಪ್ರವಚನಕಾರರಾದ ಶ್ರೀವೇದಮೂರ್ತಿ ಮಾಂತಯ್ಯ ಶಾಸ್ತ್ರಿಗಳು ಪ್ರತಿನಿತ್ಯ ಸಂಜೆ 7.30 ರಿಂದ 8.30ರ ವರೆಗೆ ನಡೆಸಿಕೊಡಲಿದ್ದಾರೆ. ಪ್ರವಚನ ಕಾರ್ಯಕ್ರಮದಲ್ಲಿ ಚರಿತ್ರೆಯ ನಾಯಕಿ ಮಹಾಶಿವರಣೆ ಹೇಮರೆಡ್ಡಿ ಹಾಗೂ ಭರಮರೆಡ್ಡಿ ಮದುವೆಯ ಕಾರ್ಯಕ್ರಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಅಕ್ಕನ ಬಳಗದವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗುತಂದರು. ಪ್ರವಚನಕಾರರು ವಿವಾಹದ ಮಂತ್ರ ಪಠಿಸಿ, ಹೇಮರೆಡ್ಡಿ ಮಲ್ಲಮ್ಮಳ ಮಹಿಮೆಯ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ ಬಾಲ್ಕಿಯ ಹಿರೇಮಠದ ಶ್ರೀಸಿದ್ಧರಾಮೇಶ್ವರ ಪಟ್ಟದೇವರು ಮಾತನಾಡಿ, ತಾಯಿ ತ್ಯಾಗದ ಪ್ರತೀಕ, ಮನೆಯಲ್ಲಿ ಮಹಿಳೆಯರು ಸಂತಸದಿಂದ ಇದ್ದರೆ ಇಡೀ ಕುಟುಂಬವೇ ಸಂತಸದಿಂದ ಇರುತ್ತದೆ. ಆದ್ದರಿಂದ ಕಾಯಾ, ವಾಚಾ, ಮನಸಾ ಪೂರ್ವಕವಾಗಿ ಪರಿಶುದ್ಧವಾದ ಜೀವನ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮಳಂತೆ ನಡೆಸಬೇಕು ಎಂದರು.

ಕಾತ್ರಾಳದ ಗುರುದೇವಾನಂದ ಆಶ್ರಮದ ತ್ಯಾಗಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಳಿಕ ಸ್ಥಳಿಯ ಭಕ್ತರಾದ ಸಾವಿತ್ರಿ ಸಂಜೀವ ಪತ್ತಾರ ಮನೆತನದವರಿಂದ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ತಬಲಾವಾದಕರಾಗಿ ಚೌಡಾಪುರದ ಶಿವರಾಜ ಗವಾಯಿ ಸುಮಧುರ ಭಕ್ತಿ ಗೀತೆ ಹಾಡಿದರು. ಬಳ್ಳೊಳ್ಳಿಯ ತಬಲಾ ಕಲಾವಿದ ಗುರುರಾಜ ಹಳ್ಳಿಖೇಡ ತಬಲಾ ನುಡಿಸಿದರು. ಸುಧಾಕರ ಬಿರಾದಾರ ಸ್ವಾಗತಿಸಿದರು. ಡಿ.ಎ. ಮುಜಗೊಂಡ ಕಾರ್ಯಕ್ರಮ ನಿರೂಪಿಸಿದರು. ಶಿವಯೋಗಿ ಬಿರಾದಾರ, ಹಣಮಂತ ನಿಂಬರಗಿ ವಂದಿಸಿದರು.Discourse on Hemareddy Mallamma''s life vision