ಯಲಬುರ್ಗಾ: ಸತತ ಪರಿಶ್ರಮದಿಂದ ಮಾತ್ರ ಉನ್ನತ ಮಟ್ಟದ ಸಾಧನೆ ಸಾಧ್ಯ ಎಂದು ಕೊಪ್ಪಳ ವಿವಿ ಕುಲಪತಿ ಡಾ. ಎಸ್.ವಿ. ಡಾಣಿ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬಿಎ,ಬಿಕಾಂ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರ್ಕಾರಗಳು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸಲು ಅನೇಕ ಯೋಜನೆ ಜಾರಿಗೊಳಿಸಿವೆ. ವಿದ್ಯಾರ್ಥಿಗಳು ಓದಿನಲ್ಲಿ ಸತತ ಪ್ರಯತ್ನ, ಕ್ರಿಯಾಶೀಲತೆ ಹಾಗೂ ಕಠಿಣ ಪರಿಶ್ರಮ ಶ್ರದ್ಧೆ ರೂಢಿಸಿಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ತಿಳಿಯಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಜತೆಗೆ ಉತ್ತಮ ನಾಗರಿಕನಾಗಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಮಾಜಿ ಸೈನಿಕ ಎಸ್. ಪುಂಡಪ್ಪ ಅಳುವಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ದೇಶಪ್ರೇಮದ ಮನೋಭಾವ ಬೆಳೆಸಿಕೊಳ್ಳಬೇಕು. ಅಧ್ಯಯನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳಾದ ಪ್ರಕಾಶ್, ಪೂಜಾ ನಿರೂಪಿಸಿದರು. ಭಾಗ್ಯಾಲಕ್ಷ್ಮಿ ವಂದಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಡಾ. ತಿಮ್ಮಾರೆಡ್ಡಿ, ಡಾ. ನಾಗಪ್ಪ ಹೂವಿನಬಾವಿ, ಡಾ. ದೇವರಾಜ, ಡಾ. ಈರಮ್ಮ, ಡಾ. ಕುಮಾರಸ್ವಾಮಿ, ಡಾ. ರಾಜಣ್ಣ, ಸುರೇಶ. ಎನ್., ಪರಶುರಾಮ, ಡಾ. ದೇವಪ್ಪ, ಶಂಕರ ರಾಠೋಡ, ತಿಮ್ಮಪ್ಪ, ಗವಿಸಿದ್ದಪ್ಪ, ರವಿ, ಕಾವ್ಯ, ಕರೀಷ್ಮಾ, ಫಮೀದಾ ಸೇರಿದಂತೆ ಮತ್ತಿತರರು ಇದ್ದರು.