ಹೇಮರೆಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿ: ಶಾಸಕ ದೊಡ್ಡನಗೌಡ ಪಾಟೀಲ

| Published : May 13 2025, 11:56 PM IST

ಸಾರಾಂಶ

ಹೇಮರಡ್ಡಿ ಮಲ್ಲಮ್ಮ ಅವರನ್ನು ನಾಟಕ, ಕೀರ್ತನೆ ಹಾಗೂ ಪುರಾಣಗಳ ಮೂಲಕ ಜನರಿಗೆ ಪರಿಚಯಿಸಲಾಗುತ್ತಿದೆ. ಭಕ್ತಿಯ ಪರಾಕಾಷ್ಠೆ, ಶ್ರೇಷ್ಠತೆಯನ್ನು ಸಮಾಜಕ್ಕೆ ತೊರಿಸಿದವರು ಹೇಮರೆಡ್ಡಿ ಮಲ್ಲಮ್ಮನವರು.

ಕುಷ್ಟಗಿ:

ಆದರ್ಶ ಗೃಹಿಣಿ, ಶ್ರೇಷ್ಠ ಶಿವಶರಣೆ, ತಾಳ್ಮೆ ಮತ್ತು ತ್ಯಾಗದ ಗುಣ ಹೊಂದಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ಮುದ್ದಲಗುಂದಿ ಗ್ರಾಮದಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಹೇಮರಡ್ಡಿ ಮಲ್ಲಮ್ಮ ಅವರನ್ನು ನಾಟಕ, ಕೀರ್ತನೆ ಹಾಗೂ ಪುರಾಣಗಳ ಮೂಲಕ ಜನರಿಗೆ ಪರಿಚಯಿಸಲಾಗುತ್ತಿದೆ. ಭಕ್ತಿಯ ಪರಾಕಾಷ್ಠೆ, ಶ್ರೇಷ್ಠತೆಯನ್ನು ಸಮಾಜಕ್ಕೆ ತೊರಿಸಿದವರು ಹೇಮರೆಡ್ಡಿ ಮಲ್ಲಮ್ಮನವರು ಎಂದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ವೇಮನರನ್ನು ತಿದ್ಧುವ ಮೂಲಕ ಸಮಾಜಕ್ಕೆ ದಾರ್ಶನಿಕ, ಮಹಾ ತತ್ವಜ್ಞಾನಿಯನ್ನು ನೀಡಿದಂತಹ ಹೇಮರಡ್ಡಿ ಮಲ್ಲಮ್ಮನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ, ಮತ ಎಂದು ಭೇದಭಾವ ಮಾಡದೆ ಇಡೀ ಮನುಕುಲದ ಶ್ರೇಯಸ್ಸಿಗೆ ದಾರಿ ತೋರಿದಂತಹ ಅವರಿಗೆ ನಾವೆಲ್ಲರೂ ಸದಾ ಚಿರಋಣಿ ಆಗಿರಬೇಕು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹೇಮವೇಮ ವಿದ್ಯಾಪೀಠದ ವೇಮಾನಂದ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಸಿ.ವಿ. ಚಂದ್ರಶೇಖರ, ಶೇಖರಗೌಡ ಮಾಲಿಪಾಟೀಲ, ಟಿ. ಬಸವರಾಜ, ಸೋಮನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.