ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ತಮ್ಮ ಅನುದಾನದಲ್ಲಿ ಶಿರಾ ಪಟ್ಟಣ ಸೇರಿದಂತೆ ವಿವಿಧ ಕಡೆ ನಿರ್ಮಿಸಿರುವ ಹೈಟೆಕ್‌ ಶಾಲೆಗಳನ್ನು ಫೆ. 3ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ತಮ್ಮ ಅನುದಾನದಲ್ಲಿ ಶಿರಾ ಪಟ್ಟಣ ಸೇರಿದಂತೆ ವಿವಿಧ ಕಡೆ ನಿರ್ಮಿಸಿರುವ ಹೈಟೆಕ್‌ ಶಾಲೆಗಳನ್ನು ಫೆ. 3ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಅಬಿವೃದ್ಧಿಯಾಗಬೇಕು. ಬಡ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ ತಮ್ಮ ಹುಟ್ಟು ಹಬ್ಬದಂದು ಸುಮಾರು ೫ ಕೋಟಿ ವೆಚ್ಚದ ನೂತನ ಹೈಟೆಕ್ ಶಾಲೆಯನ್ನು ಉದ್ಘಾಟಿಸುತ್ತಿದ್ದಾರೆ. ಗುಣಮಟ್ಟದ ಶಾಲಾ ಕಟ್ಟಡ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗಿದೆ ಎಂದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ, ದಿಶಾ ಕಮಿಟಿ ಸದಸ್ಯ ಮದಲೂರು ಮೂರ್ತಿ ಮಾಸ್ಟರ್ , ನಗರಸಭೆ ಸದಸ್ಯೆ ಉಮಾ ವಿಜಯರಾಜ್ , ನಗರ ಬಿಜೆಪಿ ಅಧ್ಯಕ್ಷ ಗಿರಿಧರ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಕುಮಾರ್ ಮಾಸ್ಟರ್, ಪದ್ಮ ಮಂಜುನಾಥ್, ಈರಣ್ಣ ಪಟೇಲ್, ನಾಗರಾಜ್ ಗೌಡ, ಬೊಪ್ಪರಾಯಪ್ಪ, ಗೌಡಪ್ಪ, ಹನುಮಂತನಾಯ್ಕ, ಭಾಸ್ಕರ್, ಸ್ನೇಹಪ್ರಿಯ ಶಿವು, ಹರೀಶ್, ನಾಗರತ್ನಮ್ಮ ಇತರರಿದ್ದರು.