1857ರಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪಟ್ಟಣದ ವೀರ ಬಾಬಾಸಾಹೇಬ ಭಾವೆಯವರ ಅರಮನೆ ಪಕ್ಕದಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಂದೆ ಇರುವ ವಿದ್ಯುತ್ ಕಂಬ ಶಿಥಿಲಗೊಂಡು ಸುಮಾರು ವರ್ಷ ಗತಿಸಿದರೂ ಸಹ ಹೆಸ್ಕಾಂ ಕಂಬ ಬದಲಾವಣೆ ಮಾಡಿಲ್ಲ. ಅಧಿಕಾರಿಗಳು ಈ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ವಿದ್ಯುತ್ ಕಂಬ ಬೀಳುವ ಪರಿಸ್ಥಿತಿಯಲ್ಲಿ ಇದ್ದರೂ ಅಧಿಕಾರಿಗಳು ಮೌನ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದ1857ರಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪಟ್ಟಣದ ವೀರ ಬಾಬಾಸಾಹೇಬ ಭಾವೆಯವರ ಅರಮನೆ ಪಕ್ಕದಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಂದೆ ಇರುವ ವಿದ್ಯುತ್ ಕಂಬ ಶಿಥಿಲಗೊಂಡು ಸುಮಾರು ವರ್ಷ ಗತಿಸಿದರೂ ಸಹ ಹೆಸ್ಕಾಂ ಕಂಬ ಬದಲಾವಣೆ ಮಾಡಿಲ್ಲ. ಅಧಿಕಾರಿಗಳು ಈ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಪ್ರತಿ ದಿವಸ ಶಾಲೆಗೆ ಬರುವ ನೂರಾರು ವಿದ್ಯಾರ್ಥಿಗಳು ಶಾಲೆಗೆ ಪಕ್ಕದಲ್ಲಿರುವ ಈ ಕಂಬ ಶಿಥಿಲಗೊಂಡಿದೆ. ಮೇಲಾಗಿ ವಿದ್ಯಾರ್ಥಿಗಳು ಆಟ ಆಡುವ ಮೈದಾನದ ಸಮೀಪದಲ್ಲೇ ಈ ಕಂಬ ಇರುವುದರಿಂದ ವಿದ್ಯಾರ್ಥಿಗಳು ಜೀವ ಭಯದಲ್ಲಿ ಆಟ ಆಡುವ ಸ್ಥಿತಿ ಇದೆ.ಶಿಕ್ಷಕರು ಮೌನ ಏಕೆ?:
ಶಾಲೆಯ ಮುಂದೆ ಈ ರೀತಿ ಶಿಥಿಲಗೊಂಡ ವಿದ್ಯುತ್ ಕಂಬ ಇದ್ದರೂ ಕೂಡ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಏಕೆ ಮೌನ ಆಗಿದ್ದಾರೆ ಎಂಬ ಪ್ರಶ್ನೆಯೂ ವಿದ್ಯಾರ್ಥಿಗಳ ಪಾಲಕರನ್ನು ಕಾಡುತ್ತಿದೆ.ಪ್ರತಿ ಬಡಾವಣೆಗೆ ಒಬ್ಬರಿಂದ ಇಬ್ಬರು ಲೈನ್‌ಮನ್ ಇರುತ್ತಾರೆ. ಅವರ ಮೇಲೆ ಸೂಪರ್‌ವೈಸರ್ ಇದ್ದರೂ ಈ ಕಂಬಗಳನ್ನು ಸರಿಪಡಿಸಲು ಯಾಕೆ ಸಾಧ್ಯವಾಗಿಲ್ಲ. ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಇಂಥ ಸಮಸ್ಯೆ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಕಂಬ ಬದಲಿಸಿ:ಶಾಲೆಯ ಮುಖ್ಯೋಪಾಧ್ಯಾಯರು ಜೂನ್ ತಿಂಗಳಲ್ಲಿಯೇ ಕಂಬ ಮತ್ತು ತಂತಿಗಳನ್ನು ಸರಿಪಡಿಸಬೇಕೆಂದು ಹೆಸ್ಕಾಂಗೆ ಹೇಳಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಹೆಸ್ಕಾಂ ಅಧಿಕಾರಿಗಳು ತುರ್ತು ಕ್ರಮಕೈಗೊಂಡು ಜೀವ ಬಲಿ ಪಡೆಯುವ ಮೊದಲು ಈ ಕಂಬವನ್ನು ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಹೆಸ್ಕಾಂ ಅಧಿಕಾರಿಗಳು ಹೊಣೆಯಾಗಬೇಕಾದೀತು.
ನಮ್ಮ ಶಾಲೆಯ ಮುಂದಿನ ಶಿಥಲಗೊಂಡ ಕಂಬ ಮತ್ತು ಮರಗಳಲ್ಲಿ ಸಿಕ್ಕಿರುವ ವಿದ್ಯುತ್ ತಂತಿಗಳನ್ನು ಸರಿ ಮಾಡಬೇಕೆಂದು 6 ತಿಂಗಳ ಹಿಂದೆ ಹೆಸ್ಕಾಂ ಅಧಿಕಾರಿಗಳಗೆ ಮನವಿ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.ಎಸ್.ಬಿ. ಹರಿಯಣ್ಣವರ, ಶಾಲೆಯ ಮುಖ್ಯೋಪಾಧ್ಯಾಯಿನಿ
ಈ ವಿದ್ಯುತ್ ಕಂಬ ಬದಲಾವಣೆ ಮಾಡಲು ಕ್ರಿಯಾ ಯೋಜನೆ ಮಾಡಲಾಗಿದೆ. ಕಂಬ ಮತ್ತು ವಿದ್ಯುತ್ ತಂತಿಗಳನ್ನು 2 ದಿನದಲ್ಲಿ ಸರಿಪಡಿಸಲಾಗುವುದು.ಎಚ್.ಎಂ. ಖುದವಂದ, ಹೆಸ್ಕಾಂ ಅಧಿಕಾರಿ
ಅಧಿಕಾರಿಗಳು ಬೇಗ ಕಂಬ ಮತ್ತು ವಿದ್ಯುತ್ ತಂತಿಗಳನ್ನು ಸರಿ ಮಾಡದಿದ್ದರೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು.ಬಸವರಾಜ ತಾವರೆ, ಜಿಲ್ಲಾ ಜಯ ಕರ್ನಾಟಕ ಸಂಘಟನೆ ಮುಖಂಡ