ಕಾಯಕತತ್ವ ಸಾರಿದ ಹೇಮರಡ್ಡಿ ಮಲ್ಲಮ್ಮ

| Published : May 16 2025, 01:47 AM IST

ಸಾರಾಂಶ

ಮೇ ೨೧, ೨೨ರಂದು ಕಾರ್ಯಕ್ರಮವನ್ನು ಬೃಹತ್ ಮಟ್ಟದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸರ್ವರು ಸಂಕಲ್ಪ ತೊಟ್ಟು ಕಾರ್ಯ ನಿರ್ವಹಿಸಬೇಕು. ನೀವುಗಳು ಮಾಡುವ ಕಾರ್ಯ ಇನ್ನೊಬ್ಬರಿಗೆ ಪ್ರೇರಣೆ ಆಗಬೇಕು.

ಕೊಪ್ಪಳ:

ಜಗತ್ತಿಗೆ ದಾಸೋಹದ ಪರಿಕಲ್ಪನೆ, ಹೆಣ್ಣಿನ ಮಹತ್ವ ಹಾಗೂ ಸಮಾಜದ ಏಳಿಗೆ ಬಯಸಿದ ಮನುಕುಲದ ಸ್ತ್ರೀ ರತ್ನ, ಕಾಯಕ ತತ್ವವನ್ನು ಜಗತ್ತಿಗೆ ಸಾರಿದವರು ಹೇಮರಡ್ಡಿ ಮಲ್ಲಮ್ಮ ಎಂದು ಹೂವಿನಹಡಗಲಿಯ ಶ್ರೀಹಿರೇಶಾಂತವೀರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಘಟ್ಟಿರಡ್ಡಿಹಾಳ ಗ್ರಾಮದ ಶ್ರೀಈಶ್ವರ, ಮಲ್ಲಮ್ಮ ಹಾಗೂ ಭರಮ ದೇವರ ದೇವಸ್ಥಾನದಲ್ಲಿ ನಡೆದ ತಾಲೂಕು ಮಟ್ಟದ ಶ್ರೀಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ, ಮಲ್ಲಮ್ಮ ತಾಯಿಯ ಬೆಳ್ಳಿಮೂರ್ತಿ ಲೋಕಾರ್ಪಣೆ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಮೇ ೨೧, ೨೨ರಂದು ಕಾರ್ಯಕ್ರಮವನ್ನು ಬೃಹತ್ ಮಟ್ಟದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸರ್ವರು ಸಂಕಲ್ಪ ತೊಟ್ಟು ಕಾರ್ಯ ನಿರ್ವಹಿಸಬೇಕು. ನೀವುಗಳು ಮಾಡುವ ಕಾರ್ಯ ಇನ್ನೊಬ್ಬರಿಗೆ ಪ್ರೇರಣೆ ಆಗಬೇಕು. ಜಾತಿ, ಮತ, ಭೇದ, ಭಾವ ಎಣಿಸದೇ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಹಾಗೂ ಇಡಿ ಮಾನವ ಕುಲ ಒಂದೇ ಜಾತಿ ಎಂಬ ಪರಿಕಲ್ಪನೆಯನ್ನು ಹೊಂದಿದ ಹಾಗೂ ಭಾವೈಕ್ಯತೆಯ ಸಂಗಮವಾಗಿದೆ ಘಟ್ಟಿರಡ್ಡಿಹಾಳ ಗ್ರಾಮ. ಜೀವನದಲ್ಲೂ ಉತ್ತಮ ಆಲೋಚನೆ ಹಾಗೂ ಹವ್ಯಾಸ ರೂಢಿಸಿಕೊಳ್ಳಬೇಕು. ಇವು ನಿಮ್ಮ ಸಾಧನೆ ಮುಟ್ಟಲು ಸಹಕಾರಿಯಾಗುತ್ತವೆ. ಯಶಸ್ಸು ಸಿಕ್ಕಾಗ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಒಟ್ಟಾರೆಯಾಗಿ ಕಾರ್ಯಕ್ರಮವನ್ನು ಒಗ್ಗಟ್ಟಿನಿಂದ ಅದ್ಧೂರಿಯಾಘಿ ನೆರವೇರಿಸಬೇಕೆಂದು ಹೇಳಿದರು.

ಉಪನ್ಯಾಸಕ ಶಂಕರ ಬೆಟಗೇರಿ ಮಾತನಾಡಿ, ಕಾರ್ಯಕ್ರಮದ ಯಶಸ್ಸು ಒಂದು ಸಾಧನೆಯಾಗಲಿದೆ. ತಾಲೂಕು ಮಟ್ಟದ ಕಾರ್ಯಕ್ರಮ ಇದಾಗಿರುವುದರಿಂದ ಅತ್ಯಂತ ಶಿಸ್ತಾಗಿ ಆಚರಿಸಬೇಕು. ಪ್ರತಿ ವ್ಯವಸ್ಥೆಗೂ ಒಂದೊಂದು ತಂಡ ರಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಕುಂಭ ಮೆರವಣಿಗೆ, ವಾದ್ಯ ಮೇಳ, ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳ, ಸಾಧಕರಿಗೆ ಸನ್ಮಾನ, ಧಾರ್ಮಿಕ ಸಭೆ, ಗಣ್ಯರಿಗೆ ಸನ್ಮಾನ, ಮೂರ್ತಿ ಮೆರವಣಿಗೆ, ದಾಸೋಹ ಸೇವೆ ಮುಂತಾದವುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ರಾಜ್ಯದ ವಿವಿಧ ಭಾಗಗಳಿಂದ ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಸಾಧಕರು, ಪೂಜ್ಯರು ಆಗಮಿಸುತ್ತಿದ್ದಾರೆ ಎಂದರು.

ಎರೆಹೊಸಳ್ಳಿಯ ಶ್ರೀವೇಮನಾನಂದ ಸ್ವಾಮೀಜಿ, ಮುಂಡರಗಿ ನಾಡೋಜ ಜ. ಅನ್ನದಾನೇಶ್ವರ ಸ್ವಾಮೀಜಿ, ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ, ಚಿಕೇನಕೊಪ್ಪದ ಶ್ರೀಶಿವಶಾಂತವೀರ ಶರಣರು, ಹೂವಿನಹಡಗಲಿಯ ಶ್ರೀಹಿರೇಶಾಂರವೀರ ಸ್ವಾಮೀಜಿ, ಅಳವಂಡಿಯ ಶ್ರೀಮರುಳಾರಾದ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಶ್ರೀಸಿದ್ದೇಶ್ವರ ಶಿವಾಚಾರ್ಯರು, ಸಚಿವರಾದ ಎಚ್.ಕೆ. ಪಾಟೀಲ, ರಾಮಲಿಂಗರಡ್ಡಿ, ನಿವೃತ್ತ ಎಎಸ್‌ಪಿ ವಿಜಯಕುಮಾರ ಡಂಬಳ, ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಜಗದೀಶಪ್ಪ ಸಾಹುಕಾರ, ಶಾಸಕರು, ಸಂಸದರು, ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಮಹೇಶ ಡಂಬಳ, ರವೀಂದ್ರ ಸಂಗರಡ್ಡಿ, ಅಂದಪ್ಪ ಮಾಸ್ತರ, ಶರಣಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಸಂಗರಡ್ಡಿ, ಸಿದ್ದಪ್ಪ ಡಂಬಳ, ಶಿವನಗೌಡ ಅಲ್ಲಿಪುರ, ಶಂಭುಲಿಂಗಯ್ಯ, ಪ್ರಶಾಂತ ಡಂಬಳ, ಶೇಖರಪ್ಪ, ನಿಂಗರಡ್ಡೆಪ್ಪ, ವೀರಣ್ಣ ಸಂಗರಡ್ಡಿ, ಚನಬಸಪ್ಪ, ಬಸವರಾಜ, ಮಲ್ಲಪ್ಪ, ಜಂಬನಗೌಡ ಗುಡಗೇರಿ, ವೀರನಗೌಡ, ಅಂದಪ್ಪ ರಕರಡ್ಡಿ, ಉಮೇಶ ಡಂಬಳ, ಅವಿನಾಶ, ಪ್ರವೀಣ, ರಾಕೇಶ, ಶಿವು, ಪ್ರಶಾಂತ, ಕಿರಣ, ವಿರೂಪಾಕ್ಷಪ್ಪ ಹಾಗೂ ಗ್ರಾಮಸ್ಥರು ಇದ್ದರು.