ಸಾರಾಂಶ
ಯುವಕನೋರ್ವ ಬೆಟ್ ಕಟ್ಟಿ ಸುಮಾರು 35 ಅಡಿ ಎತ್ತರದ ಸೇತುವೆಯಿಂದ ಹೊಳೆಗೆ ಹಾರಿದ ಘಟನೆ ನಡೆದಿದೆ.
ನಾಪೋಕ್ಲು: ಯುವಕನೋರ್ವ ಬೆಟ್ ಕಟ್ಟಿ ಸುಮಾರು 35 ಅಡಿ ಎತ್ತರದ ಸೇತುವೆಯಿಂದ ಹೊಳೆಗೆ ಹಾರಿದ ಘಟನೆ ಮಡಿಕೇರಿ ತಾಲೂಕಿನ ಕಕ್ಕಬೆಯಲ್ಲಿ ನಡೆದಿದೆ.ಯುವಕನೋರ್ವ ಕಕ್ಕಬೆ ಪೇಟೆಯಲ್ಲಿರುವ ಸೇತುವೆ ಮೇಲೆಯಿಂದ ಜಿಗಿಯುತ್ತಿರುವ ವಿಡಿಯೋ ತುಣುಕೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕುಂಜಿಲ ಗ್ರಾಮದ ಯುವಕರು 5000 ರು. ಶೂ (ಬೂಟ್‌ಗೆ ಬೆಟ್) ಗೆ ಚಾಲೆಂಜ್ ಮಾಡಿ ಈ ಸಾಹಸಕ್ಕೆ ಇಳಿದ್ದಿದ್ದಾರೆ ಎನ್ನಲಾಗಿದೆ.
ಯುವಕ ಜೀವದ ಹಂಗು ತೊರೆದು ಸೇತುವೆ ಮೇಲಿಂದ ಸುಮಾರು 10 ಅಡಿ ಪ್ರವಾಹದ ನೀರಿಗೆ ಜಿಗಿದಿದ್ದು, ಬಳಿಕ ಈಜಿ ದಡ ಸೇರಿ ಚಾಲೆಂಜ್ ಪೂರೈಸಿದ್ದಾನೆ. ಇದೀಗ ಈ ಹುಚ್ಚು ಸಾಹಸದ ಬಗ್ಗೆ ಸಾರ್ವಜನಿಕರಲ್ಲಿ ಪರ, ವಿರೋಧಗಳ ಚರ್ಚೆ ನಡೆಯುತ್ತಿದೆ.