ಪರಂಪರೆ, ಸಿದ್ಧಾಂತ ಗ್ರಹಿಕೆಗಳು ಕನಕ ಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಬಹುದು: ಕಾ.ತ. ಚಿಕ್ಕಣ್ಣ

| Published : May 16 2025, 02:03 AM IST

ಪರಂಪರೆ, ಸಿದ್ಧಾಂತ ಗ್ರಹಿಕೆಗಳು ಕನಕ ಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಬಹುದು: ಕಾ.ತ. ಚಿಕ್ಕಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ವಾಂಸ ಡಾ.ಪಿ. ಬೆಟ್ಟೇಗೌಡ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸ್ಪರ್ಧೆಯಲ್ಲಿ ಓದು, ಸಂವಾದ, ಗಾಯನ, ರಸಪ್ರಶ್ನೆಗಳನ್ನು ಆಯೋಜಿಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾರ್ಥನಗರ, ಕುವೆಂಪುನಗರ, ಎಸ್‌ ಡಿಎಂ ಮಹಿಳಾ ಕಾಲೇಜು, ನಟರಾಜ ಮಹಿಳಾ ಕಾಲೇಜು, ಶಾರದ ವಿಲಾಸ ಕಾಲೇಜು, ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜುಗಳಿಂದ 200 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಪರಂಪರೆ, ವರ್ತಮಾನ ನಂಬಿದ ಸಿದ್ಧಾಂತ ಗ್ರಹಿಕೆಗಳು ಕನಕ ಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಬಹುದು ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದರು.ನಗರದ ಎಂಎಂಕೆ ಮತ್ತು ಎಸ್‌ ಡಿಎಂ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದೊಂದಿಗೆ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಕನಕ ಸಂಸ್ಕೃತಿ ಸಂಚಲನ- ಕನಕ ನಡೆ-ನುಡಿ ಉತ್ಸವವನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.ಪರಿವರ್ತನಶೀಲತೆ ಏಕಮುಖವಾಗಿಲ್ಲ, ಹಲವು ಜ್ಞಾನ ಸಂಸ್ಕೃತಿಗಳ ಮೇಳೈಸಿವೆ. ಪರಂಪರೆ ವರ್ತಮಾನ ನಂಬಿದ ಸಿದ್ಧಾಂತ ಗ್ರಹಿಕೆಗಳು ಕನಕನ ಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಬಹುದು. ಜಾತಿ ವರ್ಗ ವರ್ಣ ತಾರತಮ್ಮಯಗಳು ಇಂದಿಗೂ ಇದ್ದು, ವರ್ತಮಾನದ ಎಲ್ಲಾ ತಲ್ಲಣಗಳಿಗೆ ಉತ್ತರದಾಯಿತ್ವದ ಸಾಹಿತ್ಯ ರಚಿಸಿದವರು ಸಂತಕವಿ ಕನಕದಾಸರು ಎಂದು ಅವರು ಹೇಳಿದರು.ಕನಕದಾಸ ಸಾಹಿತ್ಯವನ್ನು ಯುವ ಸಮೂಹಕ್ಕೆ ತಿಳಿಸಿ, ಸಾಂಸ್ಕೃತಿಕ ಸಂಪನ್ನಾರಾಗಿಸಿ ನಾಡು ಮತ್ತು ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸುವಲ್ಲಿ ಯುವಜನರನ್ನು ಸನ್ನದಗೊಳಿಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ಅವಮಾನ ತಿರಸ್ಕಾರಗಳನ್ನು ಸಹಿಸಿ ಸಾರ್ವಕಾಲಿಕ ಮೌಲ್ಯಗಳನ್ನು ಜಗತ್ತಿಗೆ ತಮ್ಮ ಸಾಹಿತ್ಯದ ಮೂಲಕ ನೀಡಿದ ಕನಕದಾಸರು ಇಂದಿನ ಯುವ ಪೀಳಿಗೆಗೆ ಮಾದರಿ. ಶ್ರಧ್ಧೆಯಿಂದ ಅಧ್ಯಯನಶೀಲತೆ ಮಾಡಿ, ಜೀವನ ಪ್ರೀತಿಯನ್ನು ಗಳಿಸಲು ಕನಕನ ನಡೆ ನುಡಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ವಿದ್ವಾಂಸ ಡಾ.ಪಿ. ಬೆಟ್ಟೇಗೌಡ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸ್ಪರ್ಧೆಯಲ್ಲಿ ಓದು, ಸಂವಾದ, ಗಾಯನ, ರಸಪ್ರಶ್ನೆಗಳನ್ನು ಆಯೋಜಿಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾರ್ಥನಗರ, ಕುವೆಂಪುನಗರ, ಎಸ್‌ ಡಿಎಂ ಮಹಿಳಾ ಕಾಲೇಜು, ನಟರಾಜ ಮಹಿಳಾ ಕಾಲೇಜು, ಶಾರದ ವಿಲಾಸ ಕಾಲೇಜು, ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜುಗಳಿಂದ 200 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದ ಸಂಚಾಲಕಿ ಡಾ. ತ್ರಿವೇಣಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದಾ, ಸಹಾಯಕ ಪ್ರಾಧ್ಯಾಪಕರಾದ ಡಾ.ಜಿ. ಪ್ರಸಾದ್ ಮೂರ್ತಿ, ಡಾ.ಕೆ.ಎನ್. ಗಿರೀಶ್‌ ಇದ್ದರು. ಡಾ. ಅರುಣ್‌ ಕುಮಾರ್‌ ನಿರೂಪಿಸಿದರು. ಬಿ.ಎನ್. ಮಾರುತಿಪ್ರಸನ್ನ ವಂದಿಸಿದರು.ಕನಕ ಸಾಹಿತ್ಯವನ್ನು ಅರ್ಥ ಮಾಡಿಕೊಂಡಾಗ ಕನಕ ಸಾಹಿತ್ಯ ನಂದಾದೀಪದಂತೆ- ದರ್ಪಣದಂತೆ ಕನ್ನಡ ಸಾಹಿತ್ಯದ ಮೇರು ಕೃತಿಗಳಾಗಿ ಕಾಣುತ್ತವೆ. ಈ ದಿಸೆಯಲ್ಲಿ ಕನಕದಾಸರ ಸಾಹಿತ್ಯ ಓದು ಯುವ ಮನಸ್ಸುಗಳಿಗೆ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತವೆ.- ಡಾ.ಪಿ. ಬೆಟ್ಟೇಗೌಡ, ವಿದ್ವಾಂಸ