ಸಾರಾಂಶ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಹೆಪಟೈಟಿಸ್ ಬಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಗರದ ಬೀರನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು. ಹೆಪಟೈಟಿಸ್ ಬಿ ವಿಶ್ವದಲ್ಲಿ ಅತ್ಯಂತ ಗಂಭೀರವಾದ ಪಿತ್ತಜನಕಾಂಗದ ಸೋಂಕಿನ ಕಾಯಿಲೆ ಅಗಿದ್ದು, ಹೆಪಟೈಟಿಸ್ ಬಿ ವೈರಸ್ ಮೂಲಕ ಹರಡುತ್ತದೆ. ಈ ಕಾಯಿಲೆಯಿಂದ ೩೦ ಲಕ್ಷಕ್ಕೂ ಹೆಚ್ಚು ಜನರು ದೀರ್ಘಕಾಲದ ಸೋಂಕಿನಿಂದ ಬದುಕುತ್ತಿದ್ದಾರೆ. ೧ ಲಕ್ಷಕ್ಕೂ ಹೆಚ್ಚು ಜನ ಹೆಪಟೈಟಿಸ್ ಬಿ ವೈರಸ್‌ನಿಂದ ಸಾಯುತ್ತಿದ್ದಾರೆ ಎಂದರು.
ಕನ್ನಡಪ್ರಭವಾರ್ತೆ ಹಾಸನ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಹೆಪಟೈಟಿಸ್ ಬಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಗರದ ಬೀರನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು.ಕಾರ್ಯಕ್ರಮವನ್ನು ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿಗಳಾದ ಡಾ. ವಿಜಯ ಗೊರೂರು ಹಾಗೂ ಡಾ. ಶಿವಶಂಕರ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿಗಳು ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಡಾ. ವಿಜಯ್ ಗೊರೂರು ಅವರು, ಹೆಪಟೈಟಿಸ್ ಬಿ ವಿಶ್ವದಲ್ಲಿ ಅತ್ಯಂತ ಗಂಭೀರವಾದ ಪಿತ್ತಜನಕಾಂಗದ ಸೋಂಕಿನ ಕಾಯಿಲೆ ಅಗಿದ್ದು, ಹೆಪಟೈಟಿಸ್ ಬಿ ವೈರಸ್ ಮೂಲಕ ಹರಡುತ್ತದೆ. ಈ ಕಾಯಿಲೆಯಿಂದ ೩೦ ಲಕ್ಷಕ್ಕೂ ಹೆಚ್ಚು ಜನರು ದೀರ್ಘಕಾಲದ ಸೋಂಕಿನಿಂದ ಬದುಕುತ್ತಿದ್ದಾರೆ. ೧ ಲಕ್ಷಕ್ಕೂ ಹೆಚ್ಚು ಜನ ಹೆಪಟೈಟಿಸ್ ಬಿ ವೈರಸ್‌ನಿಂದ ಸಾಯುತ್ತಿದ್ದಾರೆ ಎಂದರು.
ಹರಡುವ ವಿಧಾನ ಎಂದರೆ ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ಇತರ ದ್ರವಗಳ ಸಂಪರ್ಕದಿಂದ, ಅಸುರಕ್ಷಿತ ಲೈಂಗಿಕ ಕ್ರಿಯೆ, ಇಂಜೆಕ್ಷನ್ ಸಿರಿಂಜ್ ಮರುಬಳಕೆಯಿಂದ, ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿಯೇ ಹರಡುವುದು ಎಂದು ತಿಳಿಸಿದರು. ಹೆಪಟೈಟಿಸ್ ಬಿ ಲಸಿಕೆ ಅತ್ಯಂತ ಪರಿಣಾಮಕಾರಿ ಆಗಿದೆ ಹಾಗೂ ಹೆಪಟೈಟಿಸ್‌ಬಿ ಕಾಯಿಲೆ ತಡೆಯಲು ಎಲ್ಲಾ ಆರೋಗ್ಯ ಕಾರ್ಯಕರ್ತರು ತಪ್ಪದೆ ಲಸಿಕೆಯನ್ನು ಪಡೆದು ರೋಗ ಹರಡುವಿಕೆ ತಡೆಯಬಹುದಾಗಿದೆ ಎಂದು ಹೇಳಿದರು. ಇಂದು ಜಿಲ್ಲೆಯಲ್ಲಿ ೨೦೦೦ಕ್ಕೂ ಹೆಚ್ಚು ಫ್ರಂಟ್‌ಲೈನ್ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.