ಅರ್ಧಕ್ಕೆ ನಿಂತ ಹೈಟೆಕ್‌ ಶೌಚಾಲಯ ಕಾಮಗಾರಿ

| Published : Mar 23 2025, 01:35 AM IST

ಸಾರಾಂಶ

ಕೆಆರ್‌ಐಡಿಎಲ್‌ ಈಗಾಗಲೆ ಬೇಸ್‌ಮೆಂಟ್ ಕಾಮಗಾರಿ ಮುಗಿಸಿಕೊಟ್ಟಿದ್ದು ಇನ್ನುಳಿದ ಕ್ಯಾಬೀನ್ ಹಾಕುವುದು, ಪ್ಲಂಬಿಂಗ್, ಟೈಲ್ಸ್, ಟ್ಯಾಂಕ್‌, ವಿದ್ಯುತ್ ಮೋಟರ್ ಸೇರಿದಂತೆ ವಿವಿಧ ಕೆಲಸ ಬಾಕಿಯಿದೆ. ಕೂಡಲೆ ಗುತ್ತೆದಾರರು ಶೌಚಾಲಯದ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ಕುಷ್ಟಗಿ:

ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಖಮುನಿ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ನಿರ್ಮಿಸಿರುತ್ತಿರುವ ಹೈಟೆಕ್ ಶೌಚಾಲಯ ಆಮೆಗತಿಯಲ್ಲಿ ನಡೆಯುತ್ತಿದ್ದು ಕಳೆದ ಒಂದು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.

2023-24ನೇ ಸಾಲಿನ ಸಮುದಾಯ ನೈರ್ಮಲ್ಯ ಶೌಚಾಲಯ ಸಂಕೀರ್ಣ ಯೋಜನೆಯಡಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಶೌಚಾಲಯದ ಕಾಮಗಾರಿ ಸ್ಥಗಿತಗೊಂಡಿದ್ದು ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೆಆರ್‌ಐಡಿಎಲ್‌ ಈಗಾಗಲೆ ಬೇಸ್‌ಮೆಂಟ್ ಕಾಮಗಾರಿ ಮುಗಿಸಿಕೊಟ್ಟಿದ್ದು ಇನ್ನುಳಿದ ಕ್ಯಾಬೀನ್ ಹಾಕುವುದು, ಪ್ಲಂಬಿಂಗ್, ಟೈಲ್ಸ್, ಟ್ಯಾಂಕ್‌, ವಿದ್ಯುತ್ ಮೋಟರ್ ಸೇರಿದಂತೆ ವಿವಿಧ ಕೆಲಸ ಬಾಕಿಯಿದೆ. ಕೂಡಲೆ ಗುತ್ತೆದಾರರು ಶೌಚಾಲಯದ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ಈ ಕುರಿತು ಮಾಹಿತಿ ನೀಡಿರುವ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಗುತ್ತಿಗೆದಾರರಿಗೆ ಶೀಘ್ರ ಕಾಮಗಾರಿ ಮುಗಿಸುವಂತೆ ಹೇಳಲಾಗಿದೆ. ಅವರು ಇನ್ನೊಂದೆಡೆ ಕಾಮಗಾರಿ ಆರಂಭಿಸಿದ್ದರಿಂದ ವಿಳಂಬವಾಗಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಿಕೊಡುತ್ತೇನೆ ಎಂದು ಹೇಳಿದರು ತಿಳಿಸಿದ್ದಾರೆ.

ನಮ್ಮ ಇಲಾಖೆಯಿಂದ ಹೈಟೆಕ್‌ ಶೌಚಾಲಯ ಕಾಮಗಾರಿಗೆ ಬೇಸ್‌ಮೆಂಟ್‌ ಮಾಡಿಕೊಟ್ಟಿದ್ದು ಉಳಿದ ಕಾಮಗಾರಿ ಗುತ್ತಿಗೆ ಪಡೆದವರು ಮಾಡಿಕೊಡಬೇಕಿದೆ ಎಂದು ಕೆಆರ್‌ಐಟಿಎಲ್‌ ಎಂಜಿನಿಯರ್‌ ಇರ್ಫಾನ್‌ ತಿಳಿಸಿದ್ದಾರೆ.ಹೈಟೆಕ್‌ ಶೌಚಾಲಯದ ಕಾಮಗಾರಿಗೆ ಬೇಕಾದ ಸಾಮಗ್ರಿಗಳು ಎರಡ್ಮೂರು ದಿನಗಳಲ್ಲಿ ಬರಲಿದ್ದು ಶೀಘ್ರವೇ ಕಾಮಗಾರಿ ಆರಂಭಿಸಿ 20 ದಿನಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಎಂಜಿನಿಯರ್ ಗುರುರಾಜ ತಿಳಿಸಿದ್ದಾರೆ.