ಚಿತ್ತಾಪುರ ಪಥ ಸಂಚಲನಕ್ಕೆ ಹೈಕೋರ್ಟ್‌ ಷರತ್ತುಬದ್ಧ ಅನುಮತಿ

| Published : Nov 14 2025, 01:15 AM IST

ಸಾರಾಂಶ

ಕಡೆಗೂ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನಕ್ಕೆ ಅನುಮತಿ ದೊರಕಿದೆ. ಕಳೆದ ಅ. 19ರಿಂದ ಶುರುವಾಗಿದ್ದ ಈ ಜಿದ್ದಾಜಿದ್ದಿ ಹಾಗೂ ಜಟಾಪಟಿ, 1 ತಿಂಗಳ ಕಾನೂನು ಸಮರ ನ. 16ರ ಪಥ ಸಂಚಲನಕ್ಕೆ ಹೈಕೋರ್ಟ್‌ ಷರತ್ತುಬದ್ಧ ಅನುಮತಿಯೊಂದಿಗೆ ಕೊನೆಗೊಂಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಡೆಗೂ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನಕ್ಕೆ ಅನುಮತಿ ದೊರಕಿದೆ. ಕಳೆದ ಅ. 19ರಿಂದ ಶುರುವಾಗಿದ್ದ ಈ ಜಿದ್ದಾಜಿದ್ದಿ ಹಾಗೂ ಜಟಾಪಟಿ, 1 ತಿಂಗಳ ಕಾನೂನು ಸಮರ ನ. 16ರ ಪಥ ಸಂಚಲನಕ್ಕೆ ಹೈಕೋರ್ಟ್‌ ಷರತ್ತುಬದ್ಧ ಅನುಮತಿಯೊಂದಿಗೆ ಕೊನೆಗೊಂಡಿದೆ.

ಹೈಕೋರ್ಟ್‌ಗೆ ಸಂಘ ಸಲ್ಲಿಸಿದ್ದ ಅರ್ಜಿಯಲ್ಲಿ ಚಿತ್ತಾಪುರದಲ್ಲಿ 850 ಮಂದಿಗೆ ಪಥ ಸಂಚಲನಕ್ಕೆ ಅನುಮತಿ ಕೋರಿತ್ತಾದರೂ ಹೈಕೋರ್ಟ್‌ ಮಾತ್ರ 300 ಗಣವೇಶಧಾರಿಗಳು ಭಾಗವಹಿಸಲು ಮಾತ್ರ ಅವಕಾಶ ಕೊಟ್ಟು ಅನುಮತಿಸಿದೆ.

ತೀರ್ಪಿಗೂ ಮುನ್ನವೇ ಅವಕಾಶ: ನ.16 ರಂದು ಚಿತ್ತಾಪೂರದಲ್ಲಿ ಆರೆಸ್ಸೆಸ್‌ ಪಥ ಸಂಚಲನಕ್ಕೆ ಷರತ್ತು ಬದ್ಧ ತೀಪ್ರು ಹೊರಬೀಳುವ ಮುನ್ನವೇ ಪಥ ಸಂಚಲನ ನಡೆಯಲಿರುವ ಚಿತ್ತಾಪುರ ತಹಶೀಲ್ದಾರ್‌ ನಾಗಯ್ಯ ಇವರು ಪಥ ಸಂಚಲನಕ್ಕೆ ಷರತ್ತು ಬದ್ಧ ಅನುಮತಿ ನೀಡಿದ್ದರು. ತಹಸೀಲ್ದಾರ್‌ ಅನುಮತಿ ಪತ್ರವನ್ನು ಅಡ್ವೋಕೇಟ್ ಜನರಲ್‌ ಶಶಿಕಿರಣ ಶೆಟ್ಟಿಯವರು ಹೈಕೋರ್ಟ್‌ಗೆ ಸಲ್ಲಿಸಿದರು.

50 ಬ್ಯಾಂಡ್‌ ವೃಂದ: ಪಥಸಂಚಲನದಲ್ಲಿ 300 ಜನ ಗಣವೇಶಧಾರಿಗಳು, 50 ಜನ ಬ್ಯಾಂಡ್ ಬಾರಿಸುವರು, 350 ಜನ ಭಾಗಿಯಾಗಲು ಅನುಮತಿ ಸಿಕ್ಕಿದೆ. ಮಧ್ಯಾಹ್ನ 3.30 ರಿಂದ ಸಂಜೆ 5.45 ರೊಳಗೆ ಪಥಸಂಚಲನ ಮುಗಿಸಲು ಸೂಚನೆ ಇದೆ. ಪಥಸಂಚಲನದಲ್ಲಿ ಕೇವಲ ಸ್ಥಳೀಯರು ಮಾತ್ರ ಭಾಗಿಯಾಗಲಿದ್ದಾರೆಂದು ಅರುಣ ಶ್ಯಾಮ್‌ ಹೇಳಿದ್ದಾರೆ. ನಾವು ಸಂಘದ ಪರವಾಗಿ 800 ಜನಕ್ಕೆ ಪಥಸಂಚಲನದಲ್ಲಿ ಭಾಗಿಯಾಗಲು ಅನುಮತಿ ಕೇಳಿದ್ದೇವು, ಆದರೆ ಜಿಲ್ಲಾಡಳಿತ 350 ಜನಕ್ಕೆ ಮಾತ್ರ ಅವಕಾಶ ನೀಡಿದೆ. ಪಥಸಂಚಲನಕ್ಕೆ ಅವಕಾಶ ಸಿಕ್ಕಿರೋದು ಖುಷಿ ನೀಡಿದೆ ಎಂದು ಅರುಣ ಶ್ಯಾಮ್‌ ಹೇಳಿದರು.

ಪಥಸಂಚಲನದಲ್ಲಿ ಯಾರ ವಿರುದ್ಧ, ಯಾರ ಪರ ಘೋಷಣೆ ಕೂಗುವುದಿಲ್ಲ, ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಶತಮಾನೋತ್ಸವ ಆಚರಿಸುತ್ತಿದ್ದೇವೆ. ದೇಶದ ಇತರೆಡೆ ಪಥಸಂಚಲನ ಮಾಡಿದ ಹಾಗೇ ಚಿತ್ತಾಪುರದಲ್ಲಿ ಸಹ ಶಾಂತಿಯುತವಾಗಿ ಪಥಸಂಚಲನ ಮಾಡುತ್ತೇವೆ. ಪಥಸಂಚಲನ ಮಾಡಲು ಅವಕಾಶ ನೀಡಿದ ಜಿಲ್ಲಾಡಳಿತ, ತಾಲೂಕಾಡಳಿತ, ಪೊಲೀಸ್ ಇಲಾಖೆ, ಕೋರ್ಟ್‌ಗೆ ಧನ್ಯವಾದಗಳನ್ನ ಸಲ್ಲಿಸುತ್ತೇವೆಂದೂ ವಕೀಲರಾದ ಅರುಣ ಶ್ಯಾಮ್‌ ಹೇಳಿದರುಚಿತ್ತಾಪುರದಲ್ಲಿ ಶಾಂತಿಯುತ ಪಥ ಸಂಚಲನ: ಆರೆಸ್ಸೆಸ್‌ ಕಲಬುರಗಿ ಹೈಕೋರ್ಟ್ ಪೀಠದಿಂದ ಆರೆಸ್ಸೆಸ್ ಪಥ ಸಂಚಲನಕ್ಕೆ ಅನುಮತಿ ದೊರಕದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಆರೆಸ್ಸೆಸ್‌ ಪರ ಅರ್ಜಿದಾರ, ಸಂಘಧ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್, ಸುಧೀರ್ಘ ಒಂದು ತಿಂಗಳ ನಂತರ ಬಿಕ್ಕಟ್ಟು ಬಗೆಹರಿದಿದೆ. ನಂ.16ರಂದು ಶಾಂತಿಯುತವಾಗಿ ಪಥ ಸಂಚಲನ ಮಾಡುತ್ತೇವೆ. ನ್ಯಾಯಾಲಯ ಮತ್ತು ಜಿಲ್ಲಾಡಳಿತ ವಿಧಿಸಿರುವ ಶರತ್ತಿಗೆ ಅನುಗುಣವಾಗಿಯೇ ಪಥ ಸಂಚಲನ ಮಾಡುತ್ತೇವೆಂದು ಹೇಳಿದ್ದಾರೆ.ಉಳಿದ ಅರ್ಜಿದಾರರಿಗೂ ಅವಕಾಶ ಕೊಡುವುದಾದರೆ ಕೊಡಲಿ ನಮ್ಮ ಅಭ್ಯಂತರ ಇಲ್ಲ, ನಾವು ಮೊದಲು ಹೇಳಿದ್ದೆವು. ಈಗಲೂ ಹೇಳುತ್ತೇವೆ ಸ್ಥಳೀಯರೇ ಈ ಪಥ ಸಂಚಲದಲ್ಲಿ ಪಾಲ್ಗೊಳ್ಳುತ್ತೇವೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ತೃಪ್ತಿ ಇದೆ ಎಂದು ಆರೆಸ್ಸೆಸ್‌ ಪರ ಅರ್ಜಿದಾರ ಅಶೋಕ್ ಪಾಟೀಲ್ ಹೇಳಿದರು.